Sabarimala Temple: ಜು.17ರಿಂದ 5 ದಿನ ಬಾಗಿಲು ತೆರೆಯಲಿರುವ ಶಬರಿಮಲೆ ದೇಗುಲ; ಕೊರೊನಾ ನೆಗೆಟಿವ್​ ರಿಪೋರ್ಟ್ ಕಡ್ಡಾಯ

| Updated By: Lakshmi Hegde

Updated on: Jul 11, 2021 | 8:59 AM

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗರಿಷ್ಠ 5000 ಭಕ್ತರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ಆಗಮಿಸುವವರು ಎರಡೂ ಡೋಸ್​ ಕೊವಿಡ್​ 19 ಲಸಿಕೆ ಸ್ವೀಕರಿಸಿ, ಅದರ ಪ್ರಮಾಣಪತ್ರ ಹೊಂದಿರಬೇಕು.

Sabarimala Temple: ಜು.17ರಿಂದ 5 ದಿನ ಬಾಗಿಲು ತೆರೆಯಲಿರುವ ಶಬರಿಮಲೆ ದೇಗುಲ; ಕೊರೊನಾ ನೆಗೆಟಿವ್​ ರಿಪೋರ್ಟ್ ಕಡ್ಡಾಯ
ಶಬರಿಮಲೆ ದೇಗುಲ
Follow us on

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಸಪೂಜೆ ಸಲುವಾಗಿ ಜು.17ರಿಂದ 21ರವರೆಗೆ (5ದಿನಗಳು) ಬಾಗಿಲು ತೆರೆಯಲಿದೆ. ಕೇರಳದಲ್ಲೀಗ ಮಲಯಾಳಂ ತಿಂಗಳು ನಡೆಯುತ್ತಿದ್ದು, ಅದರ ನಿಮಿತ್ತ 5 ದಿನಗಳ ಕಾಲ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇರಳ ಸರ್ಕಾರ ಶನಿವಾರ ಮಾಹಿತಿ ನೀಡಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗರಿಷ್ಠ 5000 ಭಕ್ತರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ಆಗಮಿಸುವವರು ಎರಡೂ ಡೋಸ್​ ಕೊವಿಡ್​ 19 ಲಸಿಕೆ ಸ್ವೀಕರಿಸಿ, ಅದರ ಪ್ರಮಾಣಪತ್ರ ಹೊಂದಿರಬೇಕು. 48 ಗಂಟೆಗಳ ಹಿಂದೆ ಪಡೆದ ಆರ್​ಟಿ-ಪಿಸಿಆರ್​ ನೆಗೆಟಿವ್​​ ರಿಪೋರ್ಟ್​ ತರಬೇಕು. ಈ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತದೆ ಎಂದೂ ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗೇ, ದೇಗುಲಕ್ಕೆ ಆಗಮಿಸಲು ಯಾತ್ರಿಕರು ಮೊದಲು ತಮ್ಮ ಲಸಿಕೆ ಪ್ರಮಾಣ ಪತ್ರ ಮತ್ತು ಆರ್​ಟಿ-ಪಿಸಿಆರ್​ ನೆಗೆಟಿವ್​ ವರದಿಯನ್ನು ವರ್ಚ್ಯುವಲ್​ ಕ್ಯೂ ಮೂಲಕ ನೀಡಿ, ಆನ್​ಲೈನ್​ನಲ್ಲಿ ಬುಕಿಂಗ್​ ಮಾಡಬೇಕಾಗುತ್ತದೆ ಎಂದೂ ಹೇಳಲಾಗಿದೆ.

ಕೊರೊನಾ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಮೇ ತಿಂಗಳಿಂದ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿತ್ತು. ಇದೀಗ 5 ದಿನಗಳ ಅವಕಾಶ ಸಿಕ್ಕರೂ ಕೇವಲ 5000 ಜನರಿಗೆ ಮಾತ್ರ ಅವಕಾಶ ಇರಲಿದೆ.

ಇದನ್ನೂ ಓದಿ: ರೈತರ ಹೊಲ ಗದ್ದೆ ಕಾಯಲೂ ಸೈ, ಕರಾವಳಿಯ ಬಂದರಿಗೂ ಜೈ; ಈ ಕತ್ತಾಳೆ ನಾರಿನ ಬಗ್ಗೆ ನಿಮಗೆಷ್ಟು ಗೊತ್ತು?

Sabarimala temple to be open for devotees From July 17