ಭದ್ರತಾ ಲೋಪ: ಯುಎಇ ಅಧ್ಯಕ್ಷ ತಂಗಿದ್ದ ಹೋಟೆಲ್​​ಗೆ ಬಂದ ಸೌದಿ ಪ್ರಜೆ

|

Updated on: Sep 11, 2023 | 7:11 PM

ಅವರು ಇತ್ತೀಚೆಗೆ ದೆಹಲಿಗೆ ತೆರಳಿದ್ದರು. ದೆಹಲಿ ವಿಮಾನ ನಿಲ್ದಾಣದ ಬಳಿ ಇರುವ ಏರೋಸಿಟಿಯ ಹೋಟೆಲ್‌ನಲ್ಲಿ ತಂಗಿದ್ದರು. ಸೌದಿ ಅರೇಬಿಯಾದಲ್ಲಿ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ತನ್ನ ಸಹೋದರನಿಗಾಗಿ ಸಹಾಯ ಪಡೆಯಲು ಯುಎಇ  ಅಧ್ಯಕ್ಷರನ್ನು  ಭೇಟಿಯಾಗಲು ಬಯಸಿದ್ದರು ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅವರು ಹೋಟೆಲ್‌ನ ಲಾಬಿಯಲ್ಲಿ ದೀರ್ಘಕಾಲ ಕಾದ ನಂತರ ಯುಎಇ ಅಧ್ಯಕ್ಷರನ್ನು ಗುರುತಿಸಿ ಸಂಪರ್ಕಿಸಿದರು.

ಭದ್ರತಾ ಲೋಪ: ಯುಎಇ ಅಧ್ಯಕ್ಷ ತಂಗಿದ್ದ ಹೋಟೆಲ್​​ಗೆ ಬಂದ ಸೌದಿ ಪ್ರಜೆ
ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್
Follow us on

ದೆಹಲಿ ಸೆಪ್ಟೆಂಬರ್ 11: ಯುಎಇ ಅಧ್ಯಕ್ಷ ತಂಗಿದ್ದ ನವದೆಹಲಿಯ ಹೊಟೇಲ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ (US President Joe Biden) ಅವರ ಬೆಂಗಾವಲು ಪಡೆಯಿಂದ ಕಾರೊಂದು ಶಿಷ್ಟಾಚಾರ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅದೇ ರೀತಿಯ ಭದ್ರತಾ ಲೋಪದ (security lapse) ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸೌದಿ ಅರೇಬಿಯಾದ (Saudi Arabia) ಪ್ರಜೆಯೊಬ್ಬರು ಶನಿವಾರ ಭಾರತಕ್ಕೆ ಬಂದು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ತಂಗಿದ್ದ ಪಂಚತಾರಾ ಹೋಟೆಲ್‌ಗೆ ಪ್ರವೇಶಿಸಿದರು. ಅನಾರೋಗ್ಯದಿಂದ ಬಳಲುತ್ತಿರುವ ಸಹೋದರನಿಗಾಗಿ ಸಹಾಯ ಪಡೆಯಲು ಹೋಟೆಲ್ ಲಾಬಿಯಲ್ಲಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ತಡೆದರು ಎಂದು ಮೂಲಗಳು ತಿಳಿಸಿವೆ.

ಸೌದಿ ಅರೇಬಿಯಾದ ಪೊಲೀಸ್ ಅಧಿಕಾರಿ ಎಂದು ವರದಿಯಾಗಿರುವ ವ್ಯಕ್ತಿ, ಜಿ20 ಸೆಕ್ಯುರಿಟಿ ಕ್ಲಿಯರೆನ್ಸ್ ಸ್ಟಿಕ್ಕರ್ ಹೊಂದಿರುವ ಹೋಟೆಲ್ ಕಾರಿನಲ್ಲಿ ಸೆಂಟ್ರಲ್ ದೆಹಲಿಯ ತಾಜ್ ಮಾನ್ಸಿಂಗ್ ಹೋಟೆಲ್‌ಗೆ ತಲುಪಿದ್ದಾರೆ.

ಅವರು ಇತ್ತೀಚೆಗೆ ದೆಹಲಿಗೆ ತೆರಳಿದ್ದರು. ದೆಹಲಿ ವಿಮಾನ ನಿಲ್ದಾಣದ ಬಳಿ ಇರುವ ಏರೋಸಿಟಿಯ ಹೋಟೆಲ್‌ನಲ್ಲಿ ತಂಗಿದ್ದರು. ಸೌದಿ ಅರೇಬಿಯಾದಲ್ಲಿ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ತನ್ನ ಸಹೋದರನಿಗಾಗಿ ಸಹಾಯ ಪಡೆಯಲು ಯುಎಇ  ಅಧ್ಯಕ್ಷರನ್ನು  ಭೇಟಿಯಾಗಲು ಬಯಸಿದ್ದರು ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅವರು ಹೋಟೆಲ್‌ನ ಲಾಬಿಯಲ್ಲಿ ದೀರ್ಘಕಾಲ ಕಾದ ನಂತರ ಯುಎಇ ಅಧ್ಯಕ್ಷರನ್ನು ಗುರುತಿಸಿ ಸಂಪರ್ಕಿಸಿದರು. ಆದರೆ ಅಧ್ಯಕ್ಷರ ಭದ್ರತಾ ಪಡೆ ಅವರನ್ನು ತಡೆದಿದೆ.ಯುಎಇ ಅಧ್ಯಕ್ಷರ ಭದ್ರತಾ ಉಸ್ತುವಾರಿಯೊಂದಿಗೆ ಸಂವಾದದ ನಂತರ, ಅವರಿಗೆ ಯುಎಇ ಅಧ್ಯಕ್ಷರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು.

ಇದನ್ನೂ ಓದಿ:  G20ಗೆ ಆಫ್ರಿಕನ್ ಯೂನಿಯನ್ ಸೇರ್ಪಡೆ ಈ ಶೃಂಗಸಭೆಯ ದೊಡ್ಡ ಸಾಧನೆ: ಧರ್ಮೇಂದ್ರ ಪ್ರಧಾನ್

ವ್ಯಕ್ತಿಯನ್ನು ದೆಹಲಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು ಮತ್ತು ವಿವಿಧ ತನಿಖಾ ಸಂಸ್ಥೆಗಳಿಂದ ಗಂಟೆಗಳ ವಿಚಾರಣೆಯ ನಂತರ ಅವರನ್ನು ಬಿಡಲಾಯಿತು.

ದೆಹಲಿ ಪೊಲೀಸರು ಹೋಟೆಲ್ ಟ್ಯಾಕ್ಸಿಗಳಿಗೂ ಜಿ20 ಭದ್ರತಾ ಕ್ಲಿಯರೆನ್ಸ್ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Mon, 11 September 23