ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ಸಹಪಾಠಿಗಳಿಗೆ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿಯ ಬಂಧನ

|

Updated on: Sep 29, 2023 | 8:55 AM

ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ಸಹಪಾಠಿಗಳಿಗೆ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮುಜಾಫರ್‌ನಗರದ ಶಾಲಾ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದ್ದು, ಮುಸ್ಲಿಂ ವಿದ್ಯಾರ್ಥಿಗೆ ತರಗತಿಯಲ್ಲಿ ಹಿಂದೂ ಸಹ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ಕೇಳಿದ ಆರೋಪದ ಮೇಲೆ ಶಿಕ್ಷಕರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.

ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ಸಹಪಾಠಿಗಳಿಗೆ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿಯ ಬಂಧನ
ಪೊಲೀಸ್
Image Credit source: India Today
Follow us on

ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ಸಹಪಾಠಿಗಳಿಗೆ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮುಜಾಫರ್‌ನಗರದ ಶಾಲಾ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದ್ದು, ಮುಸ್ಲಿಂ ವಿದ್ಯಾರ್ಥಿಗೆ ತರಗತಿಯಲ್ಲಿ ಹಿಂದೂ ಸಹ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ಕೇಳಿದ ಆರೋಪದ ಮೇಲೆ ಶಿಕ್ಷಕರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.

ಸೆಪ್ಟೆಂಬರ್ 26 ರಂದು ಈ ಘಟನೆ ನಡೆದಿದ್ದು, 5 ನೇ ತರಗತಿ ವಿದ್ಯಾರ್ಥಿಗೆ ಸಾಜಿಶ್ತಾ ಎಂದು ಗುರುತಿಸಲಾದ ಶಿಕ್ಷಕಿ ಕೆಲವು ಪ್ರಶ್ನೆಗಳನ್ನು ಕೇಳಿದ್ದರು.
ಶಿಕ್ಷಕಿಯ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಉತ್ತರಿಸಲು ಸಾಧ್ಯವಾಗದ ಕಾರಣ, ಶಿಕ್ಷಕಿ ಮುಸ್ಲಿಂ ಸಹ ವಿದ್ಯಾರ್ಥಿಗೆ ಹುಡುಗನಿಗೆ ಕಪಾಳಮೋಕ್ಷ ಮಾಡುವಂತೆ ಕೇಳಿದ್ದಾರೆ.

ಈ ಕಾರಣದಿಂದಾಗಿ ಹಿಂದೂ ವಿದ್ಯಾರ್ಥಿ ಖಿನ್ನತೆಗೆ ಜಾರಿದ್ದ, ಮನೆಗೆ ಬಂದಾಗ ಪೋಷಕರು ವಿದ್ಯಾರ್ಥಿಯ ಮುಖ ನೋಡಿ ಏನೋ ಆಗಿದೆ ಎಂದು ಅರಿತುಕೊಂಡಿದ್ದಾರೆ, ಆಮೇಲೆ ಪದೇ ಪದೇ ಬಾಲಕನ ಬಳಿ ಈ ವಿಚಾರ ಕೇಳಿದಾಗ ಅಂತಿಮವಾಗಿ ಶಿಕ್ಷಕಿಯ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.

ಶಿಕ್ಷಕಿ ವಿರುದ್ಧ ಸೆಪ್ಟೆಂಬರ್ 27 ರಂದು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು, ಸೆಪ್ಟೆಂಬರ್ 28 ರಂದು ಶಿಕ್ಷಕಿಯನ್ನು ಬಂಧಿಸಿದರು, ಶಾಲೆಯ ಅಧಿಕಾರಿಗಳು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್​ನಗರದ ಶಾಲೆಯೊಂದರಲ್ಲಿ ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ಸೂಚಿಸಿದ ಶಿಕ್ಷಕರ ವಿರುದ್ಧವೂ ದೂರು ದಾಖಲಾಗಿತ್ತು, ಆ ಘಟನೆ ನಡೆದು ಒಂದು ತಿಂಗಳ ಬಳಿಕ ಈ ಘಟನೆ ನಡೆದಿದೆ.

ಈ ಶಿಕ್ಷಕರ ನಡವಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳು ಅಳುತ್ತಿರುವುದು ವಿದ್ಯಾರ್ಥಿಗಳನ್ನು ಸರದಿಯಲ್ಲಿ ನಿಲ್ಲಿಸಿ ಹೊಡೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ