SBI Clerk Admit Card 2021: ಎಸ್​ಬಿಐ ಕ್ಲರ್ಕ್​ ಪ್ರಾಥಮಿಕ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಹೀಗಿದೆ..

| Updated By: Lakshmi Hegde

Updated on: Jun 30, 2021 | 10:40 AM

ಲೇಹ್​ ಮತ್ತು ಕಾರ್ಗಿಲ್​ ವ್ಯಾಲಿಯಿಂದ ಎಸ್​ಬಿಐ ಕ್ಲರ್ಕ್​ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಸದ್ಯ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಿಲ್ಲ. ಇವಿಷ್ಟು ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲರ ಪ್ರವೇಶ ಪತ್ರ ಲಭ್ಯವಿದೆ.

SBI Clerk Admit Card 2021: ಎಸ್​ಬಿಐ ಕ್ಲರ್ಕ್​ ಪ್ರಾಥಮಿಕ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಹೀಗಿದೆ..
ಎಸ್​ಬಿಐ
Follow us on

ದೆಹಲಿ: ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ-SBI) ಜ್ಯೂನಿಯರ್​ ಅಸೋಸಿಯೇಟ್ಸ್​ಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಎಸ್​ಬಿಐ ಕ್ಲರ್ಕ್​ ಹುದ್ದೆಗೆ ನಡೆಸಲಾಗುವ ಪ್ರಾಥಮಿಕ ಪರೀಕ್ಷೆ ದೇಶಾದ್ಯಂತ ವಿವಿಧ ಸೆಂಟರ್​ಗಳಲ್ಲಿ ಜೂ.10,11, 12 ಮತ್ತು 13ರಂದು ನಡೆಯಲಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಎಸ್​ಬಿಐ ವೆಬ್​ಸೈಟ್​ ಮೂಲಕವೇ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ. ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್​ಲೋಡ್​ ಮಾಡಿಕೊಳ್ಳಲು ಅನುಸರಿಸಬೇಕಾದ ವಿಧಾನಗಳು ಇಲ್ಲಿವೆ..

1.ಮೊದಲು ಎಸ್​​ಬಿಐ (SBI) ವೆಬ್​ಸೈಟ್​ sbi.co.in ಭೇಟಿ ಕೊಡಿ.
2. ಆ ವೆಬ್​ಸೈಟ್​​ನಲ್ಲಿ ಲಭ್ಯವಿರುವ SBI Clerk Admit Card 2021 ಪ್ರಿಲಿಮ್ಸ್ ಲಿಂಕ್​ ಮೇಲೆ ಕ್ಲಿಕ್​ ಮಾಡಿ
3. ಅದರಲ್ಲಿ ನಿಮ್ಮ ಲಾಗಿನ್​ ವಿವರವನ್ನು ಸಲ್ಲಿಸಿ, ಸಬ್​ಮಿಟ್​ ಮಾಡಿ.
4. ಸ್ಕ್ರೀನ್​ ಮೇಲೆ ನಿಮ್ಮ ಪ್ರವೇಶ ಪತ್ರ ಕಾಣಿಸುತ್ತದೆ
5. ಆ ಪ್ರವೇಶ ಪತ್ರದ ಕ್ಲಿಕ್​ ಮಾಡಿ ಡೌನ್​ಲೋಡ್ ಮಾಡಿಕೊಳ್ಳಿ.
6. ಅಡ್ಮಿಟ್​ ಕಾರ್ಡ್​ನ ಹಾರ್ಡ್​ ಕಾಪಿಯನ್ನೂ ಒಂದನ್ನು ತೆಗೆದಿಟ್ಟುಕೊಳ್ಳಿ.

ಈ ಬಾರಿ ಲಡಾಖ್​, ಲೇಹ್​ ಮತ್ತು ಕಾರ್ಗಿಲ್​ ವ್ಯಾಲಿಯಿಂದ ಎಸ್​ಬಿಐ ಕ್ಲರ್ಕ್​ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಸದ್ಯ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಿಲ್ಲ. ಇವಿಷ್ಟು ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲರ ಪ್ರವೇಶ ಪತ್ರ ಲಭ್ಯವಿದೆ. ಲಡಾಖ್​, ಲೇಹ್​ ಮತ್ತು ಕಾರ್ಗಿಲ್​ ಕಣಿವೆ ಪರೀಕ್ಷಾರ್ಥಿಗಳು ಮುಂದಿನ ಸೂಚನೆವರೆಗೆ ಕಾಯಬೇಕಿದೆ.

ಇದನ್ನೂ ಓದಿ: Social Media Day 2021: ಸಾಮಾಜಿಕ ಮಾಧ್ಯಮ ದಿನದ ಇತಿಹಾಸದ ಜತೆಗೆ ಪ್ರಾಮುಖ್ಯತೆಯನ್ನು ತಿಳಿಯಿರಿ

(SBI clerk admit card 2021 released Check here to know how to download)

Published On - 10:39 am, Wed, 30 June 21