AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ

ರಾತ್ರಿ ನಿದ್ರೆ ಸರಿಯಾಗಿ ಬರ್ತ್ತಿಲ್ವಾ? ಪದೇ ಪದೇ ಎಚ್ಚರವಾಗಿ ನಿದ್ದೆ ಹಾಳಾಗ್ತಿದ್ಯಾ? ಈ ರೀತಿ ನಿಮಗೂ ಆಗ್ತಾ ಇದ್ರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ರಾತ್ರಿ 7 ರಿಂದ 8 ಗಂಟೆ ನಿದ್ರೆ ಮಾಡುವುದು ಬಹಳ ಮುಖ್ಯ. ಅದು ಸರಿಯಾಗಿ ಆಗದಿದ್ದರೆ ಅದು ದೇಹಕ್ಕೆ ಅಪಾಯಕಾರಿ. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅನೇಕ ರೀತಿಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನಿಮಗೂ ನಿದ್ದೆ ಮಾಡುವಾಗ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಪ್ಪದೆ ಈ ಸ್ಟೋರಿ ಓದಿ. ತಡೆಗಟ್ಟುವ ಕ್ರಮಗಳನ್ನು ತಿಳಿದುಕೊಳ್ಳಿ.

ನಿದ್ದೆಯಿಂದ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಡಮಾಡದೆಯೇ ಈ ವಿಷಯಗಳನ್ನು ತಿಳಿದುಕೊಳ್ಳಿ
Frequent Night Waking Heart & Brain RisksImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jan 19, 2026 | 8:00 PM

Share

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಮೊದಲು ಸರಿಯಾಗಿ ನಿದ್ರೆ ಮಾಡಬೇಕು. ರಾತ್ರಿ ನಿದ್ರೆ ಸರಿಯಾಗಿ ಆಗದೆಯೇ ಪದೇ ಪದೇ ಎಚ್ಚರವಾಗುತ್ತಿದ್ದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಹೌದು, ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯ ಪ್ರಕಾರ, ರಾತ್ರಿ ನಿದ್ರೆಯಲ್ಲಿ ಆಗಾಗ ಎಚ್ಚರಗೊಂಡು ಸರಿಯಾಗಿ ನಿದ್ರೆ ಆಗದಿದ್ದರೆ ಅದು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಅನೇಕ ರೀತಿಯ ಅಪಾಯಕಾರಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ, ವ್ಯಕ್ತಿಯು ರಾತ್ರಿ ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಮಾಡಬೇಕು ಇಲ್ಲವಾದಲ್ಲಿ ಇದು ಆರೋಗ್ಯವನ್ನು ಹದಗೆಡಿಸುತ್ತದೆ. ನಿಮಗೂ ನಿದ್ದೆ (Sleep) ಮಾಡುವಾಗ ಪದೇ ಪದೇ ಎಚ್ಚರವಾಗಿ ನಿದ್ರೆ ಹಾಳಾಗುತ್ತಿದ್ದರೆ ತಪ್ಪದೆ ಈ ಸ್ಟೋರಿ ಓದಿ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿದ್ರೆ ಸರಿಯಾಗಿ ಆಗದಿದ್ದವರು ಅಧಿಕ ರಕ್ತದೊತ್ತಡದಂತಹ ಅಪಾಯವನ್ನು ಹೊಂದಿರುತ್ತಾರೆ. ನಿದ್ರೆ ಸರಿಯಾಗಿ ಆಗದಿದ್ದಾಗ ದೇಹಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳುವುದಕ್ಕೆ ಸರಿಯಾದ ಅವಕಾಶ ಸಿಗುವುದಿಲ್ಲ, ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಇದು ಮೆದುಳಿನ ಮೇಲೂ ಪರಿಣಾಮ ಬೀರುತ್ತವೆ ಎಂದು ಸಂಶೋಧನೆಯು ಬಹಿರಂಗಗೊಂಡಿದೆ.

ನಿದ್ರೆಯಲ್ಲಾಗುವ ಅಡಚಣೆ ಹೃದಯಕ್ಕೆ ಹೇಗೆ ಅಪಾಯಕಾರಿಯಾಗುತ್ತದೆ?

ರಾತ್ರಿ ಚೆನ್ನಾಗಿ ನಿದ್ರೆ ಮಾಡುವ ಸಮಯದಲ್ಲಿ, ಹೃದಯವು ವಿಶ್ರಾಂತಿ ಪಡೆಯುತ್ತದೆ ಮತ್ತು ರಕ್ತದೊತ್ತಡವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಆದರೆ ನಿದ್ರೆಗೆ ಪದೇ ಪದೇ ಅಡ್ಡಿಯಾದಾಗ, ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ಉರಿಯೂತಕ್ಕೆ ಕಾರಣವಾಗಬಹುದು, ಅಷ್ಟೇ ಅಲ್ಲ, ಹೃದಯಾಘಾತದ ಅಪಾಯವನ್ನು ಕೂಡ ಹೆಚ್ಚಿಸುತ್ತದೆ. ಪ್ರತಿದಿನ ರಾತ್ರಿ 2 ರಿಂದ 3 ಬಾರಿ ಎಚ್ಚರಗೊಳ್ಳುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವು 30% ವರೆಗೆ ಹೆಚ್ಚಾಗಿರುತ್ತದೆ. ಈ ರೀತಿ ಪದೇ ಪದೇ ನಿದ್ರೆಯಿಂದ ಎಚ್ಚರಗೊಳ್ಳುವುದಕ್ಕೆ ಕಾರಣ ನಿಮ್ಮ ಮೆದುಳು. ನೀವು ನಿದ್ರೆ ಮಾಡಿದ ಮೇಲೆಯೂ ಅದು ಹೆಚ್ಚು ಸಕ್ರಿಯವಾಗಿದೆ ಎಂದರ್ಥ. ಅಂದರೆ ನೀವು ಯಾವುದೋ ವಿಷಯದ ಬಗ್ಗೆ ಅತಿಯಾಗಿ ಯೋಚಿಸುತ್ತಿರಬಹುದು ಅಥವಾ ಮಾನಸಿಕ ಒತ್ತಡದಿಂದ ಬಳಲುತ್ತಿರಬಹುದು. ಮಾನಸಿಕ ಒತ್ತಡವಿದ್ದರೆ, ಅದು ಹೃದಯದ ಮೇಲೂ ಪರಿಣಾಮ ಬೀರುತ್ತದೆ, ಏಕೆಂದರೆ ಮಾನಸಿಕ ಒತ್ತಡವು ಹೃದಯಾಘಾತಕ್ಕೆ ಸಾಮಾನ್ಯ ಕಾರಣವಾಗಿದೆ. ಆದ್ದರಿಂದ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ, ಮತ್ತು ರಾತ್ರಿ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವ ಸಮಸ್ಯೆ ಇದ್ದರೆ, ತಪ್ಪದೆ ವೈದ್ಯರ ಸಂಪರ್ಕ ಮಾಡಿ.

ಇದನ್ನೂ ಓದಿ: ಒತ್ತಡದಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ತಿಳಿದ್ರೆ ಶಾಕ್ ಆಗ್ತೀರಾ!

ಈ ರೀತಿ ಸಮಸ್ಯೆ ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತೆ?

  • ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಬಳಲುತ್ತಿರುವವರು.
  • ಮಾನಸಿಕ ಒತ್ತಡದಲ್ಲಿರುವವರು.
  • ರಾತ್ರಿ ಮೊಬೈಲ್ ಫೋನ್ ಬಳಸುವವರು ಅಥವಾ ಟಿವಿ ನೋಡುವವರು.

ಈ ಅಪಾಯವನ್ನು ತಡೆಗಟ್ಟಲು ಏನು ಮಾಡಬಹುದು?

  • ಮಲಗುವ ಮೊದಲು ಮೊಬೈಲ್ ಮತ್ತು ಟಿವಿಗಳಿಂದ ದೂರವಿರಿ.
  • ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಎಚ್ಚರಗೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
  • ರಾತ್ರಿಯಲ್ಲಿ ಚಹಾ ಅಥವಾ ಕಾಫಿ ಕುಡಿಯಬೇಡಿ.
  • ಮಾನಸಿಕ ಒತ್ತಡವನ್ನು ತಪ್ಪಿಸಿ.
  • ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ