India vs Scotland: ಸ್ಕಾಟ್ಲೆಂಡ್ ವಿರುದ್ಧ ಭಾರತದ ರಣಚಂಡಿ ಅವತಾರ: 39 ಎಸೆತಗಳಲ್ಲಿ ಪಂದ್ಯ ಫಿನಿಶ್: ಕೊಹ್ಲಿಗೆ ಪರ್ಫೆಕ್ಟ್ ಗಿಫ್ಟ್

India Semi-final Hopes Alive in T20 World Cup: ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಬರ್ತ್​ ಡೇ ಬಾಯ್ ವಿರಾಟ್ ಕೊಹ್ಲಿ ಕೊನೆಗೂ ಟಾಸ್ ಗೆದ್ದರು. ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿದರು. ಇದು ಚೆನ್ನಾಗಿಯೇ ವರ್ಕ್ ಕೂಡ ಆಯಿತು.

India vs Scotland: ಸ್ಕಾಟ್ಲೆಂಡ್ ವಿರುದ್ಧ ಭಾರತದ ರಣಚಂಡಿ ಅವತಾರ: 39 ಎಸೆತಗಳಲ್ಲಿ ಪಂದ್ಯ ಫಿನಿಶ್: ಕೊಹ್ಲಿಗೆ ಪರ್ಫೆಕ್ಟ್ ಗಿಫ್ಟ್
Virat Kohli, Jadeja and KL Rahul
Follow us
TV9 Web
| Updated By: Vinay Bhat

Updated on: Nov 06, 2021 | 7:33 AM

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಟಿ20 ವಿಶ್ವಕಪ್​ನ (T20 World Cup) ಪಂದ್ಯದಲ್ಲಿ ಭಾರತ (India) ತಂಡ ಈವರೆಗೆ ಕಾಣದ ಅಮೋಘ ಗೆಲುವು ಸಾಧಿಸಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯಕ್ಕೆ ಟೀಮ್ ಇಂಡಿಯಾ (India vs Scotland) ಮಾಡಿದ ಪ್ಲಾನ್ ಶೇ. 100 ರಷ್ಟು ವರ್ಕೌಟ್ ಆಯಿತು. ರೋಹಿತ್ ಶರ್ಮಾ (Rohit Sharma) ಹಾಗೂ ಕೆಎಲ್ ರಾಹುಲ್ (KL Rahul) ಮೈದಾನದಲ್ಲೇ ಬೌಂಡರಿ-ಸಿಕ್ಸರ್​ಗಳ ಪಟಾಕಿ ಸಿಡಿಸಿ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ (Virat Kohli Birthday) 8 ವಿಕೆಟ್​ಗಳ ಅಮೋಘ ಗೆಲುವು ತಂದಿಟ್ಟರು. ಜೊತೆಗೆ ಭಾರತದ ನೆಟ್​ರನ್​​ರೇಟ್​ ಕೂಡ ಅಫ್ಘಾನಿಸ್ತಾನವನ್ನು (Afghanistan) ಕೆಳದಬ್ಬಿತು. ಇನ್ನೇನಿದ್ದರು ಭಾನುವಾರದ ಪಂದ್ಯದ ಮೇಲೆ ಕೊಹ್ಲಿ ಪಡೆಯ ಭವಿಷ್ಯ ನಿಂತಿದೆ. ಇದರಲ್ಲಿ ನ್ಯೂಜಿಲೆಂಡ್ ತಂಡವನ್ನು ಅಫ್ಘಾನಿಸ್ತಾನ (New Zealand vs Afghanistan) ಸೋಲಿಸಿದರೆ ಮಾತ್ರ ಭಾರತಕ್ಕೆ ಸೆಮಿ ಫೈನಲ್​ಗೆ (Team India Semi Final) ಹೋಗುವ ಅವಕಾಶ ಸಿಗಲಿದೆ.

ಶುಕ್ರವಾರದ ಪಂದ್ಯದಲ್ಲಿ ಬರ್ತ್​ ಡೇ ಬಾಯ್ ವಿರಾಟ್ ಕೊಹ್ಲಿ ಕೊನೆಗೂ ಟಾಸ್ ಗೆದ್ದರು. ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿದರು. ಇದು ಚೆನ್ನಾಗಿಯೇ ವರ್ಕ್ ಕೂಡ ಆಯಿತು. ಆರಂಭದಲ್ಲೇ ರನ್​ಗೆ ಕಡಿವಾಣ ಹಾಕಿ ಎದುರಾಳಿಗೆ ಪ್ರೆಶರ್ ನೀಡುವ ಮೂಲಕ ಭಾರತ ಸ್ಕಾಟ್ಲೆಂಡ್ ವಿಕೆಟ್ ಅನ್ನು ಚೆನ್ನಾಗಿಯೇ ಪಡೆದುಕೊಂಡಿತು.

ಭಾರತದ ಬೌಲರ್‌ಗಳನ್ನು ಎದುರಿಸಲು ಸ್ಕಾಟ್ಲೆಂಡ್ ಬ್ಯಾಟರ್​ಗಳು ಸಂಪೂರ್ಣ ವಿಫಲರಾದರು. ಜಾರ್ಜ್‌ ಮುನ್ಸೇ(24) ಹಾಗೂ ಮೈಕಲ್‌ ಲೀಸ್ಕ್(21) ಅವರನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ಮೊತ್ತ 20ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 17.4 ಓವರ್‌ಗಳಿಗೆ ಸ್ಕಾಂಟ್ಲೆಂಡ್‌ 85 ರನ್‌ ಆಲೌಟ್ ಆಯಿತು. ಆ ಮೂಲಕ ಭಾರತಕ್ಕೆ 86 ರನ್‌ ಗುರಿ ನೀಡಿತ್ತು.

ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಮೊಹಮ್ಮದ್‌ ಶಮಿ ಹಾಗೂ ರವೀಂದ್ರ ಜಡೇಜಾ ಜೋಡಿ ತಲಾ 15 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಜಡೇಜಾ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ಜಸ್‌ಪ್ರಿತ್‌ ಬುಮ್ರಾ ಎರಡು ವಿಕೆಟ್‌ ಪಡೆದರೆ, ಆರ್‌ ಅಶ್ವಿನ್‌ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

ಭಾರತದ ಗೆಲುವಿಗೆ 120 ಎಸೆತಗಳಲ್ಲಿ 86 ರನ್ ಬೇಕಿತ್ತು ನಿಜ. ಆದರೆ, ತಮ್ಮ ನೆಟ್​ರೇಟ್ ಅನ್ನು ಉತ್ತಮಗೊಳಿಸಲು ಭಾರತ 7.1 ಓವರ್​ಗಳಲ್ಲಿ ಗುರಿ ಮುಟ್ಟಬೇಕಿತ್ತು. ಇದೇ ಲೆಕ್ಕಚಾರದೊಂದಿಗೆ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಮೊದಲ ಓವರ್​ ಅನ್ನು ಸರಿಯಾಗಿ ಗಮನಿಸಿ 2ನೇ ಓವರ್​ನಿಂದ ರಣಚಂಡಿ ಅವತಾರ ತಾಳಿದರು.

ಕೇವಲ 5 ಓವರ್​ನಲ್ಲಿ ಇವರಿಬ್ಬರು 70 ರನ್ ಸೇರಿಸಿದರು. ರಾಹುಲ್ 19 ಬಾಲ್​ನಲ್ಲಿ ದಾಖಲೆಯ 50 ರನ್ ಗಳಿಸಿದರೆ, ರೋಹಿತ್ 16 ಎಸೆತದಲ್ಲಿ 30 ರನ್ ಚಚ್ಚಿದರು. ರಾಹುಲ್ 6 ಫೋರ್, 3 ಸಿಕ್ಸರ್ ಮತ್ತು ರೋಹಿತ್ 5 ಫೋರ್, 1 ಸಿಕ್ಸರ್ ಚಚ್ಚದರು. 6.3 ಓವರ್​ನಲ್ಲಿ 89 ರನ್ ಸಿಡಿಸುವ ಮೂಲಕ ಭಾರತ ಅಮೋಘ ಜಯ ಕಂಡಿತು.

ಈ ಗೆಲುವಿನೊಂದಿಗೆ ಭಾರತ ತಂಡ ಸೂಪರ್‌ 12 ಎರಡನೇ ಗುಂಪಿನಲ್ಲಿ 4 ಅಂಕಗಳನ್ನು ಕಲೆ ಹಾಕುವ ಮೂಲಕ ಮೂರನೇ ಸ್ಥಾನಕ್ಕೇರಿತು. ಅಲ್ಲದೆ, ನಿರೀಕ್ಷೆಯಂತೆ +1.619 ರನ್‌ರೇಟ್‌ ಕಲೆ ಹಾಕಿದೆ. ಆದರೂ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ತಂಡದ ಸೆಮಿಫೈನಲ್‌ ಹಾದಿಯ ನಿರ್ಧಾರ, ನ್ಯೂಜಿಲೆಂಡ್‌ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯವನ್ನು ಅವಲಂಬಿಸಿದೆ. ಈ ಪಂದ್ಯ ಭಾನುವಾರ ನಡೆಯಲಿದೆ.

India vs South Africa: ಭಾರತ- ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾವಣೆ! ಸೂಕ್ತ ಕಾರಣ ತಿಳಿಸದ ಮಂಡಳಿ

(Team India semi-final hopes alive India rout Scotland by 8 wickets its Birthday gift for Virat Kohli)

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ