AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹೆಣ್ಮಕ್ಕಳಿಗೆ ಬೆಂಗಳೂರಿನ ಈ ಪ್ರದೇಶ ಸೇಫ್ ಅಲ್ಲ; ಮಹಿಳೆ ಹೀಗೆನ್ನಲು ಕಾರಣ ಇದೇ ನೋಡಿ

ರಾತ್ರಿ ಹೊತ್ತಿನಲ್ಲಿ ಬಿಡಿ, ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಹೀಗಿರುವಾಗ ಬೆಂಗಳೂರಿನ ಹೊರವಲಯವು ರಾತ್ರಿಯ ವೇಳೆ ಅಸುರಕ್ಷಿತವೆನಿಸುತ್ತದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಕೊಳ್ಳುತ್ತಿದ್ದಂತೆ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹೆಣ್ಮಕ್ಕಳಿಗೆ ಬೆಂಗಳೂರಿನ ಈ ಪ್ರದೇಶ ಸೇಫ್ ಅಲ್ಲ; ಮಹಿಳೆ ಹೀಗೆನ್ನಲು ಕಾರಣ ಇದೇ ನೋಡಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Jan 19, 2026 | 2:14 PM

Share

ಬೆಂಗಳೂರು, ಜನವರಿ 19: ಬಸ್ಸಿನಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಹೆಣ್ಣು ಮಕ್ಕಳಿಗೆ ಹಾಡುಹಗಲಲ್ಲೇ ಅಹಿತಕರ ಅನುಭವವಾಗಿರಬಹುದು. ಆದರೆ ಬೆಂಗಳೂರಿನ (Bengaluru) ಹೊರವಲಯದಲ್ಲಿರಾತ್ರಿ ಓಡಾಡುತ್ತಿದ್ದ ಮಹಿಳೆಗೆ , ಹೆಣ್ಣು ಮಕ್ಕಳಿಗೆ ಈ ಸ್ಥಳ ಸೇಫ್ ಅಲ್ಲ ಎಂದೆನಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಜಿಮ್‌ನಿಂದ ಹಿಂತಿರುಗುವ ವೇಳೆ ವಿಡಿಯೋ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

ದಿಯಪ್ಪರ್‌ಗರ್ಲಿ (@theyappergirlie) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೂ ಬೆಂಗಳೂರಿನ ಹೊರವಲಯದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಜಿಮ್‌ನಿಂದ ಹಿಂತಿರುಗಿದಾಗ ಬೀದಿ ದೀಪಗಳಿಲ್ಲದ ಈ ಪ್ರದೇಶವನ್ನು ನೋಡಿ ಶಾಕ್ ಆಗಿದ್ದಾರೆ. ಇಲ್ಲಿ ನಿಶ್ಯಬ್ದ ಮತ್ತು ಕತ್ತಲೆ ಮಾತ್ರ ಎಂದು ತನ್ನ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by pri (@theyappergirlie)

ನಾನು ಈ ಸ್ಥಳದಿಂದ ದೂರ ಹೋಗಲು ಬಯಸುತ್ತೇನೆ. ಬೀದಿ ದೀಪಗಳಿಲ್ಲದ ಈ ಸ್ಥಳ ತುಂಬಾ ಅಪಾಯಕಾರಿ ಎಂದೆನಿಸುತ್ತಿದೆ. ಹೆಣ್ಣು ಮಕ್ಕಳೇ ನೀವು ಹೊರವಲಯಕ್ಕೆ ಬರಲು ಬಯಸಿದರೆ, ದಯವಿಟ್ಟು ಎರಡು ಬಾರಿ ಯೋಚಿಸಿ. ನಗರದ ಭಾಗವು ತುಂಬಾ ಚೆನ್ನಾಗಿದೆ. ಆದರೆ ಹೊರವಲಯ ಖಂಡಿತ ಸೇಫ್ ಇಲ್ಲ ಎಂದು ಹೇಳಿರುವುದನ್ನು ನೋಡಬಹುದು.

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬ್ಲೂಆರ್‌ನ ಹೊರವಲಯಗಳು ಹಗಲು ಹೊತ್ತಿನಲ್ಲಿಯೂ ಅಪಾಯಕಾರಿ ಎನಿಸುತ್ತಿದ್ದವು, ಆ ಪ್ರದೇಶಗಳನ್ನು ಹಾದುಹೋಗುವಾಗ ನಿಮ್ಮ ಕ್ಯಾಮೆರಾವನ್ನು ಆನ್‌ನಲ್ಲಿ ಇರಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇವತ್ತು ಬೆಂಗಳೂರಿನಲ್ಲಿ ಎಲ್ಲೇ ಹೋದರೂ ರಾತ್ರಿ 9 ಗಂಟೆಯ ನಂತರ ನಿಮಗೆ ಹಾಗೆಯೇ ಅನಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ ಸಂಪಾದಿಸುವ ಮಹಿಳೆ

ಇನ್ನೊಬ್ಬರು, ನಗರದ ಬಗ್ಗೆ ಇಲ್ಲಸಲ್ಲದನ್ನು ಹೇಳುವುದನ್ನು ನಿಲ್ಲಿಸಿ. ನಾನು 13 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದೇನೆ ಮತ್ತು ಕಳೆದ ವರ್ಷದಿಂದ ನಾವು ಹೊರವಲಯಕ್ಕೆ ಸ್ಥಳಾಂತರಗೊಂಡಿದ್ದೇವೆ. ನನ್ನನ್ನು ನಂಬಿರಿ, ಇದು ಇತರ ಸ್ಥಳಗಳಿಗಿಂತ ತುಂಬಾ ಉತ್ತಮವಾಗಿದೆ. ನೀವು ಹೊರವಲಯದ ಯಾವ ಸ್ಥಳದಲ್ಲಿದ್ದೀರಿ ಎಂದು ನನಗೆ ಖಚಿತವಿಲ್ಲ. ಆದರೆ ನಾವು ನಗರ ಮಿತಿಯ ಹೊರವಲಯದಲ್ಲಿದ್ದೇವೆ, ಈ ಸ್ಥಳ ಅದ್ಭುತವಾಗಿದೆ. ಹೊಂದಿಕೊಳ್ಳಲು ಪ್ರಯತ್ನಿಸಿ ಮತ್ತು ದೂರು ನೀಡುವುದನ್ನು ನಿಲ್ಲಿಸಿ. ನೀವು ಇನ್ನೂ ಅಸುರಕ್ಷಿತರಾಗಿದ್ದರೆ ಪೆಪ್ಪರ್ ಸ್ಪ್ರೇ ಅನ್ನು ಕೈಯಲ್ಲಿ ಇಟ್ಟುಕೊಳ್ಳಿ. ನೀವು ಇಲ್ಲಿ ಅಸುರಕ್ಷಿತರೆಂದು ಭಾವಿಸಿದರೆ, ಇತರ ಎಲ್ಲಾ ನಗರದ ಹೊರವಲಯಗಳು ಒಂದೇ ಆಗಿರುತ್ತವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 19 January 26