ಅಫ್ಘಾನ್​​ನಲ್ಲಿ ತಾಲಿಬಾನ್​ ಆಡಳಿತ: ಭಾರತಕ್ಕೆ ಬಂದ ಸೌದಿ ಅರೇಬಿಯಾ ವಿದೇಶಾಂಗ ವ್ಯವಹಾರಗಳ ಸಚಿವ, ನಾಳೆ ಪ್ರಧಾನಿ ಮೋದಿ ಭೇಟಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ಆಡಳಿತ ಶುರು ಮಾಡಿದೆ. ಕೆಲವು ರಾಷ್ಟ್ರಗಳು ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವು ದೇಶಗಳು ತಟಸ್ಥ ನೀತಿ ಅನುಸರಿಸಿವೆ.

ಅಫ್ಘಾನ್​​ನಲ್ಲಿ ತಾಲಿಬಾನ್​ ಆಡಳಿತ: ಭಾರತಕ್ಕೆ ಬಂದ ಸೌದಿ ಅರೇಬಿಯಾ ವಿದೇಶಾಂಗ ವ್ಯವಹಾರಗಳ ಸಚಿವ, ನಾಳೆ ಪ್ರಧಾನಿ ಮೋದಿ ಭೇಟಿ
ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಮತ್ತು ಎಸ್​.ಜೈಶಂಕರ್​ ಸಭೆ
Edited By:

Updated on: Sep 19, 2021 | 3:15 PM

ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಿನ್ಸ್​ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಮೂರು ದಿನಗಳ ಭಾರತ ಪ್ರವಾಸ ಹಮ್ಮಿಕೊಂಡಿದ್ದು, ನಿನ್ನೆ(ಶನಿವಾರ) ಸಂಜೆ ದೆಹಲಿಗೆ ಬಂದಿಳಿದಿದ್ದಾರೆ. ದೆಹಲಿಗೆ ಬಂದಿಳಿದ ಸೌದಿ ಸಚಿವರಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಟ್ವೀಟ್​ ಮೂಲಕ ಸ್ವಾಗತ ಕೋರಿದರು. ಇಂದು ದೆಹಲಿಯಲ್ಲಿ ಸಭೆ ಕೂಡ ನಡೆದಿದೆ.  ಪ್ರಿನ್ಸ್​ ಫೈಸಲ್​ ನಾಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇವರು ಅಫ್ಘಾನಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆ, ತಾಲಿಬಾನ್​ ಆಡಳಿತದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಭಾರತಕ್ಕೆ ಬಂದಿದ್ದಾಗಿ ಮೂಲಗಳು ತಿಳಿಸಿವೆ.  ಇನ್ನು ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಅಡೆಲ್​ ಅಲ್​ ಜುಬೇರ್​ ಕೂಡ ಆಗಮಿಸಿದ್ದು ಅವರೊಂದಿಗೂ ಜೈಶಂಕರ್​ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.  

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ಆಡಳಿತ ಶುರು ಮಾಡಿದೆ. ಕೆಲವು ರಾಷ್ಟ್ರಗಳು ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವು ದೇಶಗಳು ತಟಸ್ಥ ನೀತಿ ಅನುಸರಿಸಿವೆ. ಆದರೆ ಆಡಳಿತ ಶುರು ಮಾಡಿದ್ದು ಉಗ್ರರು ಆಗಿದ್ದರಿಂದ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಅಫ್ಘಾನ್​​ನಲ್ಲಿ ತಾಲಿಬಾನ್​ ಆಡಳಿತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಎಚ್​.ಎಚ್​.ಪ್ರಿನ್ಸ್​ ಫೈಸಲ್​ ಬಿನ್​ ಫರ್ಹಾನ್​ ಅಲ್​ ಸೌದ್​,ಅ್ ಅಫ್ಘಾನಿಸ್ತಾನದಲ್ಲಿ ಆಡಳಿತಕ್ಕೆ ಬಂದಿರುವ ಸರ್ಕಾರ ಅಲ್ಲಿ ಸ್ಥಿರತೆ ಸ್ಥಾಪಿಸುತ್ತದೆ ಮತ್ತು ಹಿಂಸಾಚಾರ, ತೀವ್ರವಾದವನ್ನು ಹತ್ತಿಕ್ಕುತ್ತದೆ ಎಂಬ ಆಶಯಹೊಂದಿದ್ದೇವೆ. ಅಫ್ಘಾನಿಸ್ತಾನದ ಜನರು ಬಾಹ್ಯ ಹಸ್ತಕ್ಷೇಪಗಳಿಂದ ದೂರವಿದ್ದು, ತಮ್ಮ ಮತ್ತು ದೇಶದ ಒಳಿತಿಗಾಗಿ ಯಾವುದನ್ನು ಒಪ್ಪಿಕೊಳ್ಳುತ್ತಾರೋ ಅದಕ್ಕೆ ಸೌದಿ ಅರೇಬಿಯಾ ಸಹಾಯ ಮಾಡುತ್ತದೆ ಎಂದು ಹೇಳಿದ್ದರು.

ಅಫ್ಘಾನಿಸ್ತಾನದ ಬೆಳವಣಿಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ತೀವ್ರವಾದ ಶಾಂತಿ ಮತ್ತು ಭದ್ರತೆಗೆ ದೊಡ್ಡ ಸವಾಲು ಎಂಬುಕ್ಕೆ ಅಫ್ಘಾನ್​ ಉದಾಹರಣೆ ಎಂದು ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಸಂಘಟನೆ ಸಮಿತ್​ನಲ್ಲಿ ಹೇಳಿದ್ದರು.  ಹಾಗೇ ಅಫ್ಘಾನ್​​ನಲ್ಲಿ ಎದುರಾಗಿರುವ ಸನ್ನಿವೇಶದ ಬಗ್ಗೆ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಕತಾರ್ ಮತ್ತು ಇರಾನ್ ಜತೆಗೂ ಭಾರತ ಮಾತುಕತೆ ನಡೆಸುತ್ತಿದೆ. ಪ್ರಿನ್ಸ್​ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಸೋಮವಾರ ಸಂಜೆ ಭಾರತದಿಂದ ನ್ಯೂಯಾರ್ಕ್​ಗೆ ತೆರಳಲಿದ್ದಾರೆ.

ಇದನ್ನೂ ಓದಿ: ‘ಶಿಲ್ಪಾ, ಶಮಿತಾ ನಿಮ್ಮ ಸಹೋದರಿಯರೇ?’ ಎಂದು ತಾಯಿ ಸುನಂದಾ ಶೆಟ್ಟಿಯನ್ನು ಪ್ರಶ್ನಿಸಿದ ಅಭಿಮಾನಿ; ಕಾರಣವೇನು?

Alert: ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ಡೆಬಿಟ್ ಕಾರ್ಡ್​ ವಿವರ ಪಡೆದು 99,999 ರೂ ವಂಚನೆ

 

Published On - 3:11 pm, Sun, 19 September 21