ಪಂಜಾಬಿನ ವಿದ್ಯುತ್ ಸ್ಥಾವರಗಳನ್ನು ಮುಚ್ಚಬೇಕೆಂದು ಮನವಿ ಸಲ್ಲಿಸಿದ ಕೇಜ್ರಿವಾಲ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್ , ಬಿಜೆಪಿ-ಎಸ್ಎಡಿ ನಾಯಕರು
ಪಂಜಾಬಿನಲ್ಲಿ ತಲೆದೋರಿರುವ ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಕಳೆದ ಕೆಲ ದಿನಗಳಿಂದ ಧ್ವನಿ ಎತ್ತುತ್ತಿರುವ ಸಿದ್ಧು ಅವರು, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಪಂಜಾಬ ತೀರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ದೆಹಲಿ ಸರ್ಕಾರ ಸ್ಥಾವರಗಳನನ್ನು ಮುಚ್ಚಿಸುವಂತೆ ಹೇಳಿರುವುದು ಅಕ್ಷಮ್ಯ ಎಂದಿದ್ದಾರೆ.
ಪಂಜಾಬ್ ಸೇರಿದಂತೆ ಮೂರು ರಾಜ್ಯಗಳಲ್ಲಿನ 10 ವಿದ್ಯುತ್ ಸ್ಥಾವರಗಳನ್ನು ಮುಚ್ಚಿಬೇಕೆಂದು ಸುಪ್ರೀಮ್ ಕೋರ್ಟ್ನಲ್ಲಿ ಮನವಿಯೊಂದನ್ನು ಸಲ್ಲಿಸಿ ನಂತರ ಹಿಂತೆಗೆದುಕೊಂಡ ದೆಹಲಿಯ ಆಪ್ ಸರ್ಕಾರವನ್ನು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ಧು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷ ಮತ್ತು ಶಿರೋಮಣಿ ಆಕಾಲಿ ದಲ್ ಪಕ್ಷಗಳು ಸಹ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರವನ್ನು ಖಂಡಿಸಿವೆ. ಅಂಥ ಮನವಿಯೊಂದನನ್ನು ಸಲ್ಲಿಸಿದ ಆಮ್ ಆದ್ಮಿ ಪಕ್ಷವು ಪಂಜಾಬಿನ ಹಿತಾಸಕ್ತಿಗಳ ವಿರುದ್ಧ ಷಡ್ಯಂತ್ರ ರೂಪಿಸಿದೆ ಎಂದು ಈ ಪಕ್ಷಗಳು ಹೇಳಿವೆ. ಪಂಜಾಬ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಕಲ್ಲಿದ್ದಿಲು ಇಂಧನವನ್ನು ಮೂಲವಾಗಿ ಬಳಸುವ 10 ವಿದ್ಯುತ್ ಸ್ಥಾವರಗಳು ಪರಿಸರ ಮಾಲಿನ್ಯ ಸೃಷ್ಟಿಸುತ್ತಿವೆ ಎಂದು ಆರೋಪಿಸಿ ಅವುಗಳನ್ನು ಮುಚ್ಚಬೇಕೆಂದು ದೆಹಲಿ ಸರ್ಕಾರ ಸುಪ್ರೀಮ್ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿತ್ತಲ್ಲದೆ ಸ್ಥಾವರಗಳು ಹೊರಸೂಸುವ ಹೊಗೆಯಲ್ಲಿನ ವಿಷಕಾರಿ ಅಂಶವನ್ನು ಕಡಿಮೆ ಮಾಡುವ ಫ್ಲೂ ಗ್ಯಾಸ್ ಡಿಸಲ್ಫರೈಸೇಷನ್ ತಂತ್ರಜ್ಞಾನವನ್ನು ಅಳವಡಿಸುವವರೆಗೆ ಅವು ಕಾರ್ಯ ನಿರ್ವಹಿಸುವುದನ್ನು ತಡೆಯಬೇಕು ಎಂದು ಮನವಿಯಲ್ಲಿ ಕೋರಿತ್ತು. ಆದರೆ, ಸದರಿ ಅರ್ಜಿಯನ್ನು ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಶುಕ್ರವಾರದಂದು ಹಿಂಪಡೆದಿದೆ.
ಪಂಜಾಬಿನಲ್ಲಿ ತಲೆದೋರಿರುವ ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಕಳೆದ ಕೆಲ ದಿನಗಳಿಂದ ಧ್ವನಿ ಎತ್ತುತ್ತಿರುವ ಸಿದ್ಧು ಅವರು, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಪಂಜಾಬ ತೀರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ದೆಹಲಿ ಸರ್ಕಾರ ಸ್ಥಾವರಗಳನನ್ನು ಮುಚ್ಚಿಸುವಂತೆ ಹೇಳಿರುವುದು ಅಕ್ಷಮ್ಯ ಎಂದಿದ್ದಾರೆ.
‘ಪಂಜಾಬನ್ನು ನಾಶಪಡಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಕೃತ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಪಂಜಾಬ ರಾಜ್ಯವು ವಿದ್ಯುತ್ಗೆ ಸಂಬಂಧಿಸಿದಂತೆ ಹಿಂದೆಂದೂ ಕಾಣದ ಗಂಭೀರ ಸ್ಥಿತಿಯಲ್ಲಿರುವಾಗ ಮತ್ತು ಭತ್ತದ ಸಸಿಗಳನ್ನು ನಾಟುವ ಈ ಸೀಸನ್ನಲ್ಲಿ ನಮ್ಮ ಜನ ಕುದಿಯುವ ಸೆಖೆಯಲ್ಲಿ ಕಂಗಾಲಾಗಿರುವಾಗ ಪಂಜಾಬಿನ ಜೀವನಾಡಿಯಾಗಿರುವ ಥರ್ಮಲ್ ಪ್ಲಾಂಟ್ಗಳನ್ನು ಮುಚ್ಚಿಸುವ ಹುನ್ನಾರ ದೆಹಲಿ ಸರ್ಕಾರ ಮಾಡುತ್ತಿದೆ,’ ಎಂದು ಸಿದ್ಧು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
Today, Forces bent-upon Punjab’s destruction are clearly visible … 1. Delhi Govt wants Punjab’s lifeline our Thermal Power Plants to shut down in middle of Punjab’s Power crisis leaving Punjabis helpless in this simmering heat & our Farmers suffer in this Paddy-sowing season !!
— Navjot Singh Sidhu (@sherryontopp) July 10, 2021
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ದೆಹಲಿಯನ್ನು ಉಳಿಸುವ ನೆಪದಲ್ಲಿ ಪಂಜಾಬಿನ ಥರ್ಮಲ್ ಪ್ಲಾಂಟ್ಗಳನ್ನು ಮುಚ್ಚಿಸುವ ಪ್ರಯತ್ನ ಮಾಡಿರುವರೆಂದು ಆರೋಪಿಸಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿದಿದ್ದಾರೆ. ದೆಹಲಿಯಲ್ಲಿ ಶನಿವಾರ ನೀಡಿದ ಹೇಳಿಕೆಯೊಂದರಲ್ಲಿ ಅವರು, ‘ಕೇಜ್ರಿವಾಲ್ ಅವರು ಪಂಜಾಬಿನ ಹಿತಾಸಕ್ತಿಗಳ ವಿರುದ್ಧ ಕುತಂತ್ರ ಹೂಡುತ್ತಿದ್ದಾರೆ, ಪಂಜಾಬನ್ನು ನಾಶಮಾಡುವ ಉದ್ದೇಶ ಅವರಿಗಿರುವಂತಿದೆ. ಪಂಜಾಬ್ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿರುವಾಗ ಕೇಜ್ರಿವಾಲ ಸರ್ಕಾರದ ಈ ಕ್ರಮ ಹೀನ ಮತ್ತು ಕ್ರಿಮಿನಲ್ ಅಲ್ಲದೆ ಮತ್ತೇನೂ ಅಲ್ಲ,’ ಎಂದು ಹೇಳಿದ್ದಾರೆ.
ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ದಲ್ಜಿತ್ ಸಿಂಗ್ ಚೀಮಾ ಅವರು, ಮನವಿಯನ್ನು ದಾಖಲಿಸುವ ಮೂಲಕ ಕೇಜ್ರಿವಾಲ ಪಂಜಾಬಿನ ಜನರನ್ನು ವಂಚಿಸಿದ್ದಾರೆಂದು ಹೇಳಿದ್ದಾರೆ. ರಾಜ್ಯದ ಪ್ರಸಕ್ತ ವಿದ್ಯುತ್ ಬಿಕ್ಕಟ್ಟನ್ನು ಮತ್ತಷ್ಟು ಹದಗೆಡಿಸುವ ದೊಡ್ಡ ಕುತಂತ್ರ ಅವರು ಮಾಡಿದ್ದಾರೆ ಎಂದು ಚೀಮಾ ಹೇಳಿದ್ದಾರೆ. ಲೋಡ್ ಶೆಡ್ಡಿಂಗ್ ಮತ್ತು ವೋಲ್ಟೇಜ್ನಲ್ಲಿ ಆಗುತ್ತಿರುವ ಏರಿಳಿತದಿಂದ ಪಂಜಾಬ ನಗರ ಮತ್ತು ಗ್ರಾಮೀಣ ಭಾಗಗಳ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
ತನ್ನ ಮತ್ತೊಂದು ಟ್ವೀಟ್ನಲ್ಲಿ ಸಿದ್ಧು ಅವರು ಈಗಿನ ಸ್ಥಿತಿಗೆ ಹಿಂದೆ ಅಧಿಕಾರದಲ್ಲಿದ್ದ ಎಸ್ಎಡಿ-ಬಿಜೆಪಿ ಸರ್ಕಾರವನ್ನು ದೂರಿದರು. ಬಾದಲ್ಗಳು ಥರ್ಮಲ್ ಪವರ್ ಪ್ಲಾಂಟ್ಗಳೊಂದಿಗೆ ಪಿಪಿಎ ಗಳನ್ನು ಸಹಿ ಮಾಡಿದರೆ , ಮಂಜಿತಾ (ಬಿಕ್ರಮ್ ಸಿಂಗ್) ಅವರಿ ನವೀಕರಿಸಬಹುದಾದ ಇಂಧನ ಖಾತೆಯ ಸಚಿವರಾಗಿ 25 ವರ್ಷಗಳ ಅವಧಿಗೆ ಸೋಲಾರ್ ಪವರ್ ಅನ್ನು ರೂ. 5.97 ರಿಂದ ರೂ. 17.91 ಪ್ರತಿ ಯುನಿಟ್ ಖರೀದಿಸುವ ಪಿಪಿಎಗೆ ಸಹಿ ಮಾಡಿ ಪಂಜಾಬನ್ನು ಕೊಳ್ಳೆ ಹೊಡೆದರು. ಸೋಲಾರ್ ಪವರ್ ದರ 2010ರಿಂದ ಪ್ರತಿ ವರ್ಷ ಶೇಕಡಾ 18ರಂತೆ ಕಡಿಮೆಯಗುತ್ತಿರುವುದು ಗೊತ್ತಿದ್ದರೂ ಅವರು ಪಿಪಿಎಗಳನ್ನು ಸಹಿ ಮಾಡಿದರು. ಪ್ರತಿ ಯೂನಿಟ್ ಸೋಲಾರ್ ದರ ಈಗ ರೂ. 1.99 ಮಾತ್ರ ಇದೆ,’ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.