ಶಿಂಧೆ ಬಣ ಮತ್ತು ಚುನಾವಣಾ ಆಯೋಗದ ನಡುವೆ ₹2,000 ಕೋಟಿ ಡೀಲ್ ನಡೆದಿದೆ: ಸಂಜಯ್ ರಾವುತ್ ಆರೋಪ

|

Updated on: Feb 19, 2023 | 1:18 PM

ಶಿವಸೇನಾ ಹೆಸರು ಮತ್ತು ಅದರ ಚಿಹ್ನೆ ಪಡೆಯಲು ₹ 2000 ಕೋಟಿ ಡೀಲ್ ನಡೆದಿರುವ ಬಗ್ಗೆ ನನಗೆ ವಿಶ್ವಾಸಾರ್ಹ ಮಾಹಿತಿ ಇದೆ. ಇದು ಪ್ರಾಥಮಿಕ ಅಂಕಿ ಅಂಶವಾಗಿದೆ ಮತ್ತು 100 ರಷ್ಟು ಸತ್ಯವಾಗಿದೆ. ಶೀಘ್ರದಲ್ಲೇ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ ಎಂದ ಸಂಜಯ್ ರಾವುತ್

ಶಿಂಧೆ ಬಣ ಮತ್ತು ಚುನಾವಣಾ ಆಯೋಗದ ನಡುವೆ ₹2,000 ಕೋಟಿ ಡೀಲ್ ನಡೆದಿದೆ: ಸಂಜಯ್ ರಾವುತ್ ಆರೋಪ
ಸಂಜಯ್ ರಾವುತ್
Follow us on

ಶಿವಸೇನಾ (UBT) ನಾಯಕ ಸಂಜಯ್ ರಾವುತ್ (Sanjay Raut)ಭಾನುವಾರ ಶಿವಸೇನಾದ (Shiv sena) ಹೆಸರು ಮತ್ತು ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು ₹ 2,000 ಕೋಟಿ ವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ₹2,000 ಕೋಟಿ ಎಂಬುದು ಪ್ರಾಥಮಿಕ ಅಂಕಿ ಅಂಶ ಮತ್ತು ಇದು 100 ಪ್ರತಿಶತ ಸತ್ಯ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಪುರಾವೆ ಇದೆ. ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುವೆ ಎಂದ ಅವರುಡಳಿತಕ್ಕೆ ಹತ್ತಿರವಿರುವ ಬಿಲ್ಡರ್ ತನ್ನೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನಾ ಎಂದು ಭಾರತೀಯ ಚುನಾವಣಾ ಆಯೋಗ (ECI) ಗುರುತಿಸಿದ ರೀತಿ ನ್ಯಾಯವಲ್ಲ ಅದು “ವ್ಯವಹಾರ” ಇದುವರೆಗೆ ಆ ಪ್ರಕರಣದಲ್ಲಿ ₹2,000 ಕೋಟಿ ವ್ಯವಹಾರ ನಡೆದಿದೆ. ಇದು ನನ್ನ ಪ್ರಾಥಮಿಕ ಊಹೆ. ಇದು ನನ್ನ ಎಫ್‌ಐಆರ್. ಈ ನಿರ್ಧಾರವನ್ನು ಖರೀದಿಸಲಾಗಿದೆ” ಎಂದು ರಾಜ್ಯಸಭಾ ಸದಸ್ಯರೂ ಆದ ರಾವುತ್ ಹೇಳಿದ್ದಾರೆ.


ಶಾಸಕರೊಬ್ಬರನ್ನು ₹ 50 ಕೋಟಿಗೆ ಕೊಳ್ಳಲು ₹ 100 ಕೋಟಿಗೆ ಬಿಡ್‌ ಮಾಡಿ ಸಂಸದರೊಬ್ಬರನ್ನು ಕೊಳ್ಳಲು ₹ 1 ಕೋಟಿಗೆ ಬಿಡ್‌ ಮಾಡಿ ನಮ್ಮ ಕೌನ್ಸಿಲರ್‌ ಮತ್ತು ಶಾಖಾ ಪ್ರಮುಖರನ್ನು ₹ 1 ಕೋಟಿಗೆ ಬಿಡ್‌ ಮಾಡುವ ಸರ್ಕಾರ, ನಾಯಕ ಮತ್ತು ನಿರ್ಲಜ್ಜರ ಗುಂಪು, ನೀವು ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಖರೀದಿಸಲು ಅವರು ಎಷ್ಟು ಬಿಡ್ ಮಾಡಬಹುದು ಎಂದು ಊಹಿಸಿ. ನನ್ನ ಅರಿವಿನ ಪ್ರಕಾರ ರ ಇದು ₹2000 ಕೋಟಿ. ಆದಾಗ್ಯೂ, ಶಿಂಧೆ ಪಾಳೆಯದ ಶಾಸಕ ಸದಾ ಸರ್ವಂಕರ್ ಈ ಆರೋಪ ತಳ್ಳಿ ಹಾಕಿದ್ದು ಸಂಜಯ್ ರಾವುತ್ ಕ್ಯಾಷಿಯರ್ ಆಗಿದ್ದಾರೆಯೇ ಎಂದು ಕೇಳಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ನಿಂತು ಶಿವನ ಭಕ್ತರಿಗೆ ಬಿಯರ್ ಬಾಟಲಿಗಳನ್ನು ಹಂಚುತ್ತಿದ್ದ ಯುವಕನ ಬಂಧನ

ಸಂಘಟನೆಯ ನಿಯಂತ್ರಣಕ್ಕಾಗಿ ಸುದೀರ್ಘ ಹೋರಾಟದ ಕುರಿತು 78 ಪುಟಗಳ ಆದೇಶದಲ್ಲಿ, ಚುನಾವಣಾ ಆಯೋಗ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನಾ ಎಂದು ಗುರುತಿಸಿತು ಮತ್ತು ಉದ್ಧವ್ ಠಾಕ್ರೆ ಬಣವು ತನಗೆ ನಿಗದಿಪಡಿಸಿದ “ಜ್ವಲಿಸುವ ಜ್ಯೋತಿ” ಮತದಾನದ ಚಿಹ್ನೆಯನ್ನು ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣೆ ಪೂರ್ಣಗೊಳ್ಳುವವರೆಗೆ ಇರಿಸಿಕೊಳ್ಳಲು ಅವಕಾಶ ನೀಡಿತು.
ಚುನಾವಣಾ ಆಯೋಗದ ನಿರ್ಧಾರವು ಒಪ್ಪಂದವಾಗಿದೆ ಎಂದು ರಾವುತ್ ಆರೋಪಿಸಿದ್ದಾರೆ. ಶಿವಸೇನಾ ಹೆಸರು ಮತ್ತು ಅದರ ಚಿಹ್ನೆ ಪಡೆಯಲು ₹ 2000 ಕೋಟಿ ಡೀಲ್ ನಡೆದಿರುವ ಬಗ್ಗೆ ನನಗೆ ವಿಶ್ವಾಸಾರ್ಹ ಮಾಹಿತಿ ಇದೆ. ಇದು ಪ್ರಾಥಮಿಕ ಅಂಕಿ ಅಂಶವಾಗಿದೆ ಮತ್ತು 100 ರಷ್ಟು ಸತ್ಯವಾಗಿದೆ. ಶೀಘ್ರದಲ್ಲೇ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ. ದೇಶದ ಇತಿಹಾಸದಲ್ಲಿಹಿಂದೆಂದೂ ಈ ರೀತಿ ನಡೆದಿಲ್ಲ. ” ಎಂದು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ