ನಾಳೆ ತಮಿಳುನಾಡಿಗೆ ಎಂಟ್ರಿ ಬೆನ್ನಲ್ಲೇ‌ ಶಶಿಕಲಾಗೆ ಬಿಗ್ ಶಾಕ್: ನಾಯಕಿ ಆಪ್ತೆ ಇಳವರಸಿ, ಸುಧಾಕರನ್ ಆಸ್ತಿ ಮುಟ್ಟುಗೋಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:10 PM

ಶಶಿಕಲಾ ಆಪ್ತೆ ಇಳವರಸಿ ಹಾಗೂ ಸುಧಾಕರನ್ ಆಸ್ತಿಗೆ ಸರ್ಕಾರ ಮುಟ್ಟುಗೋಲು ಹಾಕಿದೆ. ಸುಧಾಕರನ್, ಇಳವರಸಿಗೆ ಸೇರಿದ 6 ಆಸ್ತಿಗಳನ್ನು 2017ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಮುಟ್ಟುಗೋಲು ಹಾಕಿದೆ.

ನಾಳೆ ತಮಿಳುನಾಡಿಗೆ ಎಂಟ್ರಿ ಬೆನ್ನಲ್ಲೇ‌ ಶಶಿಕಲಾಗೆ ಬಿಗ್ ಶಾಕ್: ನಾಯಕಿ ಆಪ್ತೆ ಇಳವರಸಿ, ಸುಧಾಕರನ್ ಆಸ್ತಿ ಮುಟ್ಟುಗೋಲು
ಶಶಿಕಲಾ
Follow us on

ಚೆನ್ನೈ: ನಾಳೆ ಶಶಿಕಲಾ ತಮಿಳುನಾಡಿಗೆ ಎಂಟ್ರಿ ಕೊಡುತ್ತಿರುವ ಬೆನ್ನಲ್ಲೇ‌ ರಾಜಕೀಯ ನಾಯಕಿಗೆ ಬಿಗ್ ಶಾಕ್ ಸಿಕ್ಕಿದೆ. ಶಶಿಕಲಾ ನಟರಾಜನ್​​ಗೆ ತಮಿಳುನಾಡು ಸರ್ಕಾರ ಶಾಕ್​ ಕೊಟ್ಟಿದೆ.

ಹೌದು, ಶಶಿಕಲಾ ಆಪ್ತೆ ಇಳವರಸಿ ಹಾಗೂ ಸುಧಾಕರನ್ ಆಸ್ತಿಗೆ ಸರ್ಕಾರ ಮುಟ್ಟುಗೋಲು ಹಾಕಿದೆ. ಸುಧಾಕರನ್, ಇಳವರಸಿಗೆ ಸೇರಿದ 6 ಆಸ್ತಿಗಳನ್ನು 2017ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಮುಟ್ಟುಗೋಲು ಹಾಕಿದೆ.

ಶಶಿಕಲಾ ಅಕ್ರಮ ಆಸ್ತಿ ಸಂಪಾದನೆ ಕೇಸ್​​ನಲ್ಲಿ ಶಿಕ್ಷೆ ಅನುಭವಿಸಿ ರಿಲೀಸ್ ಆಗಿದ್ದಾರೆ. ಜೊತೆಗೆ, ಅವರ ಆಪ್ತೆ ಇಳವರಸಿ ಸಹ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ, ಶಶಿಕಲಾ‌ ಸೋದರಳಿಯ ‌ಸುಧಾಕರನ್ ಇನ್ನೂ ಜೈಲಲ್ಲಿದ್ದಾರೆ.

ಏನೇ ಜವಾಬ್ದಾರಿ ನೀಡದೆ ಕೆಲಸ ಮಾಡಲು ಹೇಳಿದರೆ ಮಾಡುವೆ ಎಂದ ನಲಪಾಡ್​; ಯುವ ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಬಿತ್ತಾ ತೆರೆ?

Published On - 8:18 pm, Sun, 7 February 21