ಹೆಲ್ಮೆಟ್ ಹಾಕದೆ ಬೈಕ್ ಮೇಲೆ ಕುಳಿತ CJ, ಇದನ್ನು ಪ್ರಶ್ನಿಸಿದ್ದ ಭೂಷಣ್‌ಗೆ ದಂಡನಾ, ಜೈಲು ಶಿಕ್ಷೆನಾ?

ಹೆಲ್ಮೆಟ್ ಹಾಕದೆ ಬೈಕ್ ಮೇಲೆ ಕುಳಿತ CJ, ಇದನ್ನು ಪ್ರಶ್ನಿಸಿದ್ದ ಭೂಷಣ್‌ಗೆ ದಂಡನಾ, ಜೈಲು ಶಿಕ್ಷೆನಾ?

[lazy-load-videos-and-sticky-control id=”oMFGHBKHPB0″] ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆಯ ಕೇಸ್‌ನ ತೀರ್ಪುನ್ನು ಸುಪ್ರೀಂಕೋರ್ಟ್ ಇಂದು ನೀಡಲಿದೆ. ಪ್ರಶಾಂತ್ ಭೂಷಣ್ ವಾದ ಕೇಳಿದ ಬಳಿಕ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿದೆ. ಹೀಗಾಗಿ ಈ ಪ್ರಕರಣ ಬಾರಿ ಕುತೂಹಲ ಕೆರಳಿಸಿದೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸದಾ ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ. ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಹೋರಾಡುವುದರಲ್ಲಿ ಪ್ರಶಾಂತ್ ಭೂಷಣ್ ಸದಾ ಮುಂದಿರುತ್ತಾರೆ. ಆದ್ರೆ, ಇಂತಹ ಪ್ರಶಾಂತ್ ಭೂಷಣ್ ಮಾಡಿದ ಎರಡು ಟ್ವೀಟ್‌ಗಳು ಈಗ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಿವೆ. […]

Ayesha Banu

|

Aug 14, 2020 | 10:37 AM

[lazy-load-videos-and-sticky-control id=”oMFGHBKHPB0″]

ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆಯ ಕೇಸ್‌ನ ತೀರ್ಪುನ್ನು ಸುಪ್ರೀಂಕೋರ್ಟ್ ಇಂದು ನೀಡಲಿದೆ. ಪ್ರಶಾಂತ್ ಭೂಷಣ್ ವಾದ ಕೇಳಿದ ಬಳಿಕ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಲಿದೆ. ಹೀಗಾಗಿ ಈ ಪ್ರಕರಣ ಬಾರಿ ಕುತೂಹಲ ಕೆರಳಿಸಿದೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸದಾ ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ. ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಹೋರಾಡುವುದರಲ್ಲಿ ಪ್ರಶಾಂತ್ ಭೂಷಣ್ ಸದಾ ಮುಂದಿರುತ್ತಾರೆ. ಆದ್ರೆ, ಇಂತಹ ಪ್ರಶಾಂತ್ ಭೂಷಣ್ ಮಾಡಿದ ಎರಡು ಟ್ವೀಟ್‌ಗಳು ಈಗ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸಿವೆ.

ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌ ಅಂದಹಾಗೇ ಇಂದು ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆಯ ಕೇಸ್‌ನ ತೀರ್ಪುನ್ನು ಸುಪ್ರೀಂಕೋರ್ಟ್ ಇಂದು ನೀಡಲಿದೆ. ಹೀಗಾಗಿ ಎಲ್ಲರ ಚಿತ್ತ ಈ ಕೇಸ್‌ನತ್ತ ತಿರುಗಿದೆ. ಆಗಿದ್ದೇನು ಅಂದ್ರೆ, ಕೊರೊನಾ ಲಾಕ್​ಡೌನ್ ವೇಳೆ ಸುಪ್ರೀಂಕೋರ್ಟ್ ಸಿಜೆ ಎಸ್.ಎ.ಬೋಬಡೆ ಅವರು ತಮ್ಮ ಸ್ವಂತ ಊರಾದ ಮಹಾರಾಷ್ಟ್ರದ ನಾಗಪುರದಲ್ಲಿದ್ದರು. ಆಗ ಹರ್ಲೆ ಡೇವಿಡ್‌ಸನ್ ಬೈಕ್ ಮೇಲೆ ಕುಳಿತು ಫೋಟೋಗೆ ಪೋಸ್ ನೀಡಿದ್ದರು.

ಈ ಪೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಸೋಷಿಯಲ್ ಮೀಡಿಯಾದಲ್ಲೂ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಎರಡು ಟ್ವೀಟ್ ಮಾಡಿದ್ದರು. ಸಿಜೆ ಎಸ್.ಎ.ಬೋಬಡೆ ಅವರು ಬೈಕ್ ಮೇಲೆ ಕುಳಿತುಕೊಂಡು ತಲೆಗೆ ಹೆಲ್ಮೆಟ್ ಹಾಕಿಲ್ಲ.

ಲಾಕ್‌ಡೌನ್ ನಿಂದ ಸುಪ್ರೀಂಕೋರ್ಟ್ ಗೆ ಬಾಗಿಲು ಹಾಕಿ ಬೈಕ್ ಸವಾರಿ ಮಾಡ್ತಿದ್ದಾರೆ ಎಂದೆಲ್ಲಾ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಕಣ್ಣು ಕೆಂಪಗಾಗಿಸಿದ್ದವು. ಸುಪ್ರೀಂಕೋರ್ಟ್ ಸ್ವಪ್ರೇರಣೆಯಿಂದ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಕೊಂಡು, ಪ್ರಶಾಂತ್ ಭೂಷಣ್‌ಗೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್​ಗೆ ಪ್ರಶಾಂತ್ ಭೂಷಣ್ ಉತ್ತರ ನೀಡಿದ್ದಾರೆ.

ಇನ್ನು ಸಿಜೆ ಬೋಬಡೆ ಏಕೆ ತಲೆಗೆ ಹೆಲ್ಮೆಟ್ ಹಾಕಿಲ್ಲ ಎಂದು ಕೇಳಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಯಾಕೆಂದ್ರೆ, ಸಿಜೆ ಬೈಕ್ ಮೇಲೆ ಕುಳಿತಿದ್ದಾಗ ಬೈಕ್ ಗೆ ಸ್ಟ್ಯಾಂಡ್ ಹಾಕಿತ್ತು. ಹೀಗಾಗಿ ಹೆಲ್ಮೆಟ್ ಹಾಕುವ ಅಗತ್ಯ ಇಲ್ಲ. ಹೀಗಾಗಿ ಸಿಜೆ ಹೆಲ್ಮೆಟ್ ಏಕೆ ಹಾಕಿಲ್ಲ ಎನ್ನುವ ಭಾಗದ ಟ್ವೀಟ್ ಗೆ ಮಾತ್ರ ವಿಷಾದ ವ್ಯಕ್ತಪಡಿಸುತ್ತೇನೆ. ಉಳಿದ ಭಾಗದ ಟ್ವೀಟ್‌ಗೆ ಈಗಲೂ ಬದ್ದ. ಆ ಟ್ವೀಟ್‌ ನ ಅಂಶಗಳನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ಪ್ರಶಾಂತ್ ಭೂಷಣ್‌ಗೆ ದಂಡನಾ ಅಥವಾ ಜೈಲುಶಿಕ್ಷೆನಾ? ಇಂದು ಸುಪ್ರೀಂಕೋರ್ಟ್ ಈ ನ್ಯಾಯಾಂಗ ನಿಂದನೆಯ ಕೇಸಿನ ತೀರ್ಪು ನೀಡುವುದರಿಂದ ಕುತೂಹಲ ಸಹಜವಾಗಿಯೇ ಇದೆ. ನ್ಯಾಯಾಂಗ ನಿಂದನೆಯ ಕೇಸ್​ಗಳಲ್ಲಿ ದಂಡ ವಿಧಿಸಬಹುದು, ಜೈಲುಶಿಕ್ಷೆ ವಿಧಿಸಲು ಕೂಡ ಅವಕಾಶ ಇದೆ. ಹಾಗೇ ಸುಪ್ರೀಂಕೋರ್ಟ್ ಪ್ರಶಾಂತ್ ಭೂಷಣ್ ವಾದವನ್ನು ಒಪ್ಪಿಕೊಂಡು ಕೇಸ್ ಅನ್ನು ಕೈ ಬಿಡಬಹುದು.. ಹೀಗಾಗಿ ಈ ಕೇಸ್ ಯಾವ ತಿರುವು ಪಡೆಯುತ್ತೆ ಅನ್ನೋದೆ ಸಸ್ಪೆನ್ಸ್.

ಇದನ್ನೂ ಓದಿ: My Lord! ಪಡ್ಡೆ ಯುವಕನಂತೆ ಹಾರ್ಲೆ ಬೈಕ್​ ಮೇಲೆ ಕುಳಿತ ಇವರು ಯಾರು ಗೊತ್ತಾ!?

Follow us on

Related Stories

Most Read Stories

Click on your DTH Provider to Add TV9 Kannada