ಮೂತ್ರ ವಿಸರ್ಜನೆ ಮಾಡುವಾಗ ಅತಿಯಾಗಿ ನೊರೆ ಬರುವುದು ನಿರ್ಜಲೀಕರಣವೇ ಅಥವಾ ಮಧುಮೇಹದ ಸಂಕೇತವೇ ತಿಳಿದುಕೊಳ್ಳಿ
ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದಲ್ಲಿ ನೊರೆ ಕಾಣಿಸಿಕೊಂಡಲ್ಲಿ ಅದನ್ನು ಹಗುರವಾಗಿ ಪರಿಗಣಿಸಬೇಡಿ. ಸಾಮಾನ್ಯವಾಗಿ ಒತ್ತಡದಲ್ಲಿದ್ದಾಗ ಮೂತ್ರ ವಿಸರ್ಜಿಸುವಾಗ ಕೆಲವು ಸೆಕೆಂಡು ನೊರೆ ಬಂದು ಕಣ್ಮರೆಯಾಗುತ್ತಿದ್ದರೆ, ಅದು ಚಿಂತಿಸಬೇಕಾದ ವಿಷಯವಲ್ಲ. ಆದರೆ ಮೂತ್ರ ವಿಸರ್ಜಿಸಿದಾಗ ನೊರೆ ರೂಪುಗೊಂಡು ಕಣ್ಮರೆಯಾಗುವುದಕ್ಕೆ ಸಮಯ ತೆಗೆದುಕೊಂಡರೆ, ಅದು ದೇಹದಲ್ಲಿ ಆಗಿರುವಂತಹ ಬದಲಾವಣೆ ಮುನ್ಸೂಚನೆಯಾಗಿರುತ್ತದೆ ಎಂಬುದನ್ನು ಮರೆಯಬೇಡಿ. ಹಾಗಾದರೆ ಈ ರೀತಿಯಾಗವುದು ಮಧುಮೇಹದ ಸಂಕೇತವೇ, ಅಥವಾ ಇದು ಬೇರೆ ಕಾಯಿಲೆಯ ಲಕ್ಷಣವೇ ಎಂಬುದನ್ನು ತಿಳಿದುಕೊಳ್ಳಿ.

ಮೂತ್ರ ವಿಸರ್ಜಿಸುವಾಗ ಮೂತ್ರದಲ್ಲಿ ನೊರೆ ಕಾಣಿಸಿಕೊಂಡರೆ, ಅದು ಸಾಮಾನ್ಯವೇ ಅಥವಾ ಯಾವುದಾದರೂ ರೋಗದ ಲಕ್ಷಣವೇ ಎಂಬ ಗೊಂದಲ ಉಂಟಾಗುವುದು ಸಹಜ. ಅದರಲ್ಲಿಯೂ ಕೆಲವರು ಈ ರೀತಿಯಾಗುವುದರ ಬಗ್ಗೆ ಯೋಚಿಸುವ ಬದಲು ಅದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಸಾಮಾನ್ಯವಾಗಿ ಒತ್ತಡದಲ್ಲಿದ್ದಾಗ ಮೂತ್ರ ವಿಸರ್ಜಿಸುವಾಗ ಕೆಲವು ಸೆಕೆಂಡು ನೊರೆ ಬಂದು ಕಣ್ಮರೆಯಾಗುತ್ತಿದ್ದರೆ, ಅದು ಚಿಂತಿಸಬೇಕಾದ ವಿಷಯವಲ್ಲ. ಆದರೆ ಮೂತ್ರ ವಿಸರ್ಜಿಸಿದಾಗ ನೊರೆ (Foamy Urine) ರೂಪುಗೊಂಡು ಕಣ್ಮರೆಯಾಗುವುದಕ್ಕೆ ಸಮಯ ತೆಗೆದುಕೊಂಡರೆ, ಅದು ದೇಹದಲ್ಲಿ ಆಗಿರುವಂತಹ ಬದಲಾವಣೆ ಮುನ್ಸೂಚನೆಯಾಗಿರುತ್ತದೆ ಎಂಬುದನ್ನು ಮರೆಯಬೇಡಿ. ಹಾಗಾದರೆ ಈ ರೀತಿಯಾಗವುದು ಮಧುಮೇಹದ (Diabetes) ಸಂಕೇತವೇ, ಅಥವಾ ಇದು ಬೇರೆ ಕಾಯಿಲೆಯ ಲಕ್ಷಣವೇ ಎಂಬುದನ್ನು ತಿಳಿದುಕೊಳ್ಳಿ.
ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಘಟಕ ಮುಖ್ಯಸ್ಥ ಡಾ. ಎಲ್. ಎಚ್. ಘೋಟೆ ಹೇಳುವ ಪ್ರಕಾರ, ಕೆಲವೊಮ್ಮೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಶೌಚಾಲಯದ ಸೀಟಿನ ಮೇಲ್ಮೈಯಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ನೊರೆ ಕಾಣಿಸಿಕೊಳ್ಳಬಹುದು. ಆದರೆ ಇದು ನಿಯಮಿತವಾಗಿ ಕಂಡುಬರುತ್ತಿದ್ದು, ಆ ನೊರೆಯನ್ನು ಹೊರಹಾಕಲು ನೀವು ಒಂದಕ್ಕಿಂತ ಹೆಚ್ಚು ಬಾರಿ ಫ್ಲಶ್ ಮಾಡಬೇಕಾದರೆ, ಅಥವಾ ನೊರೆ ಬಿಳಿಯಾಗಿ ಕಾಣಿಸಿಕೊಂಡರೆ, ಆದಷ್ಟು ಬೇಗೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಮೂತ್ರದಲ್ಲಿ ನೊರೆ ಬರುವುದಕ್ಕೆ ಕಾರಣವೇನು?
ಸಾಮಾನ್ಯವಾಗಿ ಮೂತ್ರದಲ್ಲಿ ನಿಯಮಿತವಾಗಿ ಹೆಚ್ಚು ನೊರೆ ಬರುತ್ತಿದ್ದರೆ, ಅದು ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ (ಪ್ರೋಟೀನುರಿಯಾ) ಇರುವುದನ್ನು ಸೂಚಿಸುತ್ತದೆ. ಈ ರೀತಿ ಹೆಚ್ಚುವರಿ ಪ್ರೋಟೀನ್ ಇರುವುದು ಮಧುಮೇಹ ಅಥವಾ ಲೂಪಸ್‌ನಂತಹ ಮೂತ್ರಪಿಂಡಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಕಾಯಿಲೆಗಳ ಸಂಕೇತವಾಗಿರಬಹುದು. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಯ ಮೂನ್ಸೂಚನೆಯೂ ಆಗಿರಬಹುದು.
ಇದನ್ನೂ ಓದಿ: ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ
ನೊರೆ ಮೂತ್ರ ಮಧುಮೇಹದ ಸಂಕೇತವೇ?
ಕೆಲವೊಮ್ಮೆ ನೊರೆ ಮೂತ್ರವು ಮಧುಮೇಹಕ್ಕೆ ಸಂಬಂಧಿಸಿದ ಮೂತ್ರಪಿಂಡದ ಸಮಸ್ಯೆಗಳ ಲಕ್ಷಣವಾಗಿರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ಆಗಾಗ ಹೆಚುವುದಕ್ಕೆ ಅಥವಾ ದೀರ್ಘಕಾಲದವರೆಗೆ ಹೆಚ್ಚಿದ್ದರೆ, ಅದು ನಿಮ್ಮ ಮೂತ್ರಪಿಂಡಗಳ ಕೆಲವು ಭಾಗಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತದಿಂದ ಗ್ಲೂಕೋಸ್ ಮತ್ತು ಪ್ರೋಟೀನ್ ಅನ್ನು ಫಿಲ್ಟರ್ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ನೊರೆ ಮೂತ್ರಕ್ಕೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ನಿರ್ಜಲೀಕರಣದಿಂದಲೂ ಮೂತ್ರದಲ್ಲಿ ನೊರೆ ಬರಬಹುದು, ಆದರೆ ಅಂತಹ ಸಂದರ್ಭಗಳಲ್ಲಿ, ಮೂತ್ರವು ಹಳದಿ ಬಣ್ಣದ್ದಾಗಿರಬೇಕು. ಹಾಗಿದ್ದಲ್ಲಿ, ನೀರಿನ ಕೊರತೆಯಿಂದಾಗಿ ನೊರೆ ಬರಬಹುದು. ಈ ಪರಿಸ್ಥಿತಿಯಲ್ಲಿ, ನೀವು ದಿನಕ್ಕೆ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯಲು ಪ್ರಾರಂಭಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




