ಚೆನ್ನೈ, ಸೆಪ್ಟೆಂಬರ್ 4: ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ವಿರುದ್ಧ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸುವಂತೆ ಕೋರಿ ಕಾನೂನು ಹಕ್ಕುಗಳ ವೀಕ್ಷಣಾಲಯಕ್ಕೆ (ಎಲ್‌ಆರ್‌ಒ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾನೂನು ವಿಭಾಗ ನೋಟಿಸ್ ನೀಡಿದೆ. ಡಿಎಂಕೆ ಸಚಿವರನ್ನು ಬಂಧಿಸುವಂತೆ ಕೋರಿ ವಕೀಲ ಉಮೇಶ್ ಶರ್ಮಾ ಅವರು ಲೀಗಲ್ ನೋಟಿಸ್ ನೀಡಿದ್ದಾರೆ. ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗದಂತೆ’ ಎಂದು ಸಚಿವ ಉದಯನಿಧಿ ಸ್ಟಾಲಿನ್ ಅವರು ಹೇಳಿದ್ದರು.
ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ 153A/B, 295 A, 298, 505 ಅಡಿಯಲ್ಲಿ ಕ್ರಮಕೈಗೊಳ್ಳುವಂತೆ ವಕೀಲ ಉಮೇಶ್ ಶರ್ಮಾ ಪೋಲಿಸ್ ಕಮಿಷನರ್‌ಗೆ 7 ದಿನಗಳ ನೋಟಿಸ್ ನೀಡಿದ್ದಾರೆ. ಒಂದು ವೇಳೆ ಕ್ರಮಕೈಗೊಳ್ಳುವಲ್ಲಿ ವಿಫಲವಾದರೆ ಎಸ್‌ಸಿಯಲ್ಲಿ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
Adv Umesh Sharma issued notice to CP @chennaipolice_ pressing FIR, arrest of @Udhaystalin for #SanatanaDharma statmt.
CP is put on 7 days notice to act against dynanst #RiceBag #DimwitUdhay; failing to do so petition will be moved in SC seeking action u/s 153A/B, 295A, 298, 505 pic.twitter.com/83zwNLk2xp— Legal Rights Observatory- LRO (@LegalLro) September 4, 2023
ಇದನ್ನೂ ಓದಿ: ಧರ್ಮ ಎಂಬುದು ತಮ್ಮ ನ್ಯೂನತೆಗಳನ್ನು ಮರೆಮಾಚುವ ಆಯುಧವಾಗಿದೆ: ಎಂಕೆ ಸ್ಟಾಲಿನ್
ಚೆನ್ನೈನಲ್ಲಿ ಆಯೋಜಿಸಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ ಉದಯನಿಧಿ ಸ್ಟಾಲಿನ್, ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗದಂತೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದಿದ್ದರು. ಬಳಿಕ ಅವರನ್ನು ವಿವಿಧ ಬಲಪಂಥೀಯ ಸಂಘಟನೆಗಳು ಟೀಕಿಸಲು ಪ್ರಾರಂಭಿಸಿದವು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 pm, Mon, 4 September 23