‘ನಾನು ಇಲ್ಲಿಗೆ ಬಂದು ದೊಡ್ಡ ತಪ್ಪು ಮಾಡಿದೆ’: ಮತಾಂತರಗೊಂಡು ಪಾಕ್​​​ ವ್ಯಕ್ತಿಯನ್ನು ಮದುವೆಯಾಗಿ ಕಣ್ಣೀರು ಹಾಕಿದ ಭಾರತದ ಮಹಿಳೆ

ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಸರಬ್ಜೀತ್ ಕೌರ್ ಭಾರತಕ್ಕೆ ಮರಳಲು ಮೊರೆ ಇಟ್ಟಿದ್ದಾರೆ. ಸಿಖ್ ಯಾತ್ರೆಗೆ ತೆರಳಿದ್ದ ಕೌರ್, ಅಲ್ಲಿ ಮತಾಂತರಗೊಂಡು ಪಾಕಿಸ್ತಾನಿ ವ್ಯಕ್ತಿಯನ್ನು ವಿವಾಹವಾಗಿದ್ದರು. ಇದೀಗ ಪತಿ ಮತ್ತು ಅತ್ತೆ-ಮಾವನಿಂದ ಹಿಂಸೆ ಎದುರಿಸುತ್ತಿದ್ದು, ಭಾರತದಲ್ಲಿರುವ ತಮ್ಮ ಮಾಜಿ ಪತಿಯೊಂದಿಗೆ ಮಾತನಾಡಿ, ಹೇಗಾದರೂ ಮಾಡಿ ತನ್ನನ್ನು ಮರಳಿ ಕರೆಸಿಕೊಳ್ಳಲು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾನು ಇಲ್ಲಿಗೆ ಬಂದು ದೊಡ್ಡ ತಪ್ಪು ಮಾಡಿದೆ: ಮತಾಂತರಗೊಂಡು ಪಾಕ್​​​ ವ್ಯಕ್ತಿಯನ್ನು ಮದುವೆಯಾಗಿ ಕಣ್ಣೀರು ಹಾಕಿದ ಭಾರತದ ಮಹಿಳೆ
ವೈರಲ್​​ ಪೋಸ್ಟ್

Updated on: Jan 20, 2026 | 12:48 PM

ಮಹಿಳೆಯೊಬ್ಬರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ನೋವು ಪಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.  ಕಳೆದ ವರ್ಷ ನವೆಂಬರ್‌ನಲ್ಲಿ ಸಿಖ್ ತೀರ್ಥಯಾತ್ರೆಗಾಗಿ ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂಗೆ ಮತಾಂತರಗೊಂಡು ಪಾಕಿಸ್ತಾನಿ ಪುರುಷನನ್ನು ಮದುವೆಯಾದ ಭಾರತೀಯ ಮಹಿಳೆ ಸರಬ್ಜೀತ್ ಕೌರ್ (Sarabjit Kaur) ಇದೀಗ ಮತ್ತೆ ತನ್ನ ಧರ್ಮಕ್ಕ ಸೇರಬೇಕು. ಭಾರತಕ್ಕೆ ಮತ್ತೆ ಬರಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಕೌರ್ ಭಾರತದಲ್ಲಿರುವ ತನ್ನ ಮಾಜಿ ಪತಿಯೊಂದಿಗೆ ಮಾತನಾಡುತ್ತಾ, ನನಗೆ ಇಲ್ಲಿ ಕಿರುಕುಳ ನೀಡುತ್ತಿದ್ದಾರೆ, ನನ್ನನ್ನು ಹೇಗಾದರೂ ಮಾಡಿ ಪಾಕಿಸ್ತಾನದಿಂದ ಕರೆದುಕೊಂಡು ಹೋಗಿ ಎಂದು ಕಣ್ಣೀರು ಹಾಕಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ, ಸುಮಾರು 2,000 ಸಿಖ್ ಯಾತ್ರಿಕರೊಂದಿಗೆ, ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದಲ್ಲಿ ವಾಸಿಸುವ ಸರಬ್ಜೀತ್ ಕೌರ್ ಭಾರತದಿಂದ ವಾಘಾ ಗಡಿಯ ಮೂಲಕ ಗುರುನಾನಕ್ ಅವರ ಜನ್ಮದಿನವನ್ನು ಆಚರಿಸಲು ಪಾಕಿಸ್ತಾನಕ್ಕೆ ಹೋಗಿದ್ದಾರೆ. ಸರಬ್ಜೀತ್ ಕೌರ್ ಜತೆಗೆ ಹೋಗಿದ್ದ ಇತರ ಯಾತ್ರಿಕರು ವಾಪಸ್​​​ ಭಾರತಕ್ಕೆ ಬಂದಿದ್ದಾರೆ. ಆದರೆ ಸರಬ್ಜೀತ್ ಕೌರ್ ನಾಪತ್ತೆಯಾಗಿದ್ದರು. ಕೌರ್ ನವೆಂಬರ್ 4 ರಂದು (ಕೌರ್ ಪಾಕಿಸ್ತಾನಕ್ಕೆ ಬಂದ ಮರುದಿನ) ಲಾಹೋರ್‌ನಿಂದ ಸರಿಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ವಿವಾಹವಾದರು ಎಂದು ಲಾಹೋರ್ ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಪ್ರತಿ ದಿನ 100 ಜೀವಂತ ಕೀಟಗಳನ್ನು ತಿನ್ನುವ ವ್ಯಕ್ತಿ, ಕಾರಣವೇನು ಗೊತ್ತೇ?

ಇಲ್ಲಿದೆ ನೋಡಿ ಎಕ್ಸ್​​ ಖಾತೆ ಪೋಸ್ಟ್​​:

ಆದರೆ ಸ್ವಲ್ಪ ದಿನದ ನಂತರ ಸರಬ್ಜೀತ್ ಕೌರ್ ತಾನು ಮದುವೆಯಾದ ವ್ಯಕ್ತಿ ಹಾಗೂ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದಾರೆ. ನನಗೆ ಇಲ್ಲಿ ಜೀವನ ನಡೆಸಲು ಆಗುತ್ತಿಲ್ಲ. ನಾನು ಮರಳಿ ಭಾರತಕ್ಕೆ ಬರಬೇಕು. ನಾನು ಮತ್ತೆ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಲ್ಲ ಕಣ್ಮೀರು ಹಾಕಿದ್ದಾರೆ. “ನನಗೆ ನನ್ನ ಮಕ್ಕಳನ್ನು ಬಿಟ್ಟು ಬದುಕಲು ಆಗುತ್ತಿಲ್ಲ. ಇಲ್ಲಿಯವರೆಗೆ 10 ಲಕ್ಷದ ವರೆಗೆ ಹಣ ನೀಡಿದ್ದೇನೆ. ಆದರೆ ಮತ್ತೆ ಆ ಹಣ ಕೇಳಿದ್ರೆ ಹಿಂಸೆ ನೀಡುತ್ತಿದ್ದಾರೆ. ನಾನು ನನ್ನ ಮಕ್ಕಳ ಬಳಿ ಹೋಗಬೇಕು. ಇಲ್ಲಿ, ನಾನು ಪ್ರತಿ ಪೈಸೆಗೂ ಕಷ್ಟಪಡುತ್ತಿದ್ದೇನೆ” ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ