AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smartphone ಉತ್ಪಾದನೆ ವಿಯೆಟ್ನಾಂನಿಂದ ಭಾರತಕ್ಕೆ ಶಿಫ್ಟ್ ಮಾಡಲು ಸ್ಯಾಮ್ಸಂಗ್ ರೆಡಿ!

ಸ್ಯಾಮ್ಸಂಗ್ ತನ್ನ ಉತ್ಪಾದನೆಯ ಬಹುಪಾಲು ಭಾಗವನ್ನು ವಿಯೆಟ್ನಾಂ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ ಎನ್ನಲಾಗಿದೆ. ದೇಶದಲ್ಲಿ 40 ಬಿಲಿಯನ್ ಮೌಲ್ಯದ ಸಾಧನಗಳನ್ನು ತಯಾರಿಸಲು ಸ್ಯಾಮ್‌ಸಂಗ್ ಯೋಜಿಸಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. “ಪಿಎಲ್‌ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯಡಿ ಭಾರತಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಸ್ಯಾಮ್‌ಸಂಗ್ ತನ್ನ ಉತ್ಪಾದನಾ ಮಾರ್ಗಗಳನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಸ್ಯಾಮ್‌ಸಂಗ್​ನ ಈ ಕ್ರಮ ವಿಯೆಟ್ನಾಂನಂತಹ ವಿವಿಧ ದೇಶಗಳಲ್ಲಿರುವ ಉತ್ಪಾದನಾ ಘಟಕಗಳ ಸಾಮರ್ಥ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದು ಕಾರ್ಯಗತವಾದಲ್ಲಿ, […]

Smartphone ಉತ್ಪಾದನೆ ವಿಯೆಟ್ನಾಂನಿಂದ ಭಾರತಕ್ಕೆ ಶಿಫ್ಟ್ ಮಾಡಲು ಸ್ಯಾಮ್ಸಂಗ್ ರೆಡಿ!
ಸಾಧು ಶ್ರೀನಾಥ್​
|

Updated on:Aug 18, 2020 | 5:37 PM

Share

ಸ್ಯಾಮ್ಸಂಗ್ ತನ್ನ ಉತ್ಪಾದನೆಯ ಬಹುಪಾಲು ಭಾಗವನ್ನು ವಿಯೆಟ್ನಾಂ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ ಎನ್ನಲಾಗಿದೆ. ದೇಶದಲ್ಲಿ 40 ಬಿಲಿಯನ್ ಮೌಲ್ಯದ ಸಾಧನಗಳನ್ನು ತಯಾರಿಸಲು ಸ್ಯಾಮ್‌ಸಂಗ್ ಯೋಜಿಸಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

“ಪಿಎಲ್‌ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯಡಿ ಭಾರತಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಸ್ಯಾಮ್‌ಸಂಗ್ ತನ್ನ ಉತ್ಪಾದನಾ ಮಾರ್ಗಗಳನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಸ್ಯಾಮ್‌ಸಂಗ್​ನ ಈ ಕ್ರಮ ವಿಯೆಟ್ನಾಂನಂತಹ ವಿವಿಧ ದೇಶಗಳಲ್ಲಿರುವ ಉತ್ಪಾದನಾ ಘಟಕಗಳ ಸಾಮರ್ಥ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ.

ಇದು ಕಾರ್ಯಗತವಾದಲ್ಲಿ, ಭಾರತದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು ಸ್ಯಾಮ್‌ಸಂಗ್‌ನ ಬಹು ದೊಡ್ಡ ಯೋಜನೆಯಾಗಿದೆ. ಸ್ಯಾಮ್‌ಸಂಗ್ ಪ್ರಸ್ತುತ ನೋಯ್ಡಾದಲ್ಲಿ ತನ್ನ ಅತಿದೊಡ್ಡ ಉತ್ಪಾದನಾ ಘಟಕವನ್ನು ಹೊಂದಿದ್ದು, ಅಲ್ಲಿ ಅದು ಭಾರತದಲ್ಲಿ ಮಾರಾಟ ಮಾಡುವ ಎಲ್ಲಾ ಫೋನ್‌ಗಳನ್ನು ತಯಾರಿಸುತ್ತಿದೆ.

ಕಂಪನಿಯು ತನ್ನ ಉತ್ಪಾದಕಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಹೇರಳವಾಗಿ ರಫ್ತು ಮಾಡುವ ಗುರಿ ಹೊಂದಿದೆ. ಜೊತೆಗೆ ಭಾರತದಲ್ಲಿ ಕಾರ್ಮಿಕ ವೆಚ್ಚಗಳು ಅತ್ಯಂತ ಕಡಿಮೆ ಇರುವುದರಿಂದ ಸ್ಯಾಮ್‌ಸಂಗ್ ತನ್ನ ಉತ್ಪದನಾ ಘಟಕಗಳನ್ನು ಭಾರತದಲ್ಲಿ ನಿರ್ಮಿಸಲು ಯೋಚಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:ಚೀನಾಕ್ಕೆ ಮತ್ತೊಂದು ಹೊಡೆತ! 24 ದೈತ್ಯ ಕಂಪನಿಗಳು ಭಾರತಕ್ಕೆ ಬರಲು ರೆಡಿ

Published On - 5:26 pm, Tue, 18 August 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!