ವಿಸ್ತೃತ ಪೀಠಕ್ಕೆ ಶಬರಿಮಲೆ ಪ್ರಕರಣ ವರ್ಗಾವಣೆ

|

Updated on: Nov 15, 2019 | 11:16 PM

ದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಅಂತಾ 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲಾ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ನಿನ್ನೆ ತೀರ್ಪು ನೀಡಿದೆ. ತೀರ್ಪಿನಲ್ಲಿ ಮರುಪರಿಶೀಲನಾ ಅರ್ಜಿಗಳನ್ನ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿಲ್ಲ. ಬದಲಾಗಿ ಮರುಪರಿಶೀಲನಾ ಅರ್ಜಿ ಹಾಗೂ ರಿಟ್ ಅರ್ಜಿಗಳು ಪೆಂಡಿಂಗ್ ಇದ್ದು. ಹಕ್ಕು ವರ್ಸಸ್ ನಂಬಿಕೆಯ ವಿಷಯಗಳನ್ನ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಯಾವ ವಿಚಾರದ ಬಗ್ಗೆ ‘ವಿಸ್ತೃತ’ ವಿಚಾರಣೆ..? ದೇಶದಲ್ಲಿರುವ ಜಾತ್ಯತೀತ ಆಚರಣೆ ಹಾಗೂ ಧಾರ್ಮಿಕ ನಂಬಿಕೆಗಳ ನಡುವೆ […]

ವಿಸ್ತೃತ ಪೀಠಕ್ಕೆ ಶಬರಿಮಲೆ ಪ್ರಕರಣ ವರ್ಗಾವಣೆ
Follow us on

ದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಅಂತಾ 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲಾ ಅರ್ಜಿಗಳ ಬಗ್ಗೆ ಸುಪ್ರೀಂಕೋರ್ಟ್ ನಿನ್ನೆ ತೀರ್ಪು ನೀಡಿದೆ. ತೀರ್ಪಿನಲ್ಲಿ ಮರುಪರಿಶೀಲನಾ ಅರ್ಜಿಗಳನ್ನ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿಲ್ಲ. ಬದಲಾಗಿ ಮರುಪರಿಶೀಲನಾ ಅರ್ಜಿ ಹಾಗೂ ರಿಟ್ ಅರ್ಜಿಗಳು ಪೆಂಡಿಂಗ್ ಇದ್ದು. ಹಕ್ಕು ವರ್ಸಸ್ ನಂಬಿಕೆಯ ವಿಷಯಗಳನ್ನ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ಯಾವ ವಿಚಾರದ ಬಗ್ಗೆ ‘ವಿಸ್ತೃತ’ ವಿಚಾರಣೆ..?
ದೇಶದಲ್ಲಿರುವ ಜಾತ್ಯತೀತ ಆಚರಣೆ ಹಾಗೂ ಧಾರ್ಮಿಕ ನಂಬಿಕೆಗಳ ನಡುವೆ ವಿರೋಧಾಭಾಸಗಳಿವೆ. ಇದರ ಬಗ್ಗೆ ವಿಸ್ತೃತ ಪೀಠ ವಿಚಾರಣೆ ನಡೆಸಬೇಕು. ಸಂವಿಧಾನದ 25 ಹಾಗೂ 26ನೇ ವಿಧಿಯ ಬಗ್ಗೆಯೂ ವಿಚಾರಣೆ ನಡೆಸಬೇಕು. ಕೇರಳದಲ್ಲಿ ದೇವಸ್ಥಾನದ ಆಡಳಿತ ನಿರ್ವಹಣೆಗೆ ಇರುವ ಕೇರಳ ಹಿಂದೂ ಸ್ಥಳಗಳ ಸಾರ್ವಜನಿಕ ಪೂಜೆ ನಿಯಮ 1965ರ ಬಗ್ಗೆಯೂ ವಿಚಾರಣೆ ನಡೆಸಬೇಕು. ಇಸ್ಲಾಂ, ಪಾರ್ಸಿ ಧರ್ಮಗಳಲ್ಲಿ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ನಿರ್ಬಂಧ ಇದ್ದು ಅದರ ಬಗ್ಗೆಯೂ ವಿಚಾರಣೆ ನಡೆಯಲಿದೆ.

ಸಂವಿಧಾನದ 26(2)(ಬಿ) ಅಡಿ ಹಿಂದೂ ಪಂಥದ ಎಂದು ಹೇಳಿರುವುದರ ಅರ್ಥದ ಕುರಿತು ವಿಸ್ತೃತ ಪೀಠ ವಿಚಾರಣೆ ನಡೆಸಲಿದೆ. ನಿರ್ದಿಷ್ಟ ಆಚರಣೆಯು ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವೇ ಅನ್ನೋ ಪ್ರಶ್ನೆಯ ಬಗ್ಗೆ ವಿಚಾರಣೆ ನಡೆಸಬೇಕು.

ಅಗತ್ಯ ಧಾರ್ಮಿಕ ಸಂಪ್ರದಾಯಗಳಿಗೆ ಸಂವಿಧಾನದ 26ನೇ ವಿಧಿಯ ಅಡಿ ರಕ್ಷಣೆ ಇದೆಯೇ ಅನ್ನೋ ಪ್ರಶ್ನೆ ಸೇರಿದಂತೆ 7 ಪ್ರಶ್ನೆಗಳ ಬಗ್ಗೆ ವಿಸ್ತೃತ ಪೀಠ ವಿಚಾರಣೆ ನಡೆಸಲಿದೆ. ಕೇವಲ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಸೀಮಿತವಾಗಿ ಈ ವಿಚಾರಣೆ ನಡೆಯಲ್ಲ ಅನ್ನೋದು ಮತ್ತೊಂದು ಮಹತ್ವದ ಅಂಶ.

ಇನ್ನು ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ಕೊಟ್ಟಿರುವ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಅಂದ್ರೆ ಈಗಲೂ ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದು. ಅಲ್ಲದೆ ನಾಳೆಯಿಂದ ಎರಡು ದಿನಗಳ ಕಾಲ ದೇಗುಲದ ಬಾಗಿಲು ತೆರೆಯಲಿದೆ. ಈ ಹಿನ್ನೆಲೆ ಪ್ರವೇಶ ಕೋರಿ ಈಗಾಗಲೇ 36 ಮಹಿಳೆಯರು ಆನ್​ಲೈನ್​ನಲ್ಲಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಆದ್ರೆ, ನಿನ್ನೆಯ ಸುಪ್ರೀಂ ತೀರ್ಪನ್ನ ಕಂಪ್ಲೀಟಾಗಿ ಅಧ್ಯಯನ ನಡೆಸಲಿರೋ ಕೇರಳ ಸರ್ಕಾರ, ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್, ಮಹಿಳೆಯರಿಗೆ ಪ್ರವೇಶ ನೀಡುವುದರ ಪರವಾದ ನಿಲುವು ಹೊಂದಿದ್ದಾರೆ. ಅಟ್​​ ದಿ ಸೇಮ್ ಟೈಂ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೂಡ ಸರ್ಕಾರದ ಮೇಲಿದೆ.

Published On - 11:11 pm, Fri, 15 November 19