AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನಲ್ಲಿ ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ ಸಂಪಾದಿಸುವ ಮಹಿಳೆ

ದುಡಿಮೆ ಯಾವುದಾದರೇನು, ಪ್ರಾಮಾಣಿಕವಾಗಿ ದುಡಿದರೆ ಅದರಲ್ಲಿ ಸಿಗುವ ತೃಪ್ತಿ ಮತ್ಯಾವುದರಲ್ಲಿ ಸಿಗುವುದಿಲ್ಲ. ಆಟೋವನ್ನೇ ಬದುಕಿಗೆ ಆಧಾರವಾಗಿಸಿಕೊಂಡಿರುವ ಬೆಂಗಳೂರಿನ ಈ ಮಹಿಳೆಯ ತಿಂಗಳ ಸಂಪಾದನೆಯ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಹೌದು, ಮಹಿಳಾ ಪ್ರಯಾಣಿಕರೊಬ್ಬರು ಈ ಬಗ್ಗೆ ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral: ಬೆಂಗಳೂರಿನಲ್ಲಿ ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ ಸಂಪಾದಿಸುವ ಮಹಿಳೆ
ಮಹಿಳಾ ಆಟೋ ಚಾಲಕಿImage Credit source: Twitter
ಸಾಯಿನಂದಾ
|

Updated on:Jan 19, 2026 | 12:01 PM

Share

ಬೆಂಗಳೂರು, ಜನವರಿ 19: ಮಹಿಳೆಯರು ಆಟೋ ಓಡಿಸುವುದು ತುಂಬಾನೇ ಕಡಿಮೆ ಎನ್ನುವ ಕಾಲವಿತ್ತು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಜೀವನ ನಿರ್ವಹಣೆಗಾಗಿ ಆಟೋ ಓಡಿಸುವ ಅದೆಷ್ಟೋ ಮಹಿಳೆಯರು ಇದ್ದಾರೆ. ಕೆಲವರು ಇಷ್ಟ ಪಟ್ಟು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ಬದುಕಿನ ನಿರ್ವಹಣೆಗಾಗಿ ಈ ಕಾಯಕ ಅನಿವಾರ್ಯವಾಗಿರುತ್ತದೆ. ಆದರೆ ಮಹಿಳೆ ಓಡಿಸುವ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಆಟೋ ಚಾಲಕಿಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಆಟೋ ಓಡಿಸುವ ಈ ಮಹಿಳೆ ತಿಂಗಳಿಗೆ 45 ಸಾವಿರ ರೂ ಸಂಪಾದಿಸುತ್ತಾರಂತೆ. ಈ ವೇಳೆ ಮಹಿಳಾ ಆಟೋ ಚಾಲಕಿ (woman auto driver) ಕೋರಮಂಗಲದ ನಿವಾಸಿಯಾಗಿರುವುದು ತಿಳಿದು ಬಂದಿದೆ. ಮಹಿಳಾ ಪ್ರಯಾಣಿಕರೊಬ್ಬರು ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ ಈ ಆಟೋ ಚಾಲಕಿಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಸ್ನೇಹಾ ಪ್ರಭು (Sneha Prabhu) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಆಟೋ ಬುಕ್ ಮಾಡಿದಾಗ ಸಿಕ್ಕ ಮಹಿಳಾ ಆಟೋ ಚಾಲಕಿ ಬಗ್ಗೆ ಮಹಿಳಾ ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ಈ ಮಹಿಳೆಯ ಜತೆಗೆ ಮಾತು ಕಥೆ ನಡೆಸಿದ ವೇಳೆ ಸಿಕ್ಕ ಅನುಭವವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಈ ಪೋಸ್ಟ್‌ನಲ್ಲಿ ಆಟೋ ಚಾಲಕಿ ಜತೆಗೆ ಮಾತಿಗಿಳಿದಾಗ  ಏನೆಲ್ಲಾ ಹೇಳಿದಳು ಎನ್ನುವುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಮಹಿಳಾ ಚಾಲಕಿಯೂ ನಮ್ಮ ಯಾತ್ರೆಯಿಂದ ಸುಮಾರು 40 ದಿನಗಳ ತರಬೇತಿ ಪಡೆದಿದ್ದಾರೆ. ಇವರಿಗೆ ಎಲೆಕ್ಟ್ರಿಕ್ ಆಟೋ ಓಡಿಸುವುದು ಸುಲಭವಂತೆ. ಸಾಲ ಪಡೆದು ಆಟೋ ಖರೀದಿಸಿದ್ದು, ಈಗಾಗಲೇ 2.5 ಲಕ್ಷ ರೂಪಾಯಿ ಸಾಲ ತೀರಿಸಿದ್ದಾರೆ. ತಿಂಗಳಿಗೆ ಸರಿ ಸುಮಾರು 45,000 ರೂಪಾಯಿ ಸಂಪಾದನೆ ಮಾಡುತ್ತಿದ್ದು, ಅದಕ್ಕಿಂತಲೂ ಸಂಪಾದನೆಯಾಗುತ್ತದೆ ಎಂದು ಹೇಳಿರುವ ಬಗ್ಗೆ ಇಲ್ಲಿ ಬರೆದುಕೊಂಡಿದ್ದಾರೆ.

ಕೋರಮಂಗಲದಾದ್ಯಂತ 300 ಮಹಿಳಾ ಆಟೋ ಡ್ರೈವರ್‌ಗಳಿದ್ದಾರೆ. ಅವರೆಲ್ಲರೂ ಇವರ ಸಂಪರ್ಕದಲ್ಲಿದ್ದಾರಂತೆ. ಇಲ್ಲಿಯವರೆಗೆ ನನ್ನನ್ನು ಕೀಳರಿಮೆಯಿಂದ ನೋಡಿಲ್ಲ. ಯಾರೂ ತನ್ನನ್ನು ಅಸಭ್ಯವಾಗಿ ನಡೆಸಿಕೊಂಡಿಲ್ಲ, ಜನಸಾಮಾನ್ಯರು ಹೆಚ್ಚಾಗಿ ಬೆಂಬಲ ನೀಡುತ್ತಾರೆ. ನನಗೆ ನನ್ನ ಈ ಕೆಲಸದಲ್ಲಿ ತನಗೆ ಖುಷಿ ಕೊಡುವ ಸಂಗತಿ ಎಂದರೆ, ಟ್ರಾಫಿಕ್ ಸಿಗ್ನಲ್ ಬಳಿ ಯುವಕರು, ಅದರಲ್ಲೂ ಹೆಣ್ಣುಮಕ್ಕಳು ತನ್ನೊಂದಿಗೆ ಮಾತನಾಡುವುದು. ಅವರು ಹೆಮ್ಮೆಯಿಂದ, ಸಂತೋಷದಿಂದ ಕೈ ಬೀಸುತ್ತಾ, ನಗುತ್ತಾ ಮಾತನಾಡುತ್ತಾರೆ. ಪ್ರಯಾಣಿಕರು ನನಗೆ ಒಳ್ಳೆಯದಾಗಲಿ ಎಂದು ಹೇಳಿದಾಗ ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ನಾನು ತುಂಬಾ ಖುಷಿಯಾಗಿದ್ದೇನೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. ಈ ಮಹಿಳಾ ಪ್ರಯಾಣಿಕರು ಬೆಂಗಳೂರಿನಲ್ಲಿ ಇಂಥ ಒಳ್ಳೊಳ್ಳೆ ವಿಚಾರಗಳು ನೋಡಲು ಸಿಗುತ್ತದೆ ಎಂದು ಈ ಪೋಸ್ಟ್ ಕೊನೆಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ

ಈ ಪೋಸ್ಟ್ ಮೂರು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ಅದೆಷ್ಟೋ ಮಹಿಳಾ ಆಟೋ ಚಾಲಕಿ ಭದ್ರ ಬದುಕನ್ನು ಕಟ್ಟಿಕೊಂಡಿದ್ದಾರೆ, ಇದನ್ನು ನೋಡುವಾಗ ಖುಷಿಯಾಗುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಈ ಕಥೆಯನ್ನು ಹಂಚಿಕೊಂಡಿದ್ದು ಅದ್ಭುತವಾಗಿದೆ. ನಮ್ಮ ಯಾತ್ರಿಯಿಂದ ತರಬೇತಿ ಪಡೆಯುವುದು ಮತ್ತು ಎಲೆಕ್ಟ್ರಿಕ್ ಆಟೋವನ್ನು ಸುಲಭವಾಗಿ ಓಡಿಸಬಹುದು ಎಂದು ಹೇಳುವುದನ್ನು ಕೇಳಿದರೆ ಖುಷಿಯಾಗುತ್ತದೆ. ಆ ರೀತಿಯಾಗಿ ತನ್ನದೇ ಆದ ಹಾದಿಯನ್ನು ನಿರ್ಮಿಸಿಕೊಳ್ಳುವುದು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನೊಬ್ಬರು, ಭಾರತ ದೇಶದಲ್ಲಿ ಮಹಿಳಾ ಆಟೋ ಮತ್ತು ಕ್ಯಾಬ್ ಚಾಲಕಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ಖುಷಿಯ ಸಂಗತಿ. ರಾತ್ರಿ ವೇಳೆ ಮಹಿಳೆಯರು ಹೆಚ್ಚು ಸುರಕ್ಷಿತರಾಗಿ ಪ್ರಯಾಣಿಸಲು ಸಾಧ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 pm, Mon, 19 January 26