ಉಜ್ಜಯಿನಿ ದೇವಸ್ಥಾನದಲ್ಲಿ ಬ್ಯಾರಿಕೇಡ್ ಮುರಿದು, ತೇಜಸ್ವಿ ಸೂರ್ಯ ಬೆಂಬಲಿಗರಿಂದ ಸೆಕ್ಯುರಿಟಿಗಳ ಮೇಲೆ ಹಲ್ಲೆ

| Updated By: ಸುಷ್ಮಾ ಚಕ್ರೆ

Updated on: Aug 11, 2022 | 11:33 AM

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶ್ರಾವಣ ಮಾಸದ ಪ್ರಯುಕ್ತ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ತೇಜಸ್ವಿ ಸೂರ್ಯ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಆದರೆ, ಅವರ ಬೆಂಬಲಿಗರಿಗೆ ಪ್ರವೇಶ ನಿರಾಕರಿಸಿದ್ದರಿಂದ ಗಲಾಟೆ ಉಂಟಾಯಿತು.

ಉಜ್ಜಯಿನಿ ದೇವಸ್ಥಾನದಲ್ಲಿ ಬ್ಯಾರಿಕೇಡ್ ಮುರಿದು, ತೇಜಸ್ವಿ ಸೂರ್ಯ ಬೆಂಬಲಿಗರಿಂದ ಸೆಕ್ಯುರಿಟಿಗಳ ಮೇಲೆ ಹಲ್ಲೆ
ತೇಜಸ್ವಿ ಸೂರ್ಯ ಬೆಂಬಲಿಗರಿಂದ ಸೆಕ್ಯುರಿಟಿಗಳ ಮೇಲೆ ಹಲ್ಲೆ
Follow us on

ಉಜ್ಜಯಿನಿ: ಬಿಜೆಪಿ ಯುವ ಮೋರ್ಚಾಗೆ ಸೇರಿದ, ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರ ಬೆಂಬಲಿಗರಾದ ಕೆಲವು ಕಾರ್ಯಕರ್ತರಿಗೆ ಬುಧವಾರ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ (Ujjain Mahakaleshwar Temple) ಆವರಣದೊಳಗೆ ಪ್ರವೇಶ ನಿರಾಕರಿಸಿದ್ದರಿಂದ ದೊಡ್ಡ ಗಲಾಟೆಯೇ ನಡೆದಿದೆ. ತಮಗೆ ದೇವಸ್ಥಾನದೊಳಗೆ ಪ್ರವೇಶ ನೀಡಬೇಕೆಂದು ರೊಚ್ಚಿಗೆದ್ದ ಬಿಜೆಪಿ ಯುವ ಮೋರ್ಚಾ (Yuva Morcha) ಕಾರ್ಯಕರ್ತರು ದೇವಸ್ಥಾನದ ಬ್ಯಾರಿಕೇಡ್​​ಗಳನ್ನು ಬೀಳಿಸಿ, ಒಳಗೆ ನುಗ್ಗಿದ್ದು, ಸೆಕ್ಯುರಿಟಿಗಳ ಮೇಲೆ ಹಲ್ಲೆ ನಡೆಸಿ, ಅರ್ಚಕರನ್ನೂ ತಳ್ಳಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಜೆಪಿ ಯುವ ಘಟಕದ ಅಧ್ಯಕ್ಷರೂ ಆಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ಈ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದರು. ತೇಜಸ್ವಿ ಸೂರ್ಯ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಆದರೆ, ಅವರ ಹಿಂದೆ ಸೇರಿದ್ದ ಅವರ ಕೆಲವು ಬೆಂಬಲಿಗರಿಗೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ತೇಜಸ್ವಿ ಸೂರ್ಯ ಅವರ ಬೆಂಬಲಿಗರು ದೇವಾಲಯದ ಆವರಣದೊಳಗೆ ಗದ್ದಲವನ್ನು ಸೃಷ್ಟಿಸಿದರು.

ಇದನ್ನೂ ಓದಿ
ಗೃಹಸಚಿವರ ನಿವಾಸದ ಮುಂದೆ ಪ್ರತಿಭಟನೆಗಿಳಿದ ಎಬಿವಿಪಿ ಕಾರ್ಯಕರ್ತರನ್ನು ಪೋಲಿಸರು ಬಲವಂತದಿಂದ ಹೊರಹಾಕಿದರು
ಮಂಗಳೂರು: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದ ಸಂಸದ ತೇಜಸ್ವೀ ಸೂರ್ಯ ಅಲ್ಲಿಂದ ಓಟಕಿತ್ತರು!
ತೇಜಸ್ವಿ ಸೂರ್ಯ ಹೇಳಿಕೆಗೆ ಚಕ್ರವರ್ತಿ ಸೂಲಿಬೆಲೆ ತೀಕ್ಷ್ಣ ತಿರುಗೇಟು: ನಮ್ಮ ರಕ್ಷಣೆ ನಾವೇ ಮಾಡೋದಾದರೆ ಸರ್ಕಾರ ಯಾಕೆ ಬೇಕು?

ದೇವಸ್ಥಾನದ ಆವರಣವು ಭಕ್ತರಿಂದ ತುಂಬಿ ತುಳುಕುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶ್ರಾವಣ ಮಾಸವಾದ್ದರಿಂದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಹೀಗಾಗಿ, ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುವ ಉದ್ದೇಶದಿಂದ ತೇಜಸ್ವಿ ಸೂರ್ಯ ಅವರ ಬೆಂಬಲಿಗರಿಗೆ ನೇರವಾಗಿ ದೇವಸ್ಥಾನದೊಳಗೆ ಪ್ರವೇಶಿಸಲು ನಿರಾಕರಿಸಲಾಯಿತು. ಸ್ಥಳೀಯ ವರದಿಗಳ ಪ್ರಕಾರ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿದಾಗ, ಅವರನ್ನೂ ತಳ್ಳಿ ಹಲ್ಲೆ ನಡೆಸಲಾಯಿತು.

ಇದನ್ನೂ ಓದಿ: ತೇಜಸ್ವಿ ಸೂರ್ಯ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ಸಂಸದರಿಗೆ ಹೂವು ನೀಡಲು ಬಂದ ಕಾರ್ಯಕರ್ತೆ ಪೊಲೀಸರ ವಶಕ್ಕೆ

ಮಹಾಕಾಳೇಶ್ವರ ದೇವಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಮತ್ತು ಶಿವಭಕ್ತರ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇಗುಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ, ವಿಶೇಷವಾಗಿ ಶ್ರಾವಣ ಮಾಸದಲ್ಲಿ ದೇವಸ್ಥಾನದ ಆವರಣವು ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಗರ್ಭಗುಡಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಕೆಲವೊಮ್ಮೆ ರಾಜಕಾರಣಿಗಳು ಮತ್ತು ವಿಐಪಿಗಳಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಿದ ಉದಾಹರಣೆಗಳೂ ಇವೆ. ಇತ್ತೀಚೆಗೆ ಇಂದೋರ್ ಶಾಸಕ ರಮೇಶ್ ಮೆಂಡೋಲಾ ಅವರು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿದ್ದರು. ಆದರೆ, ಇದಾದ ನಂತರ ದೇವಸ್ಥಾನದ ಆಡಳಿತವು ಪ್ರೋಟೋಕಾಲ್ ಅಧಿಕಾರಿ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:29 am, Thu, 11 August 22