Viral: ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?
ಎಷ್ಟೇ ದುಡಿದ್ರು ತಿಂಗಳ ಕೊನೆಯಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ, ಉದ್ಯೋಗದಲ್ಲಿರುವ ಅದೆಷ್ಟೋ ಜನರು ಹೇಳುವುದು ಹೀಗಯೇ. ಹೀಗಿರುವಾಗ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಬ್ಬರು ಬೆಂಗಳೂರಿಗೆ ಮರಳಲು ಮುಂದಾಗಿದ್ದಾರೆ. ಆದರೆ ಈ ನಗರದಲ್ಲಿ ಬದುಕಲು 90 ಲಕ್ಷ ರೂ ಸಂಬಳವಿರುವ ಉದ್ಯೋಗ ಸಾಕಾಗುತ್ತಾ ಎನ್ನುವ ಪ್ರಶ್ನೆಯೊಂದು ಅವರಲ್ಲಿ ಮೂಡಿದೆ. ಈ ಬಗ್ಗೆ ಪೋಸ್ಟ್ ಮಾಡಿದ್ದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು, ಜನವರಿ 20: ವಿದೇಶದಲ್ಲಿ ಉದ್ಯೋಗಕ್ಕೆಂದು ತೆರಳಿ ಅಲ್ಲಿ ಕೈ ತುಂಬಾ ಸಂಬಳ ಪಡೆದುಕೊಳ್ತಾರೆ. ಆದರೆ ಮತ್ತೆ ಭಾರತಕ್ಕೆ ಮರಳುವ ಸಂದರ್ಭ ಬಂದಾಗ ಮೊದಲು ಯೋಚಿಸುವುದೇ ಸಂಬಳದ ಬಗ್ಗೆ. ಭಾರತದಲ್ಲಿ ಕಡಿಮೆ ಸಂಬಳಕ್ಕೆ ಹೇಗೆ ಹೊಂದಿಕೊಳ್ಳೋದು ಎನ್ನುವ ಆಲೋಚನೆ ಬರುವುದು ಸಹಜ. ಆದರೆ ಇಲ್ಲೊಬ್ಬ ಅನಿವಾಸಿ ಭಾರತೀಯನದ್ದು(NRI) ಅದೇ ಪರಿಸ್ಥಿತಿ. ಅಮೆರಿಕದಲ್ಲಿ ನೆಲೆಸಿರುವ ಎನ್‌ಆರ್‌ಐರೊಬ್ಬರು ಬೆಂಗಳೂರಿನಲ್ಲಿ (Bengaluru) 90 ಲಕ್ಷ ರೂ ಉತ್ತಮ ಸಂಬಳವೇ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ರಿಟರ್ನ್ ಟು ಇಂಡಿಯಾ (returntoindia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನಶೀರ್ಷಿಕೆಯಲ್ಲಿ ಭಾರತಕ್ಕೆ ಹಿಂದಿರುಗಿದವರಲ್ಲಿ ಬೆಂಗಳೂರಿನಲ್ಲಿ 90 ಲಕ್ಷ ಉತ್ತಮ ಸಂಬಳವೇ? (ಪಿಹೆಚ್ ಡಿ + 12 ವರ್ಷಗಳು) ಎಂದು ಪ್ರಶ್ನೆ ಕೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್‌ನಲ್ಲಿ ಅನಿವಾಸಿ ಭಾರತೀಯರೊಬ್ಬರು ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಿದ್ದು, ಒಂದು ವಿಶೇಷ ಕ್ಷೇತ್ರದಲ್ಲಿ 12 ವರ್ಷಗಳ ಕಾಲ ಅನುಭವ ಹೊಂದಿರುವುದನ್ನು ಉಲ್ಲೇಖಿಸಿದ್ದಾರೆ. ಸದ್ಯ ಅಮೆರಿಕದಲ್ಲಿ ವರ್ಷಕ್ಕೆ ಅಂದಾಜು 1.60 ಕೋಟಿ ರೂಪಾಯಿ ($190,000) ಸಂಬಳವಿರುವ ಉದ್ಯೋಗದಲ್ಲಿದ್ದು, ಇದೀಗ ಬೆಂಗಳೂರಿಗೆ ಮರಳಲು ಯೋಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಲು ಬೆಂಗಳೂರಿಗೆ ಬರುವವರಿದ್ದಾರೆ. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ವರ್ಷಕ್ಕೆ 90 ಲಕ್ಷ ರೂಪಾಯಿ ಪ್ಯಾಕೇಜ್ ಇರುವ ಉದ್ಯೋಗವಿದೆ. ಇದರಲ್ಲಿ 74 ಲಕ್ಷ ರೂಪಾಯಿ ಮೂಲ ಸಂಬಳವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಲು, ಮಗುವಿನ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಭರಿಸಿ, ಉತ್ತಮ ಜೀವನ ನಡೆಸಲು ಈ 90 ಲಕ್ಷ ರೂಪಾಯಿ ಸಂಬಳ ಸಾಕಾ?. ದಯವಿಟ್ಟು ಇದು ಯೋಗ್ಯವಾದ ಕೊಡುಗೆಯೇ ಎಂಬುದರ ಕುರಿತು ಸ್ವಲ್ಪ ಹೇಳಬಹುದೇ?. ಕಂಪನಿ ಹಾಗೂ ನಾನು ನಿರ್ವಹಿಸಬೇಕಾದ ಪಾತ್ರ ತುಂಬಾ ದೊಡ್ಡದಾಗಿದೆ, ಆದ್ದರಿಂದ ನನ್ನ ವೃತ್ತಿಜೀವನದ ಮೇಲೆ ಇದರ ಪರಿಣಾಮವು ಅಗಾಧವಾಗಿರುತ್ತದೆ. ಆದರೆ ನಾವು ಆರ್ಥಿಕ ಆಯ್ಕೆ ಕೆಟ್ಟದಾಗಿದ್ದರೆ. ನಾನು ಈ ಪ್ರಸ್ತಾಪವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಯಾವುದೇ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: ಹೆಣ್ಮಕ್ಕಳಿಗೆ ಬೆಂಗಳೂರಿನ ಈ ಪ್ರದೇಶ ಸೇಫ್ ಅಲ್ಲ; ಮಹಿಳೆ ಹೀಗೆನ್ನಲು ಕಾರಣ ಇದೇ ನೋಡಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅದನ್ನು ಅತಿಯಾಗಿ ಯೋಚಿಸಬೇಡಿ, ಇದು ಒಳ್ಳೆಯ ನಡೆ. ನೀವು ಯಾವಾಗ ಬೇಕಾದರೂ ಹಿಂತಿರುಗಬಹುದು ಏಕೆಂದರೆ ನಿಮ್ಮ ಬಳಿ ಯುಎಸ್ ಪಾಸ್‌ಪೋರ್ಟ್ ಇದೆ, ಇದು ಎಲ್ಲರಿಗೂ ಇರುವ ಐಷಾರಾಮಿ ವಸ್ತುವಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಪಿಎಚ್‌ಡಿ ಮತ್ತು 12 ವರ್ಷದ ಅನುಭವಕ್ಕೆ 90 ಲಕ್ಷ ತುಂಬಾನೇ ಕಡಿಮೆ. ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ 1.5 ಕೋಟಿಗಿಂತ ಹೆಚ್ಚು ಸಂಬಳ ಇದೆ. ನೀವು ಕನಿಷ್ಠ 1.8 ಕೋಟಿ ರೂಪಾಯಿಗೆ ಬೇಡಿಕೆ ಇಡಬೇಕು. ಈ ಸಂಬಳಕ್ಕೆ ಕೆಲಸ ಒಪ್ಪಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಬೆಂಗಳೂರಿನಲ್ಲಿ 90 ಲಕ್ಷ ಸಂಬಳ ಎಂದರೆ ತುಂಬಾನೇ ಕಡಿಮೆ. ಹೀಗಾಗಿ ನೀವು ನಿಮ್ಮ ಬಾಸ್ ತೋಟಕ್ಕೆ ನೀರು ಹಾಕಿ ಇನ್ನೂ ಸ್ವಲ್ಪ ಹೆಚ್ಚು ಸಂಬಳ ಕೇಳಿ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
