SCO Summit: ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಬೇಕು, ಪಾಕ್​​​ ವಿದೇಶಾಂಗ ಸಚಿವರ ಮುಂದೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಎಸ್ ಜೈಶಂಕರ್

|

Updated on: May 05, 2023 | 1:41 PM

ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ, ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪಗಳಲ್ಲಿ ನಿಲ್ಲಬೇಕು ಎಂದು ಗೋವಾದಲ್ಲಿ ಎಸ್‌ಸಿಒ ಸಭೆಯಲ್ಲಿ ಎಸ್ ಜೈಶಂಕರ್ ಹೇಳಿದರು.

SCO Summit: ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಬೇಕು, ಪಾಕ್​​​ ವಿದೇಶಾಂಗ ಸಚಿವರ ಮುಂದೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಎಸ್ ಜೈಶಂಕರ್
Follow us on

ಪಣಜಿ: ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ, ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪಗಳಲ್ಲಿ ನಿಲ್ಲಬೇಕು ಎಂದು ಗೋವಾದಲ್ಲಿ ಎಸ್‌ಸಿಒ (Shanghai Cooperation Organization) ಸಭೆಯಲ್ಲಿ ಎಸ್ ಜೈಶಂಕರ್ ಹೇಳಿದರು. ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ, ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪಗಳಲ್ಲಿ ನಿಲ್ಲಬೇಕು ಎಸ್ ಜೈಶಂಕರ್ ಪ್ರಾದೇಶಿಕ ಸಭೆಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆಯ ಬೆದರಿಕೆ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಅದನ್ನು ನಿಲ್ಲಿಸಬೇಕು. ಭಯೋತ್ಪಾದನೆಯನ್ನು ಎದುರಿಸುವುದು SCO ಯ ಮೂಲ ಆದೇಶಗಳಲ್ಲಿ ಒಂದಾಗಿದೆ,” ಅವರು ಹೇಳಿದರು. ಗೋವಾದಲ್ಲಿ ನಡೆದ ಎಸ್‌ಸಿಒ ಕೌನ್ಸಿಲ್ ಆಫ್ ಫಾರಿನ್ ಮಿನಿಸ್ಟರ್ಸ್ (ಸಿಎಫ್‌ಎಂ) ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಸ್ವಾಗತಿಸಿದ ನಂತರ ಸಭೆಯನ್ನದ್ದೇಶಿ ಮಾತನಾಡಿದರು. ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಮುಂದೆಯೇ ಭಯೋತ್ಪಾದನೆಯ ಬೆದರಿಕೆ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಅದನ್ನು ನಿಲ್ಲಿಸಬೇಕು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಜಗತ್ತು ಕೋವಿಡ್ ಮತ್ತು ಅದರ ಪರಿಣಾಮಗಳನ್ನು ಎದುರಿಸುವಲ್ಲಿ ತೊಡಗಿರುವಾಗ, ಭಯೋತ್ಪಾದನೆಯ ಬೆದರಿಕೆ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಇಂತಹ ಕೃತ್ಯಗಳಿಂದ ನಮ್ಮ ಸೇನೆಗಳ ಮೇಲೆ ದಾಳಿ ಮಾಡುವುದು, ಹತ್ಯೆ ಮಾಡುವುದನ್ನು ನಿಲ್ಲಿಸಬೇಕು. ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ನಾವು ದೃಢವಾಗಿ ಹೇಳುತ್ತೇವೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅದರ ಎಲ್ಲಾ ರೂಪಗಳ ಚುಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: SCO Summit 2022 ಇದು ಯುದ್ಧದ ಯುಗವಲ್ಲ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​​ ಪುಟಿನ್​​ಗೆ ಹೇಳಿದ ಪ್ರಧಾನಿ ಮೋದಿ

ಈ ಸಭೆಯಲ್ಲಿ ಮಾತನಾಡಿ ಪಾಕ್​​ ವಿದೇಶಾಂಗ ಸಚಿವ ಜರ್ದಾರಿ ಸದಸ್ಯ ರಾಷ್ಟ್ರಗಳು “ಭಯೋತ್ಪಾದನೆಯ ಬೆದರಿಕೆಯನ್ನು” ಸಾಮೂಹಿಕವಾಗಿ ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸಿದರು. ರಾಜತಾಂತ್ರಿಕ ವಿಚಾರಕ್ಕಾಗಿ ಭಯೋತ್ಪಾದನೆಯನ್ನು ಅಸ್ತ್ರಗೊಳಿಸುವಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಅವರು ಹೇಳಿದರು.

ಇದರ ಜತೆ ರಾಜತಾಂತ್ರಿಕ ವಿಚಾರಗಳ ಬಗ್ಗೆ, ಭೂಪ್ರದೇಶ ವಿಚಾದಗಳ ಬಗ್ಗೆಯೂ ಮಾತನಾಡಿದ್ದಾರೆ. ಭಾರತ ಮತ್ತು ಪಾಕ್ ಒಳ್ಳೆಯ ಸಂಬಂಧ ಮತ್ತು ಎಲ್ಲ ವಿಚಾಗಳಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿದೆ. ಇದರ ಜತೆಗೆ ತಂತ್ರಜ್ಞಾನ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು, ಭಾರತ ತಂತ್ರಿಕವಾಗಿ ಹೆಚ್ಚು ಸಾಧನೆಯನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:40 am, Fri, 5 May 23