TRP ಹಗರಣದಲ್ಲಿ ಅರ್ನಬ್​ ಗೋಸ್ವಾಮಿ ಶಾಮೀಲು.. ಮೊಟ್ಟಮೊದಲ ಬಾರಿಗೆ ಅರ್ನಬ್​ ಹೆಸರು ಪ್ರಸ್ತಾಪಿಸಿದ ಮುಂಬೈ ಪೊಲೀಸರು

ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಅರ್ನಬ್​ ಗೋಸ್ವಾಮಿ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲವಾದರೂ ರಿಪಬ್ಲಿಕ್​ ಟಿವಿ ವಾಹಿನಿಯ ಮಾಲೀಕರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆಪಾದನೆ ಮಾಡಲಾಗಿದೆ. ಆದರೆ, ಈ ಕುರಿತಾದ ಹೇಳಿಕೆ ನೀಡುವ ಸಂದರ್ಭದಲ್ಲಿ ಮಾತ್ರ ಮುಂಬೈ ಪೊಲೀಸರು ಅರ್ನಬ್​ ಗೋಸ್ವಾಮಿ ಹೆಸರನ್ನು ಉಚ್ಛರಿಸಿದ್ದಾರೆ.

TRP ಹಗರಣದಲ್ಲಿ ಅರ್ನಬ್​ ಗೋಸ್ವಾಮಿ ಶಾಮೀಲು.. ಮೊಟ್ಟಮೊದಲ ಬಾರಿಗೆ ಅರ್ನಬ್​ ಹೆಸರು ಪ್ರಸ್ತಾಪಿಸಿದ ಮುಂಬೈ ಪೊಲೀಸರು
ಅರ್ನಬ್​ ಗೋಸ್ವಾಮಿ
Follow us
Skanda
| Updated By: ಸಾಧು ಶ್ರೀನಾಥ್​

Updated on: Dec 29, 2020 | 11:30 AM

ಮುಂಬೈ: ಟಿಆರ್​ಪಿ ಗೋಲ್​ಮಾಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್​ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಸೋಮವಾರದಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ (Remand Report) ರಿಪಬ್ಲಿಕ್​ ಟಿವಿ ವಾಹಿನಿಯ ಮಾಲೀಕರು, ಮಾಜಿ ಸಿಇಓ ಪಾರ್ಥೋ ದಾಸ್​ಗುಪ್ತಾ ಅವರಿಗೆ ಲಕ್ಷಗಟ್ಟಲೆ ಹಣ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಅರ್ನಬ್​ ಗೋಸ್ವಾಮಿ ಹೆಸರು ನೇರವಾಗಿ ಪ್ರಸ್ತಾಪವಾಗಿಲ್ಲವಾದರೂ ರಿಪಬ್ಲಿಕ್​ ಟಿವಿ ವಾಹಿನಿಯ ಮಾಲೀಕರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿದೆ. ಆದರೆ,  ಹೇಳಿಕೆಯ ಮುಂದುವರಿದ ಭಾಗದಲ್ಲಿ.. ಮುಂಬೈ ಪೊಲೀಸರು ಅರ್ನಬ್​ ಗೋಸ್ವಾಮಿ ಹೆಸರನ್ನು ಉಲ್ಲೇಖಿಸಿದ್ದಾರೆ.

ರಿಪಬ್ಲಿಕ್​ ಟಿವಿ ಮತ್ತು ರಿಪಬ್ಲಿಕ್​ ಭಾರತ್​ ವಾಹಿನಿಗಳ ಟಿಆರ್​ಪಿಯನ್ನು ಅಕ್ರಮವಾಗಿ ಹೆಚ್ಚಿಸುವ ಸಲುವಾಗಿ ಬಾರ್ಕ್​ ಸಂಸ್ಥೆಯ ಮಾಜಿ ಸಿಇಓ ಪಾರ್ಥೋ ದಾಸ್​ಗುಪ್ತಾ ಅವರಿಗೆ ಅರ್ನಬ್​ ಗೋಸ್ವಾಮಿ ಬೇರೆ ಬೇರೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂದಾಯಿಸಿದ್ದಾರೆ ಎಂದು ಮುಂಬೈ ಪೊಲೀಸರು ತಾವು ಕೋರ್ಟ್​ಗೆ ಸಲ್ಲಿಸಿರುವ Remand Report ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಟಿಆರ್​ಪಿ ಅಕ್ರಮ ಪ್ರಕರಣದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮುಂಬೈ ಪೊಲೀಸರು ರಿಪಬ್ಲಿಕ್​ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದ್ದಾರೆ.

ಪಾರ್ಥೋ ದಾಸ್​ಗುಪ್ತಾ ಅವರು ಬಾರ್ಕ್​ ಸಂಸ್ಥೆಯ ಸಿಇಓ ಆಗಿದ್ದಾಗ ಅವರೊಂದಿಗೆ ಅಂದಿನ ಇತರೆ ಸಿಬ್ಬಂದಿ ಕೂಡಾ ಅಕ್ರಮದಲ್ಲಿ ಶಾಮೀಲಾಗಿರಬಹುದು ಎಂದು Remand Report ವರದಿಯಲ್ಲಿ ಅನುಮಾನಿಸಲಾಗಿದೆ. ಟೈಮ್ಸ್ ನೌ ವಾಹಿನಿಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಅರ್ನಬ್​ ಮತ್ತು ದಾಸ್​ಗುಪ್ತಾ ಇಬ್ಬರೂ ರಿಪಬ್ಲಿಕ್ ಟಿವಿಯ ಟಿಆರ್​ಪಿ ಹೆಚ್ಚಳದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಹೊಟೇಲುಗಳಲ್ಲಿ ಡಾಲರ್​ ರೂಪದಲ್ಲಿ ಹಣ ನೀಡಿದ್ದಾರೆ ಟಿಆರ್​ಪಿ ಹೆಚ್ಚಿಸುವುದಕ್ಕಾಗಿ ಅವರಿಬ್ಬರೂ ಕನಿಷ್ಠ 3 ಬಾರಿ ಮುಂಬೈನ ಬೇರೆ ಬೇರೆ ಹೊಟೇಲುಗಳಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ದಾಸ್​ಗುಪ್ತಾ ಅವರಿಗೆ ಅರ್ನಬ್​ ದೊಡ್ಡ ಮೊತ್ತದ ನಗದನ್ನು ನೀಡಿದ್ದಾರೆ ಮತ್ತು ಒಂದು ಬಾರಿ ಯುಎಸ್​ ಡಾಲರ್​ನಲ್ಲಿ ಅವರಿಗೆ ಹಣ ಸಂದಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಆರ್​ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್​ಚಂದಾನಿ ಬಂಧನ