ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಾಂ ಸಿಂಗ್ ಯಾದವ್​ ಆಸ್ಪತ್ರೆಗೆ ದಾಖಲು..

| Updated By: Lakshmi Hegde

Updated on: Jul 01, 2021 | 1:30 PM

Mulayam Singh Yadav: ಮುಲಾಯಾಂ ಸಿಂಗ್​ ಯಾದವ್​ ಕಳೆದ ಕೆಲವು ವರ್ಷಗಳಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಕಳೆದವರ್ಷವೂ ಕೂಡ ಅವರ ಯುರಿನರಿ ಟ್ರ್ಯಾಕ್​​ನಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಾಂ ಸಿಂಗ್ ಯಾದವ್​ ಆಸ್ಪತ್ರೆಗೆ ದಾಖಲು..
ಮುಲಾಯಾಂ ಸಿಂಗ್ ಯಾದವ್​
Follow us on

ದೆಹಲಿ: ಸಮಾಜವಾದಿ ಪಕ್ಷದ ಸಂಸ್ಥಾಪಕ, ವರಿಷ್ಠ ಮುಲಾಯಾಂ ಸಿಂಗ್​ ಯಾದವ್​ ಇಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 81ವರ್ಷದ ಮುಲಾಯಾಂ ಸಿಂಗ್​ ಯಾದವ್​ ಕೆಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು ಗುರ್​ಗಾಂವ್​ನ ಮೇದಾಂತಾ ಆಸ್ಪತ್ರೆಗೆ ಅವರನ್ನು ಅಡ್ಮಿಟ್ ಮಾಡಲಾಗಿದೆ. ಆಸ್ಪತ್ರೆಯಿಂದ ಯಾವುದೇ ಹೆಲ್ತ್​ ಬುಲೆಟಿನ್​ ಬಿಡುಗಡೆಯಾಗಿಲ್ಲ.

ಮುಲಾಯಾಂ ಸಿಂಗ್ ಯಾದವ್​ ಸಮಾಜವಾದಿ ಪಕ್ಷದ ಸಂಸ್ಥಾಪಕರಾಗಿದ್ದು, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1996ರ ಜೂ.1ರಿಂದ 1998ರ ಮಾರ್ಚ್​ 19ರವರೆಗೆ ಕೇಂದ್ರ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮುಲಾಯಾಂ ಸಿಂಗ್​ ಯಾದವ್​ ಕಳೆದ ಕೆಲವು ವರ್ಷಗಳಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಕಳೆದವರ್ಷವೂ ಕೂಡ ಅವರ ಯುರಿನರಿ ಟ್ರ್ಯಾಕ್​​ನಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ಸ್ವಲ್ಪ ದಿನಗಳ ಬಳಿಕ ಹೊಟ್ಟೆ ಊದಿಕೊಂಡು, ನೋವಿನಿಂದ ಬಳಲುತ್ತಿದ್ದ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಮುಲಾಯಾಂ ಸಿಂಗ್​ ಯಾದವ್​ ದೊಡ್ಡ ಕರುಳಿನಲ್ಲಿ ಸಮಸ್ಯೆಯಿದೆ ಎಂದು ಆಗ ವೈದ್ಯರು ಹೇಳಿದ್ದರು. ಕೊಲೊನೊಸ್ಕೊಪಿ ಮೂಲಕ ಕರುಳನ್ನು ಸ್ವಚ್ಛಗೊಳಿಸಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಮಾಡಲಾಗಿತ್ತು. ನಂತರ ಆರೋಗ್ಯದಲ್ಲಿ ಸುಧಾರಣೆಯೂ ಕಾಣಿಸಿತ್ತು. ಮುಲಾಯಾಂ ಸಿಂಗ್​ ಯಾದವ್​ ಆರೋಗ್ಯ ವಿಚಾರಿಸಲು ಸಮಾಜವಾದಿ ಪಕ್ಷದ ಗಣ್ಯರು ಮೇದಾಂತಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇವರ ಪುತ್ರ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್​ ಸದ್ಯ ಮುಂದಿನ ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಇನ್ನು ಚುನಾವಣೆಯಲ್ಲಿ ಯಾವುದೇ ದೊಡ್ಡ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Jaggesh’s Son Car Accident: ನಟ ಜಗ್ಗೇಶ್​ ಪುತ್ರ ಗುರುರಾಜ್​ ಇದ್ದ ಕಾರು ಅಪಘಾತ; ಹೈದರಾಬಾದ್​ ರಸ್ತೆಯಲ್ಲಿ ಅವಘಡ

Samajwadi Party Founder Mulayam Singh Yadav Hospitalised In Gurgaon