Scotland Dressing Room: ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಎದುರಾಳಿ ನಾಯಕನ ಕನಸು ನನಸು ಮಾಡಿದ ವಿರಾಟ್ ಕೊಹ್ಲಿ

Virat Kohli in Scotland dressing-room: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಪಂದ್ಯ ಮುಗಿದ ಬಳಿಕ ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್​ಗೆ ತೆರಳಿದ್ದಾರೆ. ಇವರಿಗೆ ಕೆಎಲ್ ರಾಹುಲ್ ಕೂಡ ಸಾಥ್ ನೀಡಿದ್ದರು. ಅಷ್ಟಕ್ಕು ಅವರು ಅಲ್ಲಿ ಹೋಗಿದ್ದು ಯಾಕೆ ಗೊತ್ತಾ?.

Scotland Dressing Room: ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಎದುರಾಳಿ ನಾಯಕನ ಕನಸು ನನಸು ಮಾಡಿದ ವಿರಾಟ್ ಕೊಹ್ಲಿ
Virat Kohli in Scotland dressing-room
Follow us
TV9 Web
| Updated By: Vinay Bhat

Updated on: Nov 06, 2021 | 10:38 AM

ಕ್ರಿಕೆಟ್ ಶಿಶು ಎಂದು ಕರೆಯಲ್ಪಡುವ ಸ್ಕಾಟ್ಲೆಂಡ್ ಕ್ರಿಕೆಟ್ ತಂಡ (Scotland Cricket Team) ಟಿ20 ವಿಶ್ವಕಪ್​ನಲ್ಲಿ ಸೂಪರ್ 12 (T20 World Cup) ಹಂತಕ್ಕೇರಿ ಅಚ್ಚರಿ ಮೂಡಿಸಿತ್ತು. ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಶಾಕ್ ನೀಡಿದ್ದ ಸ್ಕಾಟ್ಲೆಂಡ್ ಸೂಪರ್ 12ನಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲ. ಆಡಿದ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲೂ ಸೋತು ಟೂರ್ನಿಯಿಂದ ಹೊರಬಿದ್ದಾಗಿದೆ. ಅದರಲ್ಲೂ ಶುಕ್ರವಾರ ಬಲಿಷ್ಠ ಭಾರತ (India vs Scotland) ವಿರುದ್ಧ ಹೀನಾಯವಾಗಿ ಸೋಲು ಕಂಡಿತು. ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು (Team India) ಎದುರಿಸಿದ ಸ್ಕಾಟ್ಲೆಂಡ್ ಭಾರತೀಯ ಬೌಲಿಂಗ್-ಬ್ಯಾಟಿಂಗ್​ಗೆ ತತ್ತರಿಸಿ ಹೋಯಿತು. ಹೀಗಿರುವಾಗ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ನಿನ್ನೆ ಪಂದ್ಯ ಮುಗಿದ ಬಳಿಕ ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್​ಗೆ (Scotland Dressing Room) ತೆರಳಿದ್ದಾರೆ. ಅಷ್ಟಕ್ಕು ಅವರು ಅಲ್ಲಿ ಹೋಗಿದ್ದು ಯಾಕೆ ಗೊತ್ತಾ?.

ಭಾರತ ಹಾಗೂ ಸ್ಕಾಟ್ಲೆಂಡ್ ಪಂದ್ಯ ಆರಂಭಕ್ಕೂ ಮುನ್ನ ಸ್ಕಾಟ್ಲೆಂಡ್ ತಂಡದ ನಾಯಕ ಸುದ್ದಿಗೋಷ್ಠಿಯಲ್ಲಿ ಒಂದು ಮಾತನ್ನು ಹೇಳಿದ್ದರು. “ನಾವು ವಿಶ್ವದ ಅತಿ ದೊಡ್ಡ ತಂಡವನ್ನು ಎದುರಿಸುತ್ತಿದ್ದೇವೆ. ಸ್ಕಾಟ್ಲೆಂಡ್ ಭಾರತದಂತಹ ಬಲಿಷ್ಠ ತಂಡವನ್ನು ಎದುವರೆಗೆ ಎದುರಿಸಿಯೇ ಇರಲಿಲ್ಲ. ಟಾಸ್ ಸಂದರ್ಭ ವಿರಾಟ್ ಕೊಹ್ಲಿ ಜೊತೆ ನಿಲ್ಲುವುದು ಒಂದು ನನ್ನ ಪಾಲಿಗೆ ವಿಶೇಷ ಕ್ಷಣ. ಕೊಹ್ಲಿ ಒಬ್ಬ ಸ್ಟೈಲಿಶ್ ಪ್ಲೇಯರ್, ಅದ್ಭುತ ಆಟಗಾರ. ಕೊಹ್ಲಿಯನ್ನು ನಮ್ಮ ಡ್ರೆಸ್ಸಿಂಗ್ ರೂಮ್​ಗೆ ಆಹ್ವಾನಿಸುತ್ತೇನೆ” ಎಂದು ಹೇಳಿದ್ದರು.

ಅದರಂತೆ ಸ್ಕಾಟ್ಲೆಂಡ್ ನಾಯಕನ ಮತ್ತು ಆಟಗಾರರ ಆಸೆಯನ್ನು ವಿನಮ್ರತೆಯಿಂದ ಸ್ವೀಕರಿಸಿರುವ ವಿರಾಟ್ ಕೊಹ್ಲಿ ಅವರ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಕೆಲ ಸಮಯ ಕಳೆದಿದ್ದಾರೆ. ಕೊಹ್ಲಿ ಜೊತೆಗೆ ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕೂಡ ಸಾಥ್ ನೀಡಿದ್ದರು. ಅಲ್ಲದೆ ಕ್ರಿಕೆಟ್ ಕುರಿತ ಕೆಲವೊಂದು ಟೆಕ್ನಿಕ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಸ್ಕಾಟ್ಲೆಂಡ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಫೋಟೋ ಹಂಚಿಕೊಂಡಿದ್ದು, ನಮ್ಮ ಆಟಗಾರರ ಜೊತೆ ಸಮಯ ಕಳೆದಿದ್ದಾಕ್ಕಾಗಿ ಧನ್ಯವಾದ ಎಂದು ಹೇಳಿದೆ.

ಭಾವನಾತ್ಮಕ ಮಾತುಗಳನ್ನಾಡಿದ ಸ್ಕಾಟ್ಲೆಂಡ್ ನಾಯಕ ಖೈಲ್ ಕೋಟ್ಜರ್, “ಕಡಿಮೆ ಸಮಯದಲ್ಲಿ ಈ ರೀತಿಯ ಟೂರ್ನಮೆಂಟ್​ನಲ್ಲಿ ಆಡಿದ್ದು ನಮಗೆ ತುಂಬಾನೆ ಸಹಕಾರಿ ಆಗಿದೆ. ನಾವು ಕೆಲವು ಪ್ರಾಯೋಜಕರನ್ನು ಹುಡುಕಬೇಕಾಗಿದೆ. ಅಫ್ಘಾನಿಸ್ತಾನ, ಐರ್ಲೆಂಡ್ ರೀತಿ ನಮ್ಮದುಕೂಡ ಒಂದು ಅದ್ಭುತ ಪಯಣ. ನಾವು ಮುಂದೆ ಸಾಗುತ್ತಿದ್ದೇವೆ” ಎಂದು ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, “ಇಂದಿನ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ನಾವು ಮೇಲುಗೈ ಸಾಧಿಸಿದ್ದೇವೆ. ನವೆಂಬರ್‌ 7ರಂದು ಏನಾಗಲಿದೆ ಎಂಬುದು ತೀವ್ರ ಆಸಕ್ತಿ ಮೂಡಿಸಿದೆ. ಸ್ಕಾಟ್ಲೆಂಡ್ ತಂಡವನ್ನು ಗರಿಷ್ಠ 110 ಅಥವಾ 120 ರನ್​ಗಳೊಳಗೆ ನಿಯಂತ್ರಿಸಬೇಕು ಎಂದು ಲೆಕ್ಕಾಚಾರ ಮತ್ತು ಗೇಮ್ ಪ್ಲಾನ್ ಮಾಡಿದ್ದೆವು. ಅದಕ್ಕೆ ತಕ್ಕಂತೆ ನಮ್ಮ ಬೌಲರ್​ಗಳು ಕೂಡ ಅತ್ಯುತ್ತಮ ಪ್ರದರ್ಶನ ತೋರಿದರು. ಕೆ. ಎಲ್ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಕೂಡ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ” ಎಂದು ಹೇಳಿದರು.

Virat Kohli: ಸ್ಫೋಟಕ ಜಯದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ಕೇಳಿ: ಅಬ್ಬಾ ಎಂಥಾ ರಣತಂತ್ರ

KL Rahul: ಮನಬಂದಂತೆ ಬ್ಯಾಟ್ ಬೀಸಿದ ಕೆಎಲ್ ರಾಹುಲ್: ಟಿ20 ವಿಶ್ವಕಪ್​ನಲ್ಲಿ ಸೃಷ್ಟಿಯಾಯಿತು ಹೊಸ ದಾಖಲೆ

(India vs Scotland After tremendous Win Virat Kohli and KL Rahul surprise visit to Scotland dressing room)