AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಗಿದ ತಕ್ಷಣ ಒಳ್ಳೆ ನಿದ್ದೆ ಬರ್ಬೇಕು ಅಂದ್ರೆ ಈ ಟಿಪ್ಸ್‌ ಅನುಸರಿಸಿ

ಒಬ್ಬ ವ್ಯಕ್ತಿ ಆರೋಗ್ಯಕರವಾಗಿರಬೇಕೆಂದರೆ ಆರೋಗ್ಯಕರ ಆಹಾರ, ವ್ಯಾಯಾಮ ಎಷ್ಟು ಮುಖ್ಯವೋ, ನಿದ್ರೆ ಮತ್ತು ವಿಶ್ರಾಂತಿಯೂ ಅಷ್ಟೇ ಮುಖ್ಯ. ಆದ್ರೆ ಇಂದಿನ ಈ ಒತ್ತಡದ ಜೀವನಶೈಲಿಯಲ್ಲಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಣ್ಣು ಮುಚ್ಚಿ ಮಲಗಿದ್ರೂ ನಿದ್ರೆ ಬರಲ್ಲ ಎನ್ನುತ್ತಿರುತ್ತಾರೆ. ನಿಮಗೂ ಸಹ ಈ ಸಮಸ್ಯೆ ಇದ್ಯಾ? ಹಾಗಿದ್ರೆ ಮಲಗಿದ ತಕ್ಷಣ ನಿದ್ದೆ ಬರಬೇಕು ಅಂದ್ರೆ ಈ ಕೆಲವು ಸರಳ ಸಲಹೆ ಪಾಲಿಸಿ.

ಮಲಗಿದ ತಕ್ಷಣ ಒಳ್ಳೆ  ನಿದ್ದೆ ಬರ್ಬೇಕು ಅಂದ್ರೆ ಈ ಟಿಪ್ಸ್‌ ಅನುಸರಿಸಿ
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Dec 07, 2025 | 5:29 PM

Share

ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ, ವ್ಯಾಯಾಮ ಎಷ್ಟು ಮುಖ್ಯವೋ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ರೆಯೂ (sleep) ಬಹಳ ಮುಖ್ಯ. ಆರೋಗ್ಯವಾಗಿರಲು ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಠ 7 ರಿಂ 9 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಬೇಕು. ಆದರೆ ಇಂದು ಅನೇಕರು ಒತ್ತಡ, ಕಳಪೆ ಜೀವನಶೈಲಿಯ ಕಾರಣದಿಂದಾಗಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇಗ ಮಲಗಿದರೂ ಸಹ ನಿದ್ರೆ ಮಾತ್ರ ಬರೋದೆ ಇಲ್ಲ ಎನ್ನುತ್ತಿರುತ್ತಾರೆ. ನಿಮಗೂ ಕೂಡ ಈ ಸಮಸ್ಯೆ ಇದ್ಯಾ? ಹಾಗಿದ್ರೆ ಈ ಒಂದಷ್ಟು ಸಿಂಪಲ್‌ ಸಲಹೆಗಳನ್ನು ಪಾಲಿಸಿ, ಮಲಗಿದೆ ಎರಡನೇ ನಿಮಿಷಕ್ಕೆ ಸುಖ ನಿದ್ರೆಗೆ ಜಾರುವಿರಿ.

ಮಲಗಿದ ತಕ್ಷಣ ನಿದ್ರೆ ಬರಲು ಏನು ಮಾಡಬೇಕು?

ಲೈಟ್‌ ಆಫ್‌ ಮಾಡಿ: ನೀವು ಮಲಗಿದ ತಕ್ಷಣ ನಿದ್ರಿಸಲು ಬಯಸಿದರೆ, ಕೋಣೆಯ ಲೈಟ್‌ ಆಫ್‌ ಮಾಡಿ. ಬೆಳಕು ನಿಮ್ಮ ಸಿರ್ಕಾಡಿಯನ್‌ ಲಯವನ್ನು ಅಡ್ಡಿಪಡಿಸುತ್ತದೆ. ಕೊಠಡಿ ಕತ್ತಲೆಯಾಗಿದ್ದರೆ, ನೀವು ಬೇಗ ನಿದ್ರಿಸುತ್ತೀರಿ. ಹಾಗಾಗಿ ಮಲಗುವ ಕೋಣೆ ಕತ್ತಲೆಯಿಂದಿರುವಂತೆ ನೋಡಿಕೊಳ್ಳಿ.

ಮೊಬೈಲ್‌ ನೋಡಬೇಡಿ: ಮಲಗುವ ಒಂದು ಗಂಟೆ ಮೊದಲು ನೀವು ಫೋನ್‌ ನೋಡುವುದನ್ನು ನಿಲ್ಲಿಸಿ. ಫೋನ್‌ ಮೆಲಟೋನಿನ್‌ ಉತ್ಪದನೆಗೆ ಅಡ್ಡಿಪಡಿಸಬಹುದು. ಇದು ನಿದ್ರೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಅಭ್ಯಾಸವನ್ನು ತಕ್ಷಣ ನಿಲ್ಲಿಸಿ

ಪುಸ್ತಕ ಓದಿ: ರಾತ್ರಿ ಮಲಗುವ ಮುನ್ನ ನಿಮ್ಮಿಷ್ಟದ  ಪುಸ್ತಕ ಓದಿ. ಇದರಿಂದ ಮನಸ್ಸು ಹಗುರವಾಗುತ್ತದೆ. ನೀವು ಬೇಗನೆ ನಿದ್ರೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಧ್ಯಾನ: ಮಲಗುವ ಮುನ್ನ 5 ನಿಮಿಷಗಳ ಕಾಲ ಧ್ಯಾನ ಮಾಡಿ. ಯಾವುದೇ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ. ನಿಮ್ಮ ಉಸಿರಾಟದ ಮೇಲೆ ಗಮನಹರಿಸಿ. ಇದು ನಿಮಗೆ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

ಅರೋಮಾಥೆರಪಿ: ರಾತ್ರಿ ಮಲಗುವ ಮುನ್ನ ಅರೋಮಾಥೆರಪಿಯನ್ನು ಅನುಸರಿಸಿ. ಇದು ಮನಸ್ಸನ್ನು ಶಾಂತವಾಗಿಸುತ್ತದೆ ಮತ್ತು ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ

ಸಂಗೀತ ಆಲಿಸಿ: ಸಂಗೀತ ಕೇಳುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ, ಅಲ್ಲದೆ  ನಿದ್ರಾಹೀನತೆ ಕಡಿಮೆಯಾಗುತ್ತದೆ. ನೀವು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಸಂಗೀತ ಕೇಳಿ.

ಬಿಸಿ ನೀರಿನ ಸ್ನಾನ: ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡಿ, ಬಿಸಿ ನೀರಿನ ಸ್ನಾನ ಮಾಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ. ದೇಹದ ಉಷ್ಣತೆ ಚೆನ್ನಾಗಿರುತ್ತದೆ, ಇದು ನಿಮಗೆ ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಈ ವರ್ಷದ ಬಿಗ್ ಬಾಸ್ ಟಿಆರ್​ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ; ಹತ್ತಾರು ಮನೆಗಳಿಗೆ ಹಾನಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು