ಅಯೋಧ್ಯೆ ರಾಮ ಮಂದಿರ ನಿರ್ಮಾಣ ಶಂಕುಸ್ಥಾಪನೆಗೆ 2 ವರ್ಷ ಪೂರ್ಣ; ಜನವರಿಯಲ್ಲಿ ಲೋಕಾರ್ಪಣೆ

ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಇಂದಿಗೆ 2 ವರ್ಷಗಳು ಕಳೆದಿದೆ. ರಾಮ ಮಂದಿರಕ್ಕೆ ಆಗಸ್ಟ್​ 5 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಶಂಕುಸ್ಥಾಪನೆಗೆ 2 ವರ್ಷ ಪೂರ್ಣ; ಜನವರಿಯಲ್ಲಿ ಲೋಕಾರ್ಪಣೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 05, 2023 | 3:19 PM

ದೆಹಲಿ, ಆ.5: ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಇಂದಿಗೆ 2 ವರ್ಷಗಳು ಕಳೆದಿದೆ. ರಾಮ ಮಂದಿರಕ್ಕೆ ಆಗಸ್ಟ್​ 5 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಮುಂದಿನ ವರ್ಷ ಅಂದರೆ 2024ರ ಜನವರಿ 21, 22 ಮತ್ತು 23 ರಂದು ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ ಎಂದು ರಾಮ ಮಂದಿರದ ಟ್ರಸ್ಟ್ ತಿಳಿಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಜತೆಗೆ 25 ಸಾವಿರ ಸಾಧು ಸಂತರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಿದೆ.

ರಾಮಮಂದಿರ ನಿರ್ಮಾಣಕ್ಕೆ ಮುನ್ನುಡಿ

ರಾಮಾಯಣ ಮಹಾಕಾವ್ಯದ ಪ್ರಕಾರ ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ, ಆ ಕಾರಣದಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯುತ್ತಾರೆ. ಮೊಘಲ ಆಳ್ವಿಕೆ ಸಮಯದಲ್ಲಿ ಮೊಘಲರು ಬಾಬರಿ ಮಸೀದಿ ನಿರ್ಮಾಣ ಮಾಡಿದ್ದು. ಇದು ದೇಶದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. 1850ರಲ್ಲಿ ಈ ವಿವಾದ ಪ್ರಾರಂಭವಾಗಿ ಅನೇಕ ಚಳುವಳಿ ಕೂಡ ನಡೆಯಿತು. ಅಂದಿನ ಸರ್ಕಾರಕ್ಕೂ ಕೂಡ ಈ ಬಗ್ಗೆ ಅತುರದ ತಿರ್ಮಾನ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಇದು ಸೂಕ್ಷ್ಮ ವಿಚಾರ ಎಂದು ಸುಪ್ರೀಂ ಕೋರ್ಟ್​ ಮೊರೆ ಹೋಗಿತ್ತು, ರಾಮ ಮಂದಿರ ಮತ್ತು ಬಾಬರಿ ಮಸೀದಿ ಸಮೀಕ್ಷೆ ಮತ್ತು ತನಿಖೆಗೆ ಸುಪ್ರೀಂ ಒಂದು ಸಮಿತಿಯನ್ನು ರಚನೆ ಮಾಡಿತ್ತು.

ಇದಕ್ಕೂ ಮುನ್ನ 1980ರ ದಶಕದಲ್ಲಿ, ವಿಶ್ವ ಹಿಂದೂ ಪರಿಷತ್ (VHP) ಮತ್ತು ಇತರ ಸಂಘಟನೆಗಳು ರಾಮ ಜನಿಸಿದ ಸ್ಥಳವನ್ನು ಮತ್ತೆ ಪಡೆಯಲು ಚಳುವಳಿಯನ್ನು ಪ್ರಾರಂಭಿಸಿದವು, ಜತೆಗೆ ಈ ಸ್ಥಳದಲ್ಲಿ ರಾಮ್ ಲಲ್ಲಾಗೆ ದೇವಾಲಯವನ್ನು ನಿರ್ಮಿಸಲು ಒತ್ತಾಯಿಸಿದವು. ನವೆಂಬರ್ 1989ರಲ್ಲಿ, ಬಾಬರಿ ಮಸೀದಿಯ ಪಕ್ಕದ ಭೂಮಿಯಲ್ಲಿ ದೇವಾಲಯಕ್ಕೆ ವಿಶ್ವ ಹಿಂದೂ ಪರಿಷತ್ (VHP) ಅಡಿಪಾಯವನ್ನು ಹಾಕಿತು.

ಡಿಸೆಂಬರ್ 6, 1992 ರಂದು, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳು ಸೇರಿ ವಿವಾದಿತ ಸ್ಥಳದಲ್ಲಿ ರ್ಯಾಲಿಯನ್ನು ಆಯೋಜಿಸಿತ್ತು. ಈ ಚಳುವಳಿಯಲ್ಲಿ ಕರ ಸೇವಕರು ಎಂದು ಕರೆಯಲ್ಪಡುವ 150,000 ಸ್ವಯಂಸೇವಕರು ಭಾಗವಹಿಸಿದರು. ರ್ಯಾಲಿಯು ಉದ್ವಿಗ್ನ ಪರಿಸ್ಥಿತಿಗೆ ತಿರುಗಿ, ಅಲ್ಲಿ ಸೇರಿದ ಕರ ಸೇವಕರು ಭದ್ರತಾ ಬೇಲಿಯನ್ನು ಭೇದಿಸಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಇದು ಭಾರತದಾದ್ಯಂತ ಭಾರಿ ಗಲಭೆಗೆ ಕಾರಣವಾಗಿತ್ತು. ಕೋಮು ದ್ವೇಷಕ್ಕೂ ಕಾರಣವಾಗಿತ್ತು. ಅನೇಕ ಕಡೆ ಗಲಭೆ, ಗುಂಡೇಟು, ಕರ್ಪ್ಯೂ ಎಲ್ಲವನ್ನು ಹೇರಲಾಗಿತ್ತು. ಈ ಘಟನೆಯಿಂದ ಹಲವು ಕರ ಸೇವಕರು ತಮ್ಮ ಜೀವವನ್ನೇ ಕಳೆದುಕೊಂಡರು.

ಸುಪ್ರೀಂ ಕೋರ್ಟ್ ತೀರ್ಪು

ಕೊನೆಗೂ ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) 1978 ಮತ್ತು 2003 ರಲ್ಲಿ ಪುರಾತತ್ತ್ವ ಶಾಸ್ತ್ರದ ಉತ್ಖನನಗಳನ್ನು ನಡೆಸಿತು, ಅದರಲ್ಲಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ಇರುವುದು ನಿಜ ಮತ್ತು ಬಾಬರಿ ಮಸೀದಿಗೂ ಮೊದಲು ಈ ಸ್ಥಳದಲ್ಲಿ ಹಿಂದೂ ದೇವಾಲಯದ ಅಸ್ತಿತ್ವದಲ್ಲಿದೆ ಎಂದು ಸೂಚಿಸುವ ಪುರಾವೆಗಳನ್ನು ಪತ್ತೆ ಮಾಡಿದರು. ಬಳಿಕ ಹಲವು ವರ್ಷಗಳ ಕಾನೂನು ಹೋರಾಟಗಳ ನಂತರ, 2019ರಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದದ ಕುರಿತು ತನ್ನ ತೀರ್ಪನ್ನು ಪ್ರಕಟಿಸಿತು, ಇದರಲ್ಲಿ ವಿವಾದಿತ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಭಾರತ ಸರ್ಕಾರ ರಚಿಸಿರುವ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿತ್ತು. ಅಲ್ಲದೆ, ಧನ್ನಿಪುರ ಗ್ರಾಮದಲ್ಲಿ ವಿವಾದಿತ ಸ್ಥಳದಿಂದ 22 ಕಿಮೀ ದೂರದಲ್ಲಿರುವ ಐದು ಎಕರೆ ಭೂಮಿಯನ್ನು ಮಸೀದಿ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ಮಂಜೂರು ಮಾಡಿತು.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ; ‘ಷಟ್ಕೋಟಿ ಹನುಮ ಚಾಲೀಸ ಪಠಣ ಅಭಿಯಾನ’ಕ್ಕೆ ದೆಹಲಿ ಅಕ್ಷರಧಾಮದಲ್ಲಿ ಚಾಲನೆ

ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಮಾರಂಭ

ಭೂಮಿ ಪೂಜೆ ಸಮಾರಂಭವು ಆಗಸ್ಟ್ 5, 2020 ರಂದು ನಡೆಯಿತು, ಅಲ್ಲಿಂದ ರಾಮ ಮಂದಿರ ನಿರ್ಮಾಣ ಪ್ರಾರಂಭವಾಯಿತು. ಭೂಮಿಪೂಜೆ ಕಾರ್ಯಕ್ರಮಕ್ಕೂ ಮುನ್ನ ಮೂರು ದಿನಗಳ ಕಾಲ ವೈದಿಕ ವಿಧಿವಿಧಾನಗಳನ್ನು ಆಚರಿಸಲಾಯಿತು. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಶಂಕುಸ್ಥಾಪನೆಯಾಗಿ 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಅಡಿಗಲ್ಲು ಹಾಕಿದರು.

ಭೂಮಿ ಪೂಜೆಗೆ ಭಾರತದ ಹಲವಾರು ಪುಣ್ಯ ದೇವಾಲಯಗಳಿಂದ ಮಣ್ಣು ಮತ್ತು ಅನೇಕ ಪವಿತ್ರ ನದಿಗಳ ನೀರನ್ನು ಅಯೋಧ್ಯೆಗೆ ಕಳುಹಿಸಲಾಯಿತು. ಜತೆಗೆ ಬೇರೆ ಬೇರೆ ಧರ್ಮದ ಗುರುಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Sat, 5 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ