ಮಹಾರಾಷ್ಟ್ರದಲ್ಲಿ ಸೇತುವೆ ನಿರ್ಮಾಣದ ವೇಳೆ ಗರ್ಡರ್ ಲಾಂಚರ್ ಯಂತ್ರ ಕುಸಿದು 15 ಮಂದಿ ಸಾವು
ಸಮೃದ್ಧಿ ಮಹಾಮಾರ್ಗ ಮೂರನೇ ಹಂತದ ಹೆದ್ದಾರಿ ಕಾಮಗಾರಿ ವೇಳೆ ಭಾರಿ ಅವಘಡ ಸಂಭವಿಸಿದೆ. ಥಾಣೆ ಸಮೀಪದ ಶಹಾಪುರ ತಾಲೂಕಿನ ಸರ್ಲಾಂಬೆಯಲ್ಲಿ ಸೇತುವೆ ಕಾಮಗಾರಿ ವೇಳೆ ಗರ್ಡರ್ ಯಂತ್ರ ಕುಸಿದು ಬಿದ್ದಿದೆ.
ಥಾಣೆ, ಆಗಸ್ಟ್ 1: ಸಮೃದ್ಧಿ ಮಹಾಮಾರ್ಗ ಮೂರನೇ ಹಂತದ ಹೆದ್ದಾರಿ ಕಾಮಗಾರಿ ವೇಳೆ ಭಾರಿ ಅವಘಡ ಸಂಭವಿಸಿದೆ. ಥಾಣೆ ಸಮೀಪದ ಶಹಾಪುರ ತಾಲೂಕಿನ ಸರ್ಲಾಂಬೆಯಲ್ಲಿ ಸೇತುವೆ ಕಾಮಗಾರಿ ವೇಳೆ ಗರ್ಡರ್ ಯಂತ್ರ ಕುಸಿದು ಬಿದ್ದಿದೆ. ಇದರಿಂದ 15ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಈ ಅಹಿತಕರ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಸಮೃದ್ಧಿ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ಅಪಘಾತಕ್ಕೀಡಾಗಿತ್ತು. ಅಪಘಾತದ ನಂತರ, ಬಸ್‌ಗೆ ಬೆಂಕಿ ಹೊತ್ತಿಕೊಂಡಿತು ಮತ್ತು 25 ಪ್ರಯಾಣಿಕರು ಸಾವನ್ನಪ್ಪಿದರು. ಈ ಘಟನೆಯಿಂದ ಮಾಸುವ ಮುನ್ನವೇ ಸಮೃದ್ಧಿ ಹೆದ್ದಾರಿಯ ಶಹಾಪುರದಲ್ಲಿ ಭಾರಿ ಅಪಘಾತ ಸಂಭವಿಸಿದೆ. ಈವರೆಗೆ 15 ರಿಂದ 20 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕತ್ತಲಾಗಿದ್ದರಿಂದ ಯಂತ್ರಗಳ ಗರ್ಡರ್‌ಗಳ ಅಡಿಯಲ್ಲಿ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಅಥವಾ ಸತ್ತವರ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಅಸಾಧ್ಯ.
ಸಮೃದ್ಧಿ ಹೆದ್ದಾರಿಯ ಮೂರನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ರಾತ್ರಿಯೂ ಸಮೃದ್ಧಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವಾಗಲೇ ಈ ದುರ್ಘಟನೆ ನಡೆದಿದೆ. ಶಹಪುರ ಸರಳಂಬೆಯಲ್ಲಿ ಈ ಘಟನೆ ನಡೆದಿದೆ. ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಗರ್ಡರ್ ಯಂತ್ರ ಮತ್ತು ಸ್ಲ್ಯಾಬ್ ಸಂಪರ್ಕಿಸುವ ಕ್ರೇನ್ ನೂರಾರು ಅಡಿ ಎತ್ತರದಿಂದ ಕಾರ್ಮಿಕರ ಮೇಲೆ ಬಿದ್ದಿದೆ. ಶಹಪುರ ಉಪ ಜಿಲ್ಲಾ ಆಸ್ಪತ್ರೆಗೆ ಇದುವರೆಗೆ 15 ಮೃತದೇಹಗಳನ್ನು ತರಲಾಗಿದೆ. ಮೂರ್ನಾಲ್ಕು ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ದೇವೇಂದ್ರ ಫಡ್ನಿಸ್ ಅವರ ಮಹತ್ವದ ಯೋಜನೆ ಸಮೃದ್ಧಿ ಹೆದ್ದಾರಿಯ ಎರಡು ಹಂತಗಳು ಪ್ರಾರಂಭವಾಗಿವೆ. ಪ್ರಸ್ತುತ ಸಮೃದ್ಧಿ ಹೆದ್ದಾರಿಯು ನಾಗ್ಪುರದಿಂದ ಇಗತ್ಪುರಿಯವರೆಗೆ ಸಾಗುತ್ತಿದೆ. ಸಮೃದ್ಧಿ ಹೆದ್ದಾರಿಯ ಕೊನೆಯ ಮತ್ತು ಮೂರನೇ ಹಂತವು ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಇದು ನೂರು ಕಿಲೋಮೀಟರ್ಗಳಷ್ಟು ದೂರ ಇರಲಿದೆ. ಡಿಸೆಂಬರ್ 2022 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಶಿರಡಿ ಮತ್ತು ನಾಗ್ಪುರ ನಡುವಿನ 520 ಕಿಮೀ ಉದ್ದದ ಸಮೃದ್ಧಿ ಹೆದ್ದಾರಿಯ ಮೊದಲ ಹಂತವನ್ನು ಉದ್ಘಾಟಿಸಿದರು. ಅದರ ನಂತರ, ಎರಡನೇ ಹಂತದ ಯೋಜನೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಉದ್ಘಾಟಿಸಿದರು. ನಾಗಪುರದಿಂದ ಇಗತ್ಪುರಿ ತಾಲೂಕಿನ ಭರವೀರ್ ಗ್ರಾಮದವರೆಗೆ ಒಟ್ಟು 600 ಕಿ.ಮೀ ರಸ್ತೆಯನ್ನು ತೆರೆಯಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ