AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ ಸವಾರರೇ ಈ ಕಾನೂನಿನ ಬಗ್ಗೆ ಗೊತ್ತಾ?: ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರು ಹೀಗೆ ಮಾಡುವಂತಿಲ್ಲ

ನೋ-ಪಾರ್ಕಿಂಗ್ ನಿಯಮಗಳು ಮತ್ತು ಪೊಲೀಸರ ಅಧಿಕಾರ ಬಗ್ಗೆ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ದಂಡದ ರಸೀದಿ, ವ್ಹೀಲ್ ಕ್ಲ್ಯಾಂಪ್, ಮತ್ತು ವಾಹನ ಟೋಯಿಂಗ್ ಕಾನೂನುಬದ್ಧ ಕ್ರಮಗಳಾಗಿವೆ. ಆದರೆ, ಟೈರ್ ಗಾಳಿ ತೆಗೆಯುವುದು ಅಥವಾ ಬಲವಂತವಾಗಿ ಕೀಲಿಯನ್ನು ಕಿತ್ತುಕೊಳ್ಳುವುದು ಕಾನೂನುಬಾಹಿರ. ಅಂತಹ ಸಂದರ್ಭಗಳಲ್ಲಿ, ನಾಗರಿಕರು ಸಾಕ್ಷ್ಯ ಸಂಗ್ರಹಿಸಿ ದೂರು ನೀಡುವ ಅಧಿಕಾರ ಹೊಂದಿರುತ್ತಾರೆ.

ವಾಹನ ಸವಾರರೇ ಈ ಕಾನೂನಿನ ಬಗ್ಗೆ ಗೊತ್ತಾ?: ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರು ಹೀಗೆ ಮಾಡುವಂತಿಲ್ಲ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 20, 2026 | 2:36 PM

Share

ನಮ್ಮ ದೇಶದ ಕಾನೂನುಗಳ ಬಗ್ಗೆ ಎಲ್ಲರಿಗೂ ವಿಸ್ತೃತವಾಗಿ ಗೊತ್ತಿರಲ್ಲ, ಆದರೆ ಅದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಅದರಲ್ಲೂ ಈ ಟ್ರಾಫಿಕ್​​ ರೂಲ್ಸ್​​​​ ಬಗ್ಗೆ ಎಲ್ಲರು ತಿಳಿದುಕೊಳ್ಳಲೇಬೇಕು. ಕೆಲವು ಪೊಲೀಸರಿಗೂ ಈ ಟ್ರಾಫಿಕ್​ ರೂಲ್ಸ್​​​ (No-Parking) ಹಾಗೂ ವಾಹನ ಸಂಚಾರದ ಕಾನೂನಿನ ಬಗ್ಗೆ ತಿಳಿದಿಲ್ಲ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ತಿಳಿದುಕೊಂಡು ಸಂಚಾರ ನಿಯಮಗಳು ಹಾಗೂ ಅದಕ್ಕಿರುವ ಕಾನೂನು ಕ್ರಮಗಳೇನು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಈ ನೋ-ಪಾರ್ಕಿಂಗ್ ಬಗ್ಗೆಯೂ ಒಂದು ಕಾನೂನಿನ ನಿಯಮ ಇದೆ. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ಕಾನೂನಿನಲ್ಲಿ ಯಾವೆಲ್ಲ ನೀತಿ-ನಿಯಮಗಳು ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳನ್ನು ಪ್ರತಿಯೊಬ್ಬ ವಾಹನ ಸವಾರರು ಗಮನಿಸಲೇಬೇಕು. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಪೊಲೀಸರು ತೆಗೆದುಕೊಳ್ಳಬಾರದು.

ಒಂದು ವೇಳೆ ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಅಧಿಕೃತ ದಂಡದ ರಸೀದಿ (Challan) ನೀಡಬಹುದು. ಸ್ಥಳದಲ್ಲೇ ದಂಡ ಪಾವತಿಸಬಹುದು ಅಥವಾ ಆನ್‌ಲೈನ್ ಮೂಲಕ ಪಾವತಿಸಲು ಅವಕಾಶವಿರುತ್ತದೆ. ವಾಹನದ ಚಕ್ರಕ್ಕೆ ಲಾಕ್ (Wheel Clamp) ಹಾಕಬಹುದು. ಆಗಲೂ ನೀವು ದಂಡ ಪಾವತಿಸಿ ಲಾಕ್​​​​ ತೆಗೆಯಬಹುದು. ಪೊಲೀಸರು ಕ್ರೇನ್ ಬಳಸಿ ವಾಹನವನ್ನು ಟೋ ಮಾಡಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ಯಬಹುದು. ಆಗಾ ನೀವು ಪಾರ್ಕಿಂಗ್ ದಂಡದ ಜೊತೆಗೆ ‘ಟೋಯಿಂಗ್ ಶುಲ್ಕ’ವನ್ನೂ (Towing Charges) ಪಾವತಿಸಬೇಕಾಗುತ್ತದೆ. ವಾಹನದ ವಿಂಡ್‌ಶೀಲ್ಡ್ ಮೇಲೆ ನೋಟಿಸ್ ಅಂಟಿಸಬಹುದು. ಇದನ್ನು ಬಿಟ್ಟು ನಿಮ್ಮ ವಾಹನದ ಟೈರ್‌ನಿಂದ ಗಾಳಿಯನ್ನು ತೆಗೆಯುವ ಅಧಿಕಾರವಿಲ್ಲ. ಇದು ಕಾನೂನುಬಾಹಿವಾಗಿರುತ್ತದೆ. ಟೈರ್ ಗಾಳಿ ತೆಗೆಯುವುದು ಇದು ಖಾಸಗಿ ಆಸ್ತಿಗೆ ಹಾನಿ ಉಂಟುಮಾಡುವ ಕ್ರಿಯೆಯಾಗಿದ್ದು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 425ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಬಹುದು.

ವಾಹನದ ಟೈರ್‌ನಿಂದ ಗಾಳಿಯನ್ನು ತೆಗೆಯುವುದು ಇದು ನಿಮ್ಮ ವಾಹನಕ್ಕೆ ಮಾಡುವ ಹಾನಿ, ಒಂದು ವೇಳೆ ಗಾಳಿ ತೆಗೆದರೆ ಅದು ಅಪರಾಧ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಶ್ನಿಸಿ ಕೋರ್ಟ್​​ಗೂ ಹೋಗಬಹುದು. ಇದರ ಜತೆಗೆ ಚಾಲಕನ ಮೇಲೆ ಕೈ ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಶಿಕ್ಷಾರ್ಹ ಅಪರಾಧ. ಬಲವಂತವಾಗಿ ವಾಹನದ ಕೀಲಿಯನ್ನು ಕಸಿದುಕೊಳ್ಳುವ ಅಧಿಕಾರ ಕೂಡ ಪೊಲೀಸರಿಗೆ ಇಲ್ಲ. ಇನ್ನು ಮೋಟಾರು ವಾಹನ ಕಾಯ್ದೆ, 1988 (Motor Vehicles Act) ಮತ್ತು ಕರ್ನಾಟಕ ಸಂಚಾರಿ ನಿಯಂತ್ರಣ ಕಾಯ್ದೆಯಡಿ ಪೊಲೀಸರುನಿಯಮ ಉಲ್ಲಂಘನೆಗಾಗಿ ದಂಡದ ರಸೀದಿ ನೀಡುವುದು. ಹಾಗೂ ವಾಹನವನ್ನು ಜಪ್ತಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: Viral: ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?

ಪೊಲೀಸರು ವಾಹನ ಗಾಳಿ ತೆಗೆದರೆ ನೀವು ಹೀಗೆ ಮಾಡಬಹುದು?

ಸಾಕ್ಷ್ಯ ಸಂಗ್ರಹಿಸಿ: ಘಟನೆಯ ವೀಡಿಯೊ ಅಥವಾ ಫೋಟೋ ತೆಗೆಯಿರಿ. ಆ ಅಧಿಕಾರಿಯ ಹೆಸರು ಗಮನಿಸಿ.

ದೂರು ನೀಡಿ: ಹತ್ತಿರದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಥವಾ ಎಸಿಪಿ (ACP) ಅವರಿಗೆ ಅಧಿಕೃತ ದೂರು ನೀಡಿ.

ಸೋಷಿಯಲ್ ಮೀಡಿಯಾ: ಬೆಂಗಳೂರು ಸಂಚಾರಿ ಪೊಲೀಸರ ಅಧಿಕೃತ ಎಕ್ಸ್ (X) ಖಾತೆಗೆ (@blrechelon ಅಥವಾ @jointcptraffic) ಟ್ಯಾಗ್ ಮಾಡಿ ದೂರನ್ನು ಹಂಚಿಕೊಳ್ಳಿ.

112 ಗೆ ಕರೆ ಮಾಡಿ: ಸ್ಥಳದಲ್ಲೇ ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ