Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ಶಬರಿಮಲೆ ಉಣ್ಣಿಯಪ್ಪಂ ಟೆಂಡರ್ ಪಡೆದ ದಲಿತ ವ್ಯಕ್ತಿಯ ಮೇಲೆ ಹಲ್ಲೆ, ಜಾತಿ ನಿಂದನೆ

ಪೊಲೀಸರ ಪ್ರಕಾರ, ತಿರುವನಂತಪುರಂ ನಿವಾಸಿ ಸುಬಿ ಅವರು ಮುಂಬರುವ ತೀರ್ಥಯಾತ್ರೆಯ ಋತುವಿಗಾಗಿ ಶಬರಿಮಲೆ ದೇವಸ್ಥಾನದಲ್ಲಿ ನೀಡಲಾಗುವ ಉಣ್ಣಿಯಪ್ಪಂ ಅನ್ನು ತಯಾರಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ಟೆಂಡರ್ ಪಡೆದಿದ್ದರು. ದಲಿತ ವ್ಯಕ್ತಿಯೊಬ್ಬರು ಟೆಂಡರ್ ಪಡೆದಿರುವುದು ರಮೇಶ್ ಮತ್ತು ಜಗದೀಶ್ ಅವರನ್ನು ಕೆರಳಿಸಿದೆ ಎನ್ನಲಾಗಿದೆ.

ಕೇರಳ: ಶಬರಿಮಲೆ ಉಣ್ಣಿಯಪ್ಪಂ ಟೆಂಡರ್ ಪಡೆದ ದಲಿತ ವ್ಯಕ್ತಿಯ ಮೇಲೆ ಹಲ್ಲೆ, ಜಾತಿ ನಿಂದನೆ
ಶಬರಿಮಲೆ
Follow us
ರಶ್ಮಿ ಕಲ್ಲಕಟ್ಟ
|

Updated on: Sep 11, 2023 | 7:44 PM

ತಿರುವನಂತಪುರಂ ಸೆಪ್ಟೆಂಬರ್  11: ಶಬರಿಮಲೆ ದೇವಸ್ಥಾನದ (Sabarimala) ತೀರ್ಥಯಾತ್ರೆ ಅವಧಿಯಲ್ಲಿ ಉಣ್ಣಿಯಪ್ಪಂ (unniyappam) ತಯಾರಿಸಲು ಟೆಂಡರ್ ಪಡೆದ ದಲಿತ (Dalit) ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ ಇಬ್ಬರು ವ್ಯಕ್ತಿಗಳ ವಿರುದ್ಧ ಕೇರಳದ ತಿರುವನಂತಪುರಂನಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಪ್ಟೆಂಬರ್ 2 ರಂದು ಈ ಘಟನೆ ನಡೆದಿದ್ದು ಆರೋಪಿಗಳಾದ ರಮೇಶ್ ಅಕಾ ಕೃಷ್ಣನ್‌ಕುಟ್ಟಿ ಮತ್ತು ಜಗದೀಶ್ ಸದ್ಯ ತಲೆಮರೆಸಿಕೊಂಡಿದ್ದಾರೆ. ಮ್ಯೂಸಿಯಂ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ, ತಿರುವನಂತಪುರಂ ನಿವಾಸಿ ಸುಬಿ ಅವರು ಮುಂಬರುವ ತೀರ್ಥಯಾತ್ರೆಯ ಋತುವಿಗಾಗಿ ಶಬರಿಮಲೆ ದೇವಸ್ಥಾನದಲ್ಲಿ ನೀಡಲಾಗುವ ಉಣ್ಣಿಯಪ್ಪಂ ಅನ್ನು ತಯಾರಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ಟೆಂಡರ್ ಪಡೆದಿದ್ದರು. ದಲಿತ ವ್ಯಕ್ತಿಯೊಬ್ಬರು ಟೆಂಡರ್ ಪಡೆದಿರುವುದು ರಮೇಶ್ ಮತ್ತು ಜಗದೀಶ್ ಅವರನ್ನು ಕೆರಳಿಸಿದೆ ಎನ್ನಲಾಗಿದೆ.

ಸುಬಿ ಅವರು ನಂದನ್‌ಕೋಡ್‌ನಲ್ಲಿರುವ ದೇವಸ್ವಂ ಬೋರ್ಡ್ ಕಚೇರಿಯ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದಾಗ ಆರೋಪಿಗಳಿಬ್ಬರು ಅವರ ಬಳಿಗೆ ಬಂದು ನಿಂದಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಇಬ್ಬರೂ ಸುಬಿಯ ಜಾತಿ ನಿಂದನೆ ಮಾಡಿದ್ದಾರೆ.ದೇವಾಲಯವು ಹಿಂದೂಗಳಿಗೆ ಸೇರಿದ್ದು, ಪುಲಯರಿಗೆ ಅಲ್ಲ. ಹೀಗಿರುವಾಗ ಟೆಂಡರ್ ಪ್ರಕ್ರಿಯೆಯಲ್ಲಿ ಯಾಕೆ ಭಾಗವಹಿಸಿದ್ದು ಎಂದು ಕೇಳಿದ್ದಾರೆ.

ಸುಬಿ ಪುಲಯ ಸಮುದಾಯಕ್ಕೆ ಸೇರಿದವರು, ಇದನ್ನು ಕೇರಳದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಎಂದು ವರ್ಗೀಕರಿಸಲಾಗಿದೆ. ನಂತರ ರಮೇಶ್ ಮತ್ತು ಜಗದೀಶ್ ದೇವಸ್ಥಾನಕ್ಕೆ ಪ್ರವೇಶಿಸದಂತೆ ಬೆದರಿಕೆ ಹಾಕಿದರು. ಜಗಳ ಆಡಿ ಕಪಾಳಮೋಕ್ಷ ಮಾಡಿದರು ಎಂದು ಅವರು ಆರೋಪಿಸಿದ್ದಾರೆ. ಟೆಂಡರ್‌ನಲ್ಲಿ ಇಬ್ಬರು ಆರೋಪಿಗಳೂ ಭಾಗವಹಿಸಿದ್ದರು ಎಂದು ಸುಬಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:  ಸುಪ್ರೀಂಕೋರ್ಟ್ ವಕೀಲೆಯಾಗಿದ್ದ ಪತ್ನಿಯನ್ನು ಕೊಂದ ಭಾರತೀಯ ಕಂದಾಯ ಸೇವೆ ಮಾಜಿ ಅಧಿಕಾರಿ ಬಂಧನ

ಸುಬಿ ನೀಡಿದ ದೂರಿನ ಆಧಾರದ ಮೇಲೆ, ತಿರುವನಂತಪುರಂ ಮ್ಯೂಸಿಯಂ ಪೊಲೀಸರು ರಮೇಶ್ ಮತ್ತು ಜಗದೀಶ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಸೆಕ್ಷನ್‌ನ ಸೆಕ್ಷನ್ 294 (ಬಿ) (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು), ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ 3(1) (ಅಪರಾಧ ದೌರ್ಜನ್ಯಗಳಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ