Virat Kohli: ಸ್ಫೋಟಕ ಜಯದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ಕೇಳಿ: ಅಬ್ಬಾ ಎಂಥಾ ರಣತಂತ್ರ

Press Conference Virat Kohli: ನಾವು ಸ್ಕಾಟ್ಲೆಂಡ್ ತಂಡವನ್ನು ಗರಿಷ್ಠ 110 ಅಥವಾ 120 ರನ್​ಗಳೊಳಗೆ ನಿಯಂತ್ರಿಸಬೇಕು ಎಂದು ಲೆಕ್ಕಾಚಾರ ಮತ್ತು ಗೇಮ್ ಪ್ಲಾನ್ ಮಾಡಿದ್ದೆವು. ಆದರೆ ಬೌಲರ್​ಗಳು ಅದ್ಭುತ ಪ್ರದರ್ಶನ ತೋರಿದರು. ರೋಹಿತ್-ರಾಹುಲ್ ಆಟವಂತು ಮನಮೋಹಕ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Virat Kohli: ಸ್ಫೋಟಕ ಜಯದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ಕೇಳಿ: ಅಬ್ಬಾ ಎಂಥಾ ರಣತಂತ್ರ
Virat Kohli vs Scotland
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Nov 06, 2021 | 11:04 AM

ಟಿ20 ವಿಶ್ವಕಪ್​ನಲ್ಲಿ (T20 World Cup) ಆರಂಭದ ಎರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಸ್ಥಿತಿಯಲ್ಲಿದ್ದ ಟೀಮ್ ಇಂಡಿಯಾ (Team India) ಇಂದು ಸೆಮಿ ಫೈನಲ್​ಗೇರುವ ಭರವಸೆಯಲ್ಲಿದೆ. ಅಫ್ಘಾನಿಸ್ತಾನ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದ್ದ ಭಾರತ ಶುಕ್ರವಾರ ನಡೆದ ಸ್ಕಾಟ್ಲೆಂಡ್ (India vs Scotland) ವಿರುದ್ಧದ ಪಂದ್ಯದಲ್ಲೂ ಅಬ್ಬರಿಸಿ ಬೊಬ್ಬರಿಯಿತು. ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಸ್ಟಾಟ್ಲೆಂಡ್ (Scotland Allout) ಬ್ಯಾಟರ್​ಗಳು 85 ರನ್​ಗೆ ಆಲೌಟ್ ಆದರು. ಭಾರತಕ್ಕೆ ಈ ಟಾರ್ಗೆಟ್ ಬೆನ್ನಟ್ಟಲು 120 ಬಾಲ್​ಗಳು ಇದ್ದವಾದರೂ ರನ್​ರೇಟ್​ನಲ್ಲಿ ಪುಟಿದೇಳಲು 7.1 ಓವರ್​ನಲ್ಲಿ ಗೆಲುವು ಕಾಣಬೇಕಿತ್ತು. ಇದನ್ನು ಸಾಧ್ಯವಾಗಿಸಿದ್ದು ಕೆ. ಎಲ್ ರಾಹುಲ್ (50 ರನ್, 19 ಎಸೆತ) ಹಾಗೂ ರೋಹಿತ್ ಶರ್ಮಾ (30 ರನ್, 16 ಎಸೆತ) (KL Rahul and Rohit Sharma). 6.3 ಓವರ್​ನಲ್ಲೇ ಜಯ ಸಾಧಿಸಿ ಭಾರತ ಸೆಮೀಸ್ ಆಸೆಯನ್ನು ಜೀವಂತವಾಗಿರಿಸಿದೆ. ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ (Virat Kohli) ಇದೇ ವಿಚಾರವಾಗಿ ಮಾತನಾಡಿದ್ದು ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

“ಇಂದಿನ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ನಾವು ಮೇಲುಗೈ ಸಾಧಿಸಿದ್ದೇವೆ. ನಮ್ಮ ಪ್ರಾಬಲ್ಯದ ಪ್ರದರ್ಶನವಾಗಿದೆ, ಮತ್ತೊಮ್ಮೆ ನಾವು ಇದನ್ನು ಪುನರಾವರ್ತಿಸಿದ್ದೇವೆ. ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ. ಆದರೆ, ನವೆಂಬರ್‌ 7ರಂದು ಏನಾಗಲಿದೆ ಎಂಬುದು ತೀವ್ರ ಆಸಕ್ತಿ ಮೂಡಿಸಿದೆ. ಈ ಪಂದ್ಯದ ಬಗ್ಗೆ ನಾನು ಜಾಸ್ತಿ ಏನೂ ಹೇಳುವುದಿಲ್ಲ, ನಾವು ಏನು ಮಾಡಬಹುದೆಂದು ನಮಗೆ ಗೊತ್ತಿದೆ” ಎಂದು ಕೊಹ್ಲಿ ಹೇಳಿದ್ದಾರೆ.

ಮಾತು ಮುಂದುವರೆಸಿದ ಅವರು, “ಈ ಮೈದಾನದಲ್ಲಿ ಟಾಸ್ ಎಷ್ಟು ಮಹತ್ವದ್ದಾಗಿರಬಹುದು ಎಂಬುದನ್ನು ಸಹ ನಿಮಗೆ ತಿಳಿಸುತ್ತದೆ. ನಾವು ಸ್ಕಾಟ್ಲೆಂಡ್ ತಂಡವನ್ನು ಗರಿಷ್ಠ 110 ಅಥವಾ 120 ರನ್​ಗಳೊಳಗೆ ನಿಯಂತ್ರಿಸಬೇಕು ಎಂದು ಲೆಕ್ಕಾಚಾರ ಮತ್ತು ಗೇಮ್ ಪ್ಲಾನ್ ಮಾಡಿದ್ದೆವು. ಅದಕ್ಕೆ ತಕ್ಕಂತೆ ನಮ್ಮ ಬೌಲರ್​ಗಳು ಕೂಡ ಅತ್ಯುತ್ತಮ ಪ್ರದರ್ಶನ ತೋರಿದರು. ಕೆ. ಎಲ್ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಕೂಡ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇವರಿಬ್ಬರು ಬ್ಯಾಟಿಂಗ್ ಮೂಲಕ ನಮಗೆ ಬೇಕಾದ ರನ್ ರೇಟ್ ತಂದರು. ನಾವು 8 ರಿಂದ 10 ಓವರ್ ಗಳೊಳಗೆ ಪಂದ್ಯ ಮುಕ್ತಾಯ ಮಾಡುವ ಯೋಜನೆ ರೂಪಿಸಿದ್ದೆವು. ಆದರೆ ರೋಹಿತ್ ಮತ್ತು ರಾಹುಲ್ ಇನ್ನೂ ಬೇಗನೆ ಮುಕ್ತಾಯ ಮಾಡಲು ನೆರವಾದರು.”

“ನಾವು ಚೇಸಿಂಗ್ ಮಾಡುವಾಗ ವಿಕೆಟ್ ಕಳೆದುಕೊಳ್ಳಬಾರದು ಎಂದು ಮೊದಲೇ ಮಾತನಾಡಿದ್ದೆವು. ಕಾರಣ ಒಮ್ಮೆ ವಿಕೆಟ್ ಬಿದ್ದರೆ ಹೊಸ ಬ್ಯಾಟರ್ ಕ್ರೀಸ್​ಗೆ ಅಂಟಿಕೊಳ್ಳಲು 10 ರಿಂದ 20 ಎಸೆತಗಳು ವೆಚ್ಚವಾಗುತ್ತದೆ. ಹೀಗಾಗಿ ಆ ಬಗ್ಗೆ ನಾವು ಜಾಗರೂಕರಾಗಿದ್ದೆವು. ಸಹಜವಾಗಿ ಆಡಿದರೆ ಬೇಗ ರನ್ ಬರುತ್ತವೆ ಎಂದುಕೊಂಡಿದ್ದೆವು. ನೀವು ನಮ್ಮ ಅಭ್ಯಾಸ ಪಂದ್ಯಗಳನ್ನು ನೋಡಿರಬಹುದು, ಇದೇ ಹಾದಿಯಲ್ಲಿ ನಾವು ಕೂಡ ಅಲ್ಲಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದೆವು. ಆದರೆ, ಎರಡೇ ಎರಡು ಕೆಟ್ಟ ಗಳಿಗೆ ನಮ್ಮ ಪಾಲಿಗೆ ನಡೆದಿವೆ. ಅಲ್ಲಿ ನಾವು ಸತತ ಎರಡು ಓವರ್‌ಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ” ಎಂದು ಕೊಹ್ಲಿ ಪಂದ್ಯದ ಬಳಿಕ ಮಾತನಾಡಿದರು.

ಇದೇವೇಳೆ ಬೌಲರ್​​ಗಳ ಪ್ರದರ್ಶನವನ್ನು ಶ್ಲಾಘಿಸಿದ ಕೊಹ್ಲಿ ನಿಜಕ್ಕೂ ಬೌಲರ್ ಗಳ ಮೇಲೆ ಹೆಚ್ಚಿನ ಒತ್ತಡವಿತ್ತು. ಆದರೆ ಅದನ್ನು ಅವರು ನಿಭಾಯಿಸಿದ ರೀತಿ ಮೆಚ್ಚುವಂತದ್ದು. ಜಡೇಜಾ ಚೆನ್ನಾಗಿ ಬೌಲಿಂಗ್ ಮಾಡಿದರು, ಶಮಿ ಕೂಡ ಉತ್ತಮವಾಗಿದ್ದರು ಎಂದು ಹೇಳಿದ್ದಾರೆ. ನನ್ನ ಕುಟುಂಬ ಕೂಡ ಇಲ್ಲೇ ಇದೆ. ಹಾಗಾಗಿ ನನ್ನ ಹುಟ್ಟುಹಬ್ಬಕ್ಕೆ ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದರು.

KL Rahul: ಮನಬಂದಂತೆ ಬ್ಯಾಟ್ ಬೀಸಿದ ಕೆಎಲ್ ರಾಹುಲ್: ಟಿ20 ವಿಶ್ವಕಪ್​ನಲ್ಲಿ ಸೃಷ್ಟಿಯಾಯಿತು ಹೊಸ ದಾಖಲೆ

India vs Scotland: ಸ್ಕಾಟ್ಲೆಂಡ್ ವಿರುದ್ಧ ಭಾರತದ ರಣಚಂಡಿ ಅವತಾರ: 39 ಎಸೆತಗಳಲ್ಲಿ ಪಂದ್ಯ ಫಿನಿಶ್: ಕೊಹ್ಲಿಗೆ ಪರ್ಫೆಕ್ಟ್ ಗಿಫ್ಟ್

(Virat Kohli speaking the post-match presentation after the India vs Scotland T20 World Cup Match)

Published On - 9:36 am, Sat, 6 November 21