ಪೊಲೀಸ್ ಅಧಿಕಾರಿಯ ಪತಿ ವಾಹನಕ್ಕೆ ಗುದ್ದಿದ ಯುವಕ ಪ್ರಾಣ ಕಳೆದುಕೊಂಡ
ಹೈದ್ರಾಬಾದ್: ಎಸ್ಐ ಕಿರುಕುಳ ತಾಳಲಾರದೆ ಕೆರೆಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ಮುರುಳಿ, ವಿಜಯವಾಡದಲ್ಲಿ 2ನೇ ವರ್ಷದ ಪದವಿ ಓದುತ್ತಿದ್ದ. ಹಗಲು ಕಾಲೇಜಲ್ಲಿ ಓದುತ್ತಾ ರಾತ್ರಿ ವೇಳೆ ಮುರುಳಿ ಟೀ ಸ್ಟಾಲ್ ನಡೆಸುತ್ತಿದ್ದ. ನಿನ್ನೆ ರಾತ್ರಿ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಮುರುಳಿಯ ಬೈಕ್ ಪಿಎಸ್ವೈ ಪತಿಯ ವಾಹನಕ್ಕೆ ತಾಗಿದೆ. ಹೀಗಾಗಿ ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಗನ್ನಾವರಂ ಮಹಿಳಾ ಪಿಎಸ್ಐ ನಾರಾಯಣಮ್ಮ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಕಿರುಕುಳ […]
ಹೈದ್ರಾಬಾದ್: ಎಸ್ಐ ಕಿರುಕುಳ ತಾಳಲಾರದೆ ಕೆರೆಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷ್ಣಾ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿ ಮುರುಳಿ, ವಿಜಯವಾಡದಲ್ಲಿ 2ನೇ ವರ್ಷದ ಪದವಿ ಓದುತ್ತಿದ್ದ. ಹಗಲು ಕಾಲೇಜಲ್ಲಿ ಓದುತ್ತಾ ರಾತ್ರಿ ವೇಳೆ ಮುರುಳಿ ಟೀ ಸ್ಟಾಲ್ ನಡೆಸುತ್ತಿದ್ದ. ನಿನ್ನೆ ರಾತ್ರಿ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಮುರುಳಿಯ ಬೈಕ್ ಪಿಎಸ್ವೈ ಪತಿಯ ವಾಹನಕ್ಕೆ ತಾಗಿದೆ. ಹೀಗಾಗಿ ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಗನ್ನಾವರಂ ಮಹಿಳಾ ಪಿಎಸ್ಐ ನಾರಾಯಣಮ್ಮ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ಕಿರುಕುಳ ತಾಳಲಾರದೆ ಆತ್ಮಹತ್ಯೆ: ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದು ಮುರುಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮೊದಲೇ ಸ್ನೇಹಿತರಿಗೆ ಫೋನ್ ಮಾಡಿ, ಆಡಿಯೋ ಕ್ಲಿಪ್ ಕಳುಹಿಸಿ ನಡೆದ ಘಟನೆಯನ್ನು ವಿವರಿಸಿದ್ದಾನೆ.
ಇಂದು ಗನ್ನಾವರಂನ ಕೆರೆಯಲ್ಲಿ ವಿದ್ಯಾರ್ಥಿ ಮುರುಳಿ ಶವ ಪತ್ತೆಯಾಗಿದ್ದು, ಗನ್ನಾವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.