ಶಬರಿಮಲೆ ದೇಗುಲದ ಬಾಗಿಲು ಓಪನ್, ಮಹಿಳೆಯರಿಗೆ ಸಿಗದ ಪ್ರವೇಶ

|

Updated on: Nov 17, 2019 | 10:52 AM

ಹರಿಹರ ಪುತ್ರ… ಮಣಿಕಂಠನ ಮಹಿಮೆಯಾಗಿರೋ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ದೇಗುಲದ ಬಾಗಿಲು ತೆರೆಯಲಾಗಿದೆ. ಆದ್ರೆ, ಮಣಿಕಂಠನನ್ನ ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬೇಕು ಅನ್ನುವಷ್ಟರಲ್ಲಿ ಮಹಿಳೆಯರಿಗೆ ಕೇರಳ ಸರ್ಕಾರ ಶಾಕ್ ಕೊಟ್ಟಿದೆ. ಶಬರಿಮಲೆ ಭಕ್ತಿಗೆ ಹೆಚ್ಚು ಖ್ಯಾತಿ ಪಡೆದ ಪವಿತ್ರ ಸ್ಥಳ. ವಿವಾದದಿಂದಲೂ ಸುದ್ದಿ ಮಾಡ್ತಿರೋ ಮಣಿಕಂಠನ ಸ್ಥಾನ. ಮಹಿಳೆಯರಿಗೆ ಅಯ್ಯಪ್ಪನ ದೇಗುಲಕ್ಕೆ ಪ್ರವೇಶವಿಲ್ಲ ಅನ್ನೋ ಕಾರಣಕ್ಕೆ ಎದುರಾಗಿದ್ದ ಸಮಸ್ಯೆ ನಿವಾರಣೆ ಆಗೋ ಲಕ್ಷಣಗಳೇ ಕಾಣ್ತಿಲ್ಲ. ಅದ್ರಲ್ಲೂ, ಮಂಡಲ ಪೂಜೆ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ದೇವಾಲಯದ ಬಾಗಿಲನ್ನ ನಿನ್ನೆ […]

ಶಬರಿಮಲೆ ದೇಗುಲದ ಬಾಗಿಲು ಓಪನ್, ಮಹಿಳೆಯರಿಗೆ ಸಿಗದ ಪ್ರವೇಶ
Follow us on

ಹರಿಹರ ಪುತ್ರ… ಮಣಿಕಂಠನ ಮಹಿಮೆಯಾಗಿರೋ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ದೇಗುಲದ ಬಾಗಿಲು ತೆರೆಯಲಾಗಿದೆ. ಆದ್ರೆ, ಮಣಿಕಂಠನನ್ನ ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಬೇಕು ಅನ್ನುವಷ್ಟರಲ್ಲಿ ಮಹಿಳೆಯರಿಗೆ ಕೇರಳ ಸರ್ಕಾರ ಶಾಕ್ ಕೊಟ್ಟಿದೆ.

ಶಬರಿಮಲೆ ಭಕ್ತಿಗೆ ಹೆಚ್ಚು ಖ್ಯಾತಿ ಪಡೆದ ಪವಿತ್ರ ಸ್ಥಳ. ವಿವಾದದಿಂದಲೂ ಸುದ್ದಿ ಮಾಡ್ತಿರೋ ಮಣಿಕಂಠನ ಸ್ಥಾನ. ಮಹಿಳೆಯರಿಗೆ ಅಯ್ಯಪ್ಪನ ದೇಗುಲಕ್ಕೆ ಪ್ರವೇಶವಿಲ್ಲ ಅನ್ನೋ ಕಾರಣಕ್ಕೆ ಎದುರಾಗಿದ್ದ ಸಮಸ್ಯೆ ನಿವಾರಣೆ ಆಗೋ ಲಕ್ಷಣಗಳೇ ಕಾಣ್ತಿಲ್ಲ. ಅದ್ರಲ್ಲೂ, ಮಂಡಲ ಪೂಜೆ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ದೇವಾಲಯದ ಬಾಗಿಲನ್ನ ನಿನ್ನೆ ತೆರೆಯಲಾಗಿದೆ. ಸಾವಿರಾರು ಅಯ್ಯಪ್ಪ ಭಕ್ತರು ಹರಿಹರ ಪುತ್ರನ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಆದ್ರೆ, ಮಹಿಳೆಯರ ಪ್ರವೇಶಕ್ಕೆ ಮತ್ತೆ ವಿಘ್ನ ಎದುರಾಗಿದೆ.

ಶಬರಿಮಲೆ ಪ್ರವೇಶಕ್ಕೆ ಮಹಿಳಾ ಭಕ್ತರಿಗೆ ನಿರಾಕರಣೆ:
ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಆಂಧ್ರಪ್ರದೇಶದಿಂದ ಹತ್ತು ಮಂದಿ ಮಹಿಳಾ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಧಾವಿಸಿದ್ದಾರೆ. ಆದರೆ, ಈ ಭಕ್ತರ ದರ್ಶನಕ್ಕೆ ದೇವಸ್ವಂ ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ಹೀಗಾಗಿ, ಇಂದು ಮಹಿಳಾ ಹಕ್ಕು ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆಗೆ ಭೇಟಿ ನೀಡೋದಾಗಿ ಘೋಷಿಸಿದ್ದಾರೆ. ಮಹಿಳಾ ಭಕ್ತರು ಧಾವಿಸುವ ಸಾಧ್ಯತೆ ಇರೋ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಸುಮಾರು 10 ಸಾವಿರ ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.

ದೇಗುಲ ಪ್ರವೇಶಕ್ಕೆ ‘ಸುಪ್ರೀಂ’ ಅನುಮತಿ ಬೇಕು:
ಕಳೆದ ವರ್ಷ ಕೇರಳ ಸರ್ಕಾರ ಮಹಿಳಾ ಭಕ್ತರಿಗೆ ವಿಶೇಷ ಭದ್ರತೆ ಕಲ್ಪಿಸಿತ್ತು. ಈ ವರ್ಷ ಶಬರಿಮಲೆ ದೇಗುಲಕ್ಕೆ ಎಂಟ್ರಿ ಪಡೆಯಲು ಸುಪ್ರೀಂಕೋರ್ಟ್​ನ ಅನುಮತಿ ಪತ್ರ ತರುವಂತೆ ಕೇರಳ ಸರ್ಕಾರ ಸೂಚಿಸಿದೆ. ಮೂಲಗಳ ಪ್ರಕಾರ ಪಿಣರಾಯಿ ವಿಜಯನ್​ ಸಚಿವಾಲಯದ ಹಲವು ಸಚಿವರು, ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡದೇ ಕಾನೂನು ಸುವ್ಯವಸ್ಥೆ ಕೈಗೊಳ್ಳುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಶಬರಿಮಲೆ ದೇಗುಲ ಪ್ರವೇಶಿಸಿದ್ದ ಕೋಯಿಕ್ಕೋಡ್‌ನ ಕೊಯಿಲಾಂಡಿ ನಿವಾಸಿ ಬಿಂದು ಮತ್ತು ಮಲಪ್ಪುರಂನ ಅಂಗಡಿಪ್ಪುರಂ ನಿವಾಸಿ ಕನಕದುರ್ಗಾರಿಗೆ ಸರ್ಕಾರ ಭದ್ರತೆ ಒದಗಿಸಿತ್ತು. ಆದರೆ, ಈ ವರ್ಷವೂ ಭದ್ರತೆ ಒದಗಿಸಲಾಗದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಮಧ್ಯೆ, 2 ತಿಂಗಳ ಅವಧಿಯ ಶಬರಿಮಲೆ ತೀರ್ಥಯಾತ್ರೆ ಋತು ಶನಿವಾರ ಆರಂಭವಾಗಿದೆ. ನಿನ್ನೆ ಐದು ಗಂಟೆಗೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಗಿದ್ದು, ಭಕ್ತರು ಅಯ್ಯಪ್ಪ ಸನ್ನಿಧಿಗೆ ಮುಗಿ ಬಿದ್ದಿದ್ದಾರೆ.

Published On - 9:46 am, Sun, 17 November 19