AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ-ಶರದ್​ ‘ಮಹಾ’ ಮೀಟಿಂಗ್ ನಾಳೆಗೆ ಶಿಫ್ಟ್

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮಹಾ ಹೈಡ್ರಾಮಾವೇ ನಡೀತಿದೆ. ನಾವು ಸರ್ಕಾರ ರಚಿಸ್ತೀವಿ ಅಂತ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಪಕ್ಷಗಳು ಹೇಳ್ತಿದ್ರೂ, ಬಿಕ್ಕಟ್ಟು ಮಾತ್ರ ಇನ್ನೂ ಮುಗ್ದಿಲ್ಲ. ಮೂರು ಪಕ್ಷಗಳ ನಾಯಕರೊಂದಿಗಿನ ರಾಜ್ಯಪಾಲರ ಸಭೆ ರದ್ದುಗೊಂಡಿರೋದು ಒಂದ್ಕಡೆಯಾದ್ರೆ. ಶರದ್​ ಪವಾರ್ ಹಾಗೂ ಸೋನಿಯಾ ಗಾಂಧಿ ನಡುವಿನ ಸಭೆ ಕೂಡ ಪೋಸ್ಟ್​ಪೋನ್ ಆಗಿದೆ. ‘ಶಿವಸೇನೆ’ ಜೊತೆಗಿನ ಮೈತ್ರಿ ಕುರಿತು ಫೈನಲ್ ಡಿಸಿಷನ್: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅನ್ನೋ ಉದ್ದೇಶದೊಂದಿಗೆ ಶಿವಸೇನೆ ಜೊತೆ […]

ಸೋನಿಯಾ-ಶರದ್​ ‘ಮಹಾ’ ಮೀಟಿಂಗ್ ನಾಳೆಗೆ ಶಿಫ್ಟ್
ಸಾಧು ಶ್ರೀನಾಥ್​
|

Updated on: Nov 17, 2019 | 7:54 PM

Share

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮಹಾ ಹೈಡ್ರಾಮಾವೇ ನಡೀತಿದೆ. ನಾವು ಸರ್ಕಾರ ರಚಿಸ್ತೀವಿ ಅಂತ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಪಕ್ಷಗಳು ಹೇಳ್ತಿದ್ರೂ, ಬಿಕ್ಕಟ್ಟು ಮಾತ್ರ ಇನ್ನೂ ಮುಗ್ದಿಲ್ಲ. ಮೂರು ಪಕ್ಷಗಳ ನಾಯಕರೊಂದಿಗಿನ ರಾಜ್ಯಪಾಲರ ಸಭೆ ರದ್ದುಗೊಂಡಿರೋದು ಒಂದ್ಕಡೆಯಾದ್ರೆ. ಶರದ್​ ಪವಾರ್ ಹಾಗೂ ಸೋನಿಯಾ ಗಾಂಧಿ ನಡುವಿನ ಸಭೆ ಕೂಡ ಪೋಸ್ಟ್​ಪೋನ್ ಆಗಿದೆ.

‘ಶಿವಸೇನೆ’ ಜೊತೆಗಿನ ಮೈತ್ರಿ ಕುರಿತು ಫೈನಲ್ ಡಿಸಿಷನ್: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅನ್ನೋ ಉದ್ದೇಶದೊಂದಿಗೆ ಶಿವಸೇನೆ ಜೊತೆ ಕೈಜೋಡಿಸಲು ಎನ್​ಸಿಪಿ ಮತ್ತು ಕಾಂಗ್ರೆಸ್​ ಮುಂದಾಗಿದೆ. ಆದ್ರೆ, ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಸೋನಿಯಾ ಗಾಂಧಿ ಜೊತೆ ಇಂದು ಸಭೆ ನಿಗದಿಯಾಗಿತ್ತು. ಆದ್ರೆ, ದಿಢೀರ್ ಅಂತ ಆ ಸಭೆ ನಾಳೆಗೆ ಮುಂದೂಡಿಕೆಯಾಗಿದೆ. ನಾಳೆ ನಡೆಯೋ ಮಾತುಕತೆ ವೇಳೆ ಮಹಾ ಮೈತ್ರಿ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳೋ ಸಾಧ್ಯತೆ ದಟ್ಟವಾಗಿದೆ.

ವಿಪಕ್ಷಗಳ ಸಾಲಿನಲ್ಲಿ ಕೂರಲಿದ್ದಾರೆ ಶಿವಸೇನೆ ಸಂಸದರು! ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಹೊತ್ತಿದ ಬೆಂಕಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಗೆ ಎಳ್ಳು ನೀರು ಬಿಟ್ಟಿದೆ. ಇದ್ರ ಬೆನ್ನಲ್ಲೇ ಸಂಸತ್​ನ ಉಭಯ ಸದನಗಳಲ್ಲಿ ಶಿವಸೇನೆ ಸಂಸದರ ಆಸನ ವ್ಯವಸ್ಥೆ ಕೂಡ ಬದಲಾಗಿದೆ. ಮೈತ್ರಿ ಮುರಿದ ಹಿನ್ನೆಲೆ ಶಿವಸೇನೆ ಸಂಸದರ ಆಸನಗಳು ವಿರೋಧ ಪಕ್ಷಗಳ ಸಾಲಿಗೆ ಶಿಫ್ಟ್ ಆಗಿದೆ. ಅಂದ್ರೆ ನಾಳೆಯಿಂದ ಆರಂಭವಾಗಲಿರೋ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಶಿವಸೇನೆ ವಿಪಕ್ಷ ಸ್ಥಾನದಲ್ಲಿ ಕೂರಲಿದೆ.

ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮೀ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮೀ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ