ಬ್ಯಾಂಕ್​ ವಂಚನೆ ಪ್ರಕರಣ: ಮೂರನೇ ಬಾರಿಯ ಸಮನ್ಸ್ ವಿಚಾರಣೆಯಲ್ಲಿಯೂ ವರ್ಷಾ ರಾವುತ್ ಗೈರು

| Updated By: ಸಾಧು ಶ್ರೀನಾಥ್​

Updated on: Dec 29, 2020 | 1:09 PM

ಶಿವಸೇನೆ ಸಂಸದ ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್​ಗೆ ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್​ ಜಾರಿಗೊಳಿಸಿತ್ತು. ಇಂದು (ಡಿ.29) ಕಚೇರಿಗೆ ಹಾಜರಿರುವಂತೆ ಸಮನ್ಸ್​​ನಲ್ಲಿ ಹೇಳಲಾಗಿತ್ತು. ಆದರೆ, ಇಂದಿನ ವಿಚಾರಣೆಗೆ ವರ್ಷಾ ರಾವುತ್ ಹಾಜರಾಗಲಿಲ್ಲ.

ಬ್ಯಾಂಕ್​ ವಂಚನೆ ಪ್ರಕರಣ: ಮೂರನೇ ಬಾರಿಯ ಸಮನ್ಸ್ ವಿಚಾರಣೆಯಲ್ಲಿಯೂ ವರ್ಷಾ ರಾವುತ್ ಗೈರು
ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಅವರ ಪತ್ನಿ ವರ್ಷಾ ರಾವುತ್
Follow us on

ಮುಂಬೈ: ಶಿವಸೇನೆ ಸಂಸದ ಸಂಜಯ್ ರಾವುತ್ ಪತ್ನಿ ವರ್ಷಾ ರಾವುತ್​ಗೆ ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್​ ಜಾರಿಗೊಳಿಸಿತ್ತು. ಇಂದು (ಡಿ.29) ಕಚೇರಿಗೆ ಹಾಜರಿರುವಂತೆ ಸಮನ್ಸ್​​ನಲ್ಲಿ ಹೇಳಲಾಗಿತ್ತು. ಆದರೆ, ಇಂದಿನ ವಿಚಾರಣೆಗೂ ವರ್ಷಾ ರಾವುತ್ ಹಾಜರಾಗಲಿಲ್ಲ.

ಈ ಹಿಂದೆ 2 ಬಾರಿಯ ವಿಚಾರಣೆಯಲ್ಲಿಯೂ ವರ್ಷಾ ರಾವುತ್ ಹಾಜರಿರಲಿಲ್ಲ. ಇದು 3ನೇ ಬಾರಿಯ ವಿಚಾರಣೆಯ ಕರೆಯಾಗಿತ್ತು. ಕಾನೂನು ಸಲಹೆ ಪಡೆದು ನಂತರ ವಿಚಾರಣೆಯಲ್ಲಿ ಭಾಗಿಯಾಗುವ ನಿರ್ಧಾರ ಕೈಗೊಂಡಿದ್ದಾರೆ.ಇನ್ನು, ಜನವರಿ 5ರಂದು ನಡೆಯಲಿರುವ ವಿಚಾರಣೆಯಲ್ಲಿ ವರ್ಷಾ ರಾವುತ್ ಹಾಜರಾಗುವ ಸಾಧ್ಯತೆ ಇದೆ.

ಬ್ಯಾಂಕ್​ಗೆ ವಂಚನೆ: ಶಿವಸೇನೆ ಸಂಸದ ಸಂಜಯ್ ರಾವುತ್ ಪತ್ನಿಗೆ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯ