KL Rahul and Athiya Shetty: ಕೆಎಲ್ ರಾಹುಲ್ ಸ್ಫೋಟಕ ಫಿಫ್ಟಿ ಸಿಡಿಸಿದಾಗ ಗರ್ಲ್ ಫ್ರೆಂಡ್ ಅತಿಯಾ ಶೆಟ್ಟಿ ಮಾಡಿದ್ದೇನು ನೋಡಿ
Athiya Shetty celebrates KL Rahul’s fastest fifty: ಕೆ. ಎಲ್ ರಾಹುಲ್ ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು. ಅರ್ಧಶತಕ ಸಿಡಿಸುತ್ತಿದ್ದಂತೆ ಪ್ರೇಕ್ಷಕ ಗ್ಯಾಲರಿಯಲ್ಲಿದ್ದ ರಾಹುಲ್ ಗರ್ಲ್ ಫ್ರೆಂಡ್ ಅತಿಯಾ ಶೆಟ್ಟಿ ಫುಲ್ ಖುಷ್ ಆದರು.
ಭಾರತ ಕೆಎಲ್ ರಾಹುಲ್ (KL Rahul) ಅವರು ಸ್ಕಾಟ್ಲೆಂಡ್ (India vs Scotland) ವಿರುದ್ಧದ ಪಂದ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್ 2021 ರಲ್ಲಿ (ICC T20 World Cup) ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಬರೆದರು. ಕೇವಲ 18 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ರಾಹುಲ್ ಭಾರತಕ್ಕೆ ಭರ್ಜರಿ ಜಯ ತಂದಿಟ್ಟರು. ಅಲ್ಲದೆ ಟೀಮ್ ಇಂಡಿಯಾ (Team India) ರನ್ರೇಟ್ ಅನ್ನು ಕಂಡು ಮೇಲೆತ್ತಲು ಪ್ರಮುಖ ಪಾತ್ರವಹಿಸಿದರು. ಇದೇವೇಳೆ ರಾಹುಲ್ ಅವರ ಪ್ರೇಯಸಿ (KL Rahul Girlfriend) ಆಗಿರುವ ಸುನಿಲ್ ಶೆಟ್ಟಿ ಮಗಳು, ಬಾಲಿವುಡ್ ನಟಿ ಅತಿಯಾ ಶೆಟ್ಟಿ (Athiya Shetty) ಕೂಡ ಈ ಪಂದ್ಯಕ್ಕೆ ಹಾಜರಿದ್ದರು. ರಾಹುಲ್ ಅವರ ಸ್ಫೋಟಕ ಆಟ ಕಂಡು ಅತಿಯಾ ದಂಗಾಗಿದ್ದಂತು ಸುಳ್ಳಲ್ಲ. ಇದರ ಜೊತೆಗೆ ಶುಕ್ರವಾರ ಅತಿಯಾ ಅವರ ಹುಟ್ಟುಹಬ್ಬ ಕೂಡ ಆಗಿತ್ತು. ಈ ಮೂಲಕ ತನ್ನ ಪ್ರೇಯಸಿಗೆ ರಾಹುಲ್ ಹುಟ್ಟುಹಬ್ಬದ (Athiya Shetty Birthday) ಉಡುಗೊರೆಯನ್ನು ಅರ್ಧಶತಕ ಬಾರಿಸುವ ಮೂಲಕ, ಭಾರತಕ್ಕೆ ಜಯ ತಂದುಕೊಡುವ ಮೂಲಕ ಭರ್ಜರಿ ಆಗಿ ನೀಡಿದ್ದಾರೆ.
ಹೌದು, ಭಾರತಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಬೌಲರ್ಗಳು ಸ್ಕಾಟ್ಲೆಂಡ್ ತಂಡವನ್ನು 85 ರನ್ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ, ಸವಾಲು ಇದ್ದಿದ್ದು ಬ್ಯಾಟಿಂಗ್ನಲ್ಲಿ. ಅಫ್ಘಾನಿಸ್ತಾನ ತಂಡವನ್ನು ಹಿಂದಿಕ್ಕಿ ರನ್ರೇಟ್ನಲ್ಲಿ ಮೇಲುಗೈ ಸಾಧಿಸಲು ಭಾರತ 86 ರನ್ಗಳ ಟಾರ್ಗೆಟ್ ಅನ್ನು ಕೇವಲ 7.1 ಓವರ್ನಲ್ಲಿ ಮುಗಿಸಬೇಕಿತ್ತು. ಈ ಸವಾಲನ್ನು ಸ್ವೀಕರಿಸಿದವರು ಕೆ. ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ.
ಕೇವಲ 5 ಓವರ್ನಲ್ಲಿ ಇವರಿಬ್ಬರು 70 ರನ್ ಸೇರಿಸಿದರು. ರಾಹುಲ್ 19 ಬಾಲ್ನಲ್ಲಿ ದಾಖಲೆಯ 50 ರನ್ ಗಳಿಸಿದರೆ, ರೋಹಿತ್ 16 ಎಸೆತದಲ್ಲಿ 30 ರನ್ ಚಚ್ಚಿದರು. ರಾಹುಲ್ 6 ಫೋರ್, 3 ಸಿಕ್ಸರ್ ಮತ್ತು ರೋಹಿತ್ 5 ಫೋರ್, 1 ಸಿಕ್ಸರ್ ಚಚ್ಚದರು. 6.3 ಓವರ್ನಲ್ಲಿ 89 ರನ್ ಸಿಡಿಸುವ ಮೂಲಕ ಭಾರತ ಅಮೋಘ ಜಯ ಕಂಡಿತು.
ಕೆ. ಎಲ್ ರಾಹುಲ್ ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ರಾಹುಲ್ ಅರ್ಧಶತಕ ಸಿಡಿಸುತ್ತಿದ್ದಂತೆ ಪ್ರೇಕ್ಷಕ ಗ್ಯಾಲರಿಯಲ್ಲಿದ್ದ ಅತಿಯಾ ಶೆಟ್ಟಿ ಫುಲ್ ಖುಷ್ ಆದರು. ಎದ್ದು ನಿಂತು ಒಂದು ಕ್ಷಣ ಕುಣಿದು ಕುಪ್ಪಳಿಸಿದರು.
— pant shirt fc (@pant_fc) November 5, 2021
ಇನ್ನು ಆಟದ ನಂತರ ರಾಹುಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅತಿಯಾ ಶೆಟ್ಟಿಯೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಎರಡು ಫೋಟೋಗಳನ್ನು ಹಂಚಿಕೊಂಡಿರುವ ರಾಹುಲ್ “ಹುಟ್ಟುಹಬ್ಬದ ಶುಭಾಶಯಗಳು ಮೈ ಹಾರ್ಟ್ ಎಮೋಜಿಯೊಂದಿಗೆ, ಪ್ರೀತಿಯನ್ನು ಅರ್ಥೈಸಬಲ್ಲದು” ಎಂದು ಶೀರ್ಷಿಕೆ ನೀಡಿದ್ದಾರೆ. ಅಥಿಯಾ ಕೂಡ ಬಿಳಿ ಹೃದಯ ಮತ್ತು ಪ್ರಪಂಚದ ಎಮೋಜಿಗಳನ್ನು ಬೀಳಿಸುವ ಮೂಲಕ ಪೋಸ್ಟ್ ಅನ್ನು ಒಪ್ಪಿಕೊಂಡಿದ್ದಾರೆ.
KL Rahul: ಮನಬಂದಂತೆ ಬ್ಯಾಟ್ ಬೀಸಿದ ಕೆಎಲ್ ರಾಹುಲ್: ಟಿ20 ವಿಶ್ವಕಪ್ನಲ್ಲಿ ಸೃಷ್ಟಿಯಾಯಿತು ಹೊಸ ದಾಖಲೆ
(KL Rahul rumoured girlfriend Athiya Shetty Celebration reaction in India vs Scotland Match video viral)
Published On - 11:40 am, Sat, 6 November 21