ಸಮೀರ್​ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರೂ ಕೇಸ್​​ಗಳ ಜವಾಬ್ದಾರಿ ಸಂಜಯ್​ ಕುಮಾರ್​​ ಹೆಗಲಿಗೆ; ಯಾರು ಈ ಐಪಿಎಸ್​ ಅಧಿಕಾರಿ?

| Updated By: Lakshmi Hegde

Updated on: Nov 06, 2021 | 11:08 AM

ಸಮೀರ್​ ವಾಂಖೆಡೆ ಎನ್​ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್​ ಖಾನ್​ ಕೇಸ್​ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್​ ಕುಮಾರ್ ಹೆಗಲಿಗೆ ನೀಡಲಾಗಿದೆ.

ಸಮೀರ್​ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರೂ ಕೇಸ್​​ಗಳ ಜವಾಬ್ದಾರಿ ಸಂಜಯ್​ ಕುಮಾರ್​​ ಹೆಗಲಿಗೆ; ಯಾರು ಈ ಐಪಿಎಸ್​ ಅಧಿಕಾರಿ?
ಐಪಿಎಸ್ ಅಧಿಕಾರಿ ಸಂಜಯ್​ ಕುಮಾರ್ ಮತ್ತು ಸಮೀರ್ ವಾಂಖೆಡೆ
Follow us on

ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​​ ಖಾನ್​​ ಮುಂಬೈ ಡ್ರಗ್ಸ್​ ಕೇಸ್​​ನಲ್ಲಿ ಸಿಕ್ಕಿಬಿದ್ದಾಗಿನಿಂದ ಅವರೆಷ್ಟು ಸುದ್ದಿಯಾಗಿದ್ದಾರೋ, ಅಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾದವರು ಆರ್ಯನ್​ ಖಾನ್​ರನ್ನು ಬಂಧಿಸಿದ್ದ ಎನ್​ಸಿಬಿ ಅಧಿಕಾರಿ  ಸಮೀರ್​ ವಾಂಖೆಡೆ. ಅವರ ವಿರುದ್ಧ ಸುಲಿಗೆ ಸೇರಿ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಆರ್ಯನ್​ ಖಾನ್ ಸಂಬಂಧಪಟ್ಟ ಡ್ರಗ್ಸ್​ ಕೇಸ್​ ತನಿಖೆಯಿಂದ ಅವರನ್ನು ಕೈಬಿಡಲಾಗಿದೆ. ಅಷ್ಟೇ ಅಲ್ಲ, ಇದರೊಂದಿಗೆ ಅವರು ತನಿಖೆ ನಡೆಸುತ್ತಿದ್ದ ಇನ್ನೂ ಆರು ಕೇಸ್​ಗಳಿಂದಲೂ ಕೊಕ್​ ನೀಡಲಾಗಿದ್ದು, ವಾಂಖೆಡೆ ಜಾಗಕ್ಕೆ ಈಗ ಐಪಿಎಸ್​ ಅಧಿಕಾರಿ ಸಂಜಯ್​ ಕುಮಾರ್​ ಸಿಂಗ್​ ಬಂದಿದ್ದಾರೆ. ಇನ್ನು ಮುಂದೆ ಆರ್ಯನ್​ ಖಾನ್​ ಕೇಸ್​​ ಸೇರಿ ಉಳಿದೆಲ್ಲ ಕೇಸ್​ಗಳನ್ನೂ ಸಂಜಯ್​ ಕುಮಾರ್​ ಅವರೇ ತನಿಖೆ ನಡೆಸಲಿದ್ದಾರೆ.   

ಇನ್ನು ಸಮೀರ್​ ವಾಂಖೆಡೆ ಬದಲಿಗೆ ಬಂದಿರುವ ಸಂಜಯ್​ ಕುಮಾರ್​ 1996ನೇ ಬ್ಯಾಚ್​ನ, ಒಡಿಶಾ ಕೇಡರ್​​ನ ಐಪಿಎಸ್​ ಅಧಿಕಾರಿ. 2021ರ ಜನವರಿಯಲ್ಲಿ ಇವರನ್ನು ಎನ್​ಸಿಬಿಯ ಉಪ ಪ್ರಧಾನ ನಿರ್ದೇಶಕರಾಗಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ. ಇದಕ್ಕೂ ಮುನ್ನ ಸಂಜಯ್​ ಕುಮಾರ್​ ಭುವನೇಶ್ವರ್​​ನಲ್ಲಿ ಪೊಲೀಸ್​ ಮಾಡರ್ನೈಶೇನ್​ನ ಎಡಿಜಿಯಾಗಿದ್ದರು.  ಇವರು ಮೊದಲಿನಿಂದಲೂ ಡ್ರಗ್​ ಮಾಫಿಯಾಕ್ಕೆ ದುಃಸ್ವಪ್ನರಾದವರೇ ಆಗಿದ್ದಾರೆ. ಒಡಿಶಾ ರಾಜ್ಯ ಪೊಲೀಸ್​ನ ಡ್ರಗ್​​ ಟಾಸ್ಕ್​ ಫೋರ್ಸ್​​ನ ಮುಖ್ಯಸ್ಥರಾಗಿದ್ದಾಗಲೂ ಹಲವು ಪ್ರಕರಣಗಳ ತನಿಖೆ ನಡೆಸಿದ್ದಾರೆ.

ಇನ್ನು ಸಮೀರ್​ ವಾಂಖೆಡೆ ಎನ್​ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್​ ಖಾನ್​ ಕೇಸ್​ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್​ ಕುಮಾರ್ ಹೆಗಲಿಗೆ ನೀಡಲಾಗಿದೆ.ಇನ್ನು ಆರ್ಯನ್ ಖಾನ್​ ಡ್ರಗ್ಸ್​ ಕೇಸ್​​ನಲ್ಲಿ ಸಿಕ್ಕಿಬಿದ್ದಾಗಿನಿಂದಲೂ ಸಮೀರ್​ ವಾಂಖೆಡೆ ಸುದ್ದಿಯಲ್ಲಿದ್ದರು. ಅನೇಕರು ಅವರ ಕೆಲಸವನ್ನು ಶ್ಲಾಘಿಸಿದ್ದರೆ, ಇನ್ನೂ ಹಲವರು ವಾಂಖೆಡೆ ವಿರುದ್ಧ ಮಾತನಾಡಿದ್ದರು. ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಕೂಡ ವಾಂಖೆಡೆ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: Scotland Dressing Room: ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಎದುರಾಳಿ ನಾಯಕನ ಕನಸು ನನಸು ಮಾಡಿದ ವಿರಾಟ್ ಕೊಹ್ಲಿ