Ravichandran Ashwin: ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಅಫ್ಘಾನಿಸ್ತಾನಕ್ಕೆ ದೊಡ್ಡ ಆಫರ್ ಕೊಟ್ಟ ರವಿಚಂದ್ರನ್ ಅಶ್ವಿನ್: ಏನದು?

New Zealand vs Afghanistan: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮುಂದಿನ ಹಂತಕ್ಕೆ ತಲುಪಬೇಕಾದರೆ ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲಲೇ ಬೇಕಾಗಿದೆ. ಹೀಗಿರುವಾಗ ಟೀಮ್ ಇಂಡಿಯಾದ ರವಿಚಂದ್ರನ್ ಅಫ್ಘಾನಿಸ್ತಾನಕ್ಕೆ ಆಫರ್ ಒಂದನ್ನು ನೀಡಿದ್ದಾರೆ.

Ravichandran Ashwin: ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಅಫ್ಘಾನಿಸ್ತಾನಕ್ಕೆ ದೊಡ್ಡ ಆಫರ್ ಕೊಟ್ಟ ರವಿಚಂದ್ರನ್ ಅಶ್ವಿನ್: ಏನದು?
India vs Afghanistan vs New Zealand
Follow us
TV9 Web
| Updated By: Vinay Bhat

Updated on: Nov 06, 2021 | 2:01 PM

ಟಿ20 ವಿಶ್ವಕಪ್ (T20 World Cup) ಮಹಾಸಮರದ ಸೂಪರ್ 12 ಹಂತ ಅಂತಿಮದತ್ತ ಸಾಗುತ್ತಿದ್ದು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಗ್ರೂಪ್ 2 ರಲ್ಲಿ ಪಾಕಿಸ್ತಾನ (Pakistan) ಮಾತ್ರ ಸೆಮಿ ಫೈನಲ್​ಗೇರಿರುವುದು ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಭಾರತ (India), ನ್ಯೂಜಿಲೆಂಡ್ (New Zealand) ಮತ್ತು ಅಫ್ಘಾನಿಸ್ತಾನ (Afghanistan) ನಡುವೆ ಹೋರಾಟ ನಡೆಯುತ್ತಿದೆ. ಭಾರತಕ್ಕೆ ಸೆಮಿ ಫೈನಲ್​ಗೇರುವ ಅವಕಾಶ ಇರುವುದು ಕೂದಲೆಳೆಯಷ್ಟು ಮಾತ್ರ. ಇದಕ್ಕಾಗಿ ವಿರಾಟ್ ಕೊಹ್ಲಿ (Virat Kohli) ಪಡೆ ನಾನಾ ಕಸರತ್ತು ನಡೆಸುತ್ತಿದೆ. ಸೆಮಿ ಫೈನಲ್​ಗೇರಲು ಒಂದು ಕಡೆ ಟೀಮ್ ಇಂಡಿಯಾಕ್ಕೆ (Team India) ಉತ್ತಮ ರನ್​ರೇಟ್ ಬೇಕು. ಇದರ ಕಡೆ ಗಮನ ಹರಿಸಿದೆ. ಇನ್ನೊಂದೆಡೆ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ (New Zealand vs Afghanistan) ಸೋಲಬೇಕು. ಆಗ ಮಾತ್ರ ಭಾರತಕ್ಕೆ ಸೆಮಿ ಫೈನಲ್ ಬಾಗಿಲು ತೆರೆಯಲಿದೆ. ಎಲ್ಲಾದರು ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ ಭಾರತ ಟೂರ್ನಿಯಿಂದ ಹೊರಬೀಳಲಿದೆ. ಇದಕ್ಕಾಗಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಅಫ್ಘಾನಿಸ್ತಾನಕ್ಕೆ ರವಿಚಂದ್ರನ್ ಅಶ್ವಿನ್ (Ravichandran Ashwin) ದೊಡ್ಡ ಆಫರ್ ಒಂದನ್ನು ನೀಡಿದ್ದಾರೆ.

ಹೌದು, ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮುಂದಿನ ಹಂತಕ್ಕೆ ತಲುಪಬೇಕಾದರೆ ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲಲೇ ಬೇಕಾಗಿದೆ. ಭಾರತೀಯ ಅಭಿಮಾನಿಗಳು ಕೂಡ ಅಪ್ಘಾನ್ ಗೆಲುವಿಗೆ ಪ್ರಾರ್ಥಿಸುತ್ತಿದ್ದಾರೆ. ಹೀಗಿರುವಾಗ ಆರ್. ಅಶ್ವಿನ್ ಅಫ್ಘಾನಿಸ್ತಾನಕ್ಕೆ ಆಫರ್ ಒಂದನ್ನು ನೀಡಿದ್ದಾರೆ. ಇಂಜುರಿಯಿಂದಾಗಿ ಬಳಲುತ್ತಿರುವ ಮುಜೀಬ್ ಉರ್ ರೆಹ್ಮಾನ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯರಾದರೆ ಉತ್ತಮ ಎಂದಿರುವ ಅಶ್ವಿನ್, ಇದಕ್ಕಾಗಿ ಭಾರತದ ಫಿಸಿಯೋ ಸಹಾಯವನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ಮುಜೀಬ್ ಉರ್ ರೆಹ್ಮಾನ್ ಅಫ್ಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ನರ್ ಆಗಿದ್ದಾರೆ. ತಂಡದ ಗೆಲುವಿನಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು. ಕಳೆದ ಪಾಕಿಸ್ತಾನ ವಿರುದ್ಧ ಇವರು ಆಡುವಾಗ ಇಂಜುರಿಗೆ ತುತ್ತಾದರು. ಸೂಪರ್ 12ನ ಮೊದಲ 2 ಪಂದ್ಯವನ್ನು ಆಡಿದ ಇವರು 6 ವಿಕೆಟ್ ಕಿತ್ತಿದ್ದಾರೆ. ನಂತರದ ಎರಡು ಪಂದ್ಯಗಳಲ್ಲಿ ಗಾಯಕ್ಕೆ ತುತ್ತಾದ ಪರಿಣಾಮ ಕಣಕ್ಕಿಳಿಯಲಿಲ್ಲ. ಇವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯರಾದರೆ ಅಫ್ಘಾನ್ ಮತ್ತಷ್ಟು ಬಲಿಷ್ಠವಾಗಲಿದೆ.

ಈ ವಿಚಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಮಾಷೆಯಾಗಿ ಮಾತನಾಡಿರುವ ಅಶ್ವಿನ್, “ಅಫ್ಘಾನಿಸ್ತಾನ ಉತ್ತಮ ಕ್ರಿಕೆಟ್ ಆಡುತ್ತಿದೆ. ನಮ್ಮ ತಂಡದ ಭವಿಷ್ಯ ಕೂಡ ಅವರ ಗೆಲುವಿನ ಮೇಲೆ ನಿಂತಿದೆ. ಮೊದಲಿಗೆ ಅವರಿಗೆ ಆಲ್ ದಿ ಬೆಸ್ಟ್ ಹೇಳಿತ್ತೇನೆ. ಇಂಜುರಿಯಿಂದ ಬಳಲುತ್ತಿರುವ ಮುಜೀಬ್ ಅವರಿಗೆ ನಮ್ಮ ಫಿಸಿಯೋ ಕಡೆಯಿಂದ ಯಾವುದೇ ಸಹಾಯ ಬೇಕಿದ್ದರೆ ಕೇಳಬಹುದು” ಎಂದು ಹೇಳಿದ್ದಾರೆ.

ಅಶ್ವಿನ್ ಅವರ ಈ ಹೇಳಿಕೆಗೆ ಅಫ್ಘಾನ್​ನ ಮತ್ತೊಬ್ಬ ಸ್ಟಾರ್ ರಶೀದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. “ಅಶ್ವಿನ್ ಅವರೆ ನೀವು ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಮ್ಮ ಫಿಸಿಯೋ ಪ್ರಶಾಂತ್ ಪಂಚಡ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ” ಎಂದು ನಗುತ್ತಾ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

Ravindra Jadeja: ಅಫ್ಘಾನ್ ವಿರುದ್ಧ ನ್ಯೂಜಿಲೆಂಡ್ ಗೆದ್ದರೆ ಏನು ಗತಿ?: ಜಡೇಜಾ ಕೊಟ್ಟ ಉತ್ತರ ನೀವು ಕೇಳಲೇ ಬೇಕು

KL Rahul and Athiya Shetty: ಕೆಎಲ್ ರಾಹುಲ್ ಸ್ಫೋಟಕ ಫಿಫ್ಟಿ ಸಿಡಿಸಿದಾಗ ಗರ್ಲ್​ ಫ್ರೆಂಡ್ ಅತಿಯಾ ಶೆಟ್ಟಿ ಮಾಡಿದ್ದೇನು ನೋಡಿ

(Ravichandran Ashwin made a fun offer regarding Mujeeb Ur Rahman fitness before New Zealand vs Afghanistan Match)