AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಮಂದಿರ ಉದ್ಘಾಟನೆ ನಂತರ ಗೋಧ್ರಾದಂಥಾ ಘಟನೆ ನಡೆಯಬಹುದು ಎಂದ ಉದ್ಧವ್ ಠಾಕ್ರೆ; ಬಿಜೆಪಿ ನಾಯಕರಿಂದ ಖಂಡನೆ

ಜಲಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಉದ್ಧವ್ ಠಾಕ್ರೆ "ದೇಶದಾದ್ಯಂತ ಅನೇಕ ಹಿಂದೂಗಳನ್ನು ಬಸ್‌ಗಳು ಮತ್ತು ರೈಲುಗಳಲ್ಲಿ ಕರೆಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲಿಂದ ಹಿಂತಿರುಗುವಾಗ, ದಾರಿಯಲ್ಲಿ ಎಲ್ಲೋ ಒಂದು ಗೋಧ್ರಾದಂಥಾ ಘಟನೆ ನಡೆಯಬಹುದು. ದಾಳಿ ನಡೆಯಬಹುದು. ಕೆಲವು ಕಾಲೋನಿಯಲ್ಲಿ ಬಸ್ಸು ಸುಡುತ್ತಾರೆ, ಕಲ್ಲು ತೂರುತ್ತಾರೆ. ಹತ್ಯಾಕಾಂಡಗಳು ನಡೆಯುತ್ತವೆ. ದೇಶ ಮತ್ತೆ ಹೊತ್ತಿ ಉರಿಯುತ್ತದೆ. ಈ ಬೆಂಕಿಯಲ್ಲಿ ಅವರು ರಾಜಕೀಯ ರೊಟ್ಟಿಯನ್ನು ಬೇಯಿಸುತ್ತಾರೆ ಎಂದು ಶಿವಸೇನಾ ಯುಬಿಟಿ ನಾಯಕ ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆ ನಂತರ ಗೋಧ್ರಾದಂಥಾ ಘಟನೆ ನಡೆಯಬಹುದು ಎಂದ ಉದ್ಧವ್ ಠಾಕ್ರೆ; ಬಿಜೆಪಿ ನಾಯಕರಿಂದ ಖಂಡನೆ
ಉದ್ಧವ್ ಠಾಕ್ರೆ
ರಶ್ಮಿ ಕಲ್ಲಕಟ್ಟ
|

Updated on:Sep 11, 2023 | 9:01 PM

Share

ಮುಂಬೈ ಸೆಪ್ಟೆಂಬರ್ 11: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ (Ram Mandir) ಉದ್ಘಾಟನೆಗೊಂಡ ನಂತರ ಗೋಧ್ರಾದಂತಹ (Godhra) ಘಟನೆ ನಡೆಯಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರು ಎಚ್ಚರಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಗೆ ತಿಂಗಳುಗಳ ಮೊದಲು ಜನವರಿಯಲ್ಲಿ ದೇವಾಲಯ ಉದ್ಘಾಟನೆಯಾಗಲಿದ್ದು, ದೇಶಾದ್ಯಂತದ ಹೆಚ್ಚಿನ ಹಿಂದೂಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಠಾಕ್ರೆ ಅವರ ಹೇಳಿಕೆಯನ್ನು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು ಕಟುವಾಗಿ ಟೀಕಿಸಿದ್ದಾರೆ. ಅವರು ತಮ್ಮ ಮಾಜಿ ಮಿತ್ರರಾಗಿದ್ದ ಬಾಳಾಸಾಹೇಬ್ ಠಾಕ್ರೆ (ದಿವಂಗತ ಶಿವಸೇನೆ ಸಂಸ್ಥಾಪಕ) ರಾಮ ಮಂದಿರ ಚಳವಳಿಯನ್ನು “ಆಶೀರ್ವಾದ” ಮಾಡಿದ್ದಾರೆ. ಇಂತಿರುವಾಗ ಸದ್ಭುದ್ದಿ ಕೊಡಲಿ ಎಂದು ನಾನು ಭಗವಾನ್ ರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ,

ಠಾಕ್ರೆಯವರ ಹೇಳಿಕೆಯನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಟೀಕಿಸಿದ್ದಾರೆ.

ಜಲಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಉದ್ಧವ್ ಠಾಕ್ರೆ “ದೇಶದಾದ್ಯಂತ ಅನೇಕ ಹಿಂದೂಗಳನ್ನು ಬಸ್‌ಗಳು ಮತ್ತು ರೈಲುಗಳಲ್ಲಿ ಕರೆಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲಿಂದ ಹಿಂತಿರುಗುವಾಗ, ದಾರಿಯಲ್ಲಿ ಎಲ್ಲೋ ಒಂದು ಗೋಧ್ರಾದಂಥಾ ಘಟನೆ ನಡೆಯಬಹುದು. ದಾಳಿ ನಡೆಯಬಹುದು. ಕೆಲವು ಕಾಲೋನಿಯಲ್ಲಿ ಬಸ್ಸು ಸುಡುತ್ತಾರೆ, ಕಲ್ಲು ತೂರುತ್ತಾರೆ. ಹತ್ಯಾಕಾಂಡಗಳು ನಡೆಯುತ್ತವೆ. ದೇಶ ಮತ್ತೆ ಹೊತ್ತಿ ಉರಿಯುತ್ತದೆ. ಈ ಬೆಂಕಿಯಲ್ಲಿ ಅವರು ರಾಜಕೀಯ ರೊಟ್ಟಿಯನ್ನು ಬೇಯಿಸುತ್ತಾರೆ ಎಂದು ಶಿವಸೇನಾ ಯುಬಿಟಿ ನಾಯಕ ಹೇಳಿದ್ದಾರೆ.

ಫೆಬ್ರವರಿ 2002 ರಲ್ಲಿ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳಿಗೆ ಬೆಂಕಿ ಹಚ್ಚಿದ ನಂತರ ಕನಿಷ್ಠ 58 ಜನರು ಸಾವಿಗೀಡಾಗಿದ್ದರು.

ಈ ಹತ್ಯೆಗಳು ಪ್ರತಿಭಟನೆಗಳು ಮತ್ತು ಗಲಭೆಗಳಿಗೆ ಕಾರಣವಾಯಿತು. ಇದಕ್ಕಾಗಿ ಸ್ಥಳೀಯ ನ್ಯಾಯಾಲಯವು ಒಂಬತ್ತು ವರ್ಷಗಳ ನಂತರ ಕೇವಲ 31 ಜನರನ್ನು (63 ಬಿಡುಗಡೆ ಮಾಡಲಾಯಿತು) ದೋಷಿ ಎಂದು ಘೋಷಿಸಿತು. ಶಿಕ್ಷೆಯ ವಿರುದ್ಧದ ಮೇಲ್ಮನವಿಗಳನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದ್ದು, ಈಗ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

ಇದನ್ನೂ ಓದಿ: ಭಾರತದ ಕಾರುಗಳು ಮತ್ತು ವಿಮಾನಗಳಲ್ಲಿ ಜೈವಿಕ ಇಂಧನ ಬಳಕೆ? ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದ್ದೇನು?

ಬಾಳಾಸಾಹೇಬರು ಏನು ಯೋಚಿಸಿದರೋ ಗೊತ್ತಿಲ್ಲ

ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಠಾಕ್ರೆ ಅವರ ದಿವಂಗತ ತಂದೆ ಬಾಳಾಸಾಹೇಬ್ ಠಾಕ್ರೆ ಅವರು ನನ್ನ ಮಗುವಿಗೆ ಏನಾಯಿತು? ಎಂದು ಯೋಚಿಸುತ್ತಾರೆ. ಯಾರ ಆಶೀರ್ವಾದದಿಂದ ಅವರು ದೊಡ್ಡ ನಾಯಕರಾದರು?ಅವರು ಈ ರೀತಿ ಮಾತನಾಡುತ್ತಾರೆಯೇ? ಬಾಳಾಸಾಹೇಬರು ಆಶೀರ್ವದಿಸಿದ ರಾಮ ಜನ್ಮಭೂಮಿ ಆಂದೋಲನ ಇದು. ಪ್ರಧಾನಿ ಮೋದಿ ವಿರುದ್ಧದ ಈ ಮೈತ್ರಿ ಮತಕ್ಕಾಗಿ ಇವರು ಯಾವುದೇ ಹಂತಕ್ಕೆ ಹೋಗಬಹುದು. ಅವರಿಗೆ (ಇಂಡಿಯಾ ಮೈತ್ರಿಗೆ) ಸ್ವಲ್ಪ ಬುದ್ಧಿವಂತಿಕೆಯನ್ನು ನೀಡುವಂತೆ ನಾನು ಭಗವಾನ್ ರಾಮನಲ್ಲಿ ಪ್ರಾರ್ಥಿಸಲು ಬಯಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅನುರಾಗ್ ಠಾಕೂರ್, ಮಹಾರಾಷ್ಟ್ರದ ರಾಜಕಾರಣಿಗೆ “ದುರಾಸೆ” ಎಂದು ಟೀಕಿಸಿದರು. ಬಾಳಾಸಾಹೇಬ್ ಏನು ಯೋಚಿಸುತ್ತಿದ್ದರೋ ನನಗೆ ಗೊತ್ತಿಲ್ಲ.ಅಧಿಕಾರದ ದುರಾಸೆಗಾಗಿ ಉದ್ಧವ್ ಜೀ ಏನು ಮಾಡುತ್ತಿದ್ದಾರೆ?” ಸನಾತನ ಧರ್ಮದ ಬಗ್ಗೆ ಮಾತು ಬಂದಾಗ ರಾಹುಲ್ ಮತ್ತು ಉದ್ಧವ್ ಏನೂ ಮಾತನಾಡಲಿಲ್ಲ ಎಂದು ಹೇಳಿದ್ದಾರೆ

ರಾಮ ಮಂದಿರದ ಉದ್ಘಾಟನೆಯ ಬಗ್ಗೆ ಠಾಕ್ರೆ ಅವರಿಗೆ ಆತಂಕವೇಕೆ ಎಂದು ನನಗೆ ತಿಳಿದಿಲ್ಲ, ನೀವು ಅವರನ್ನು ಕೇಳಿ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Mon, 11 September 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ