SCO Summit: ಪಾಕ್​​ ವಿದೇಶಾಂಗ ಸಚಿವರನ್ನು ಸ್ವಾಗತಿಸಿದ ಸಚಿವ ಎಸ್ ಜೈಶಂಕರ್

|

Updated on: May 05, 2023 | 10:59 AM

ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶಕ್ಕೆ ಇಂದು (ಮೇ 5) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಸ್ವಾಗತಿಸಿದರು.

SCO Summit: ಪಾಕ್​​ ವಿದೇಶಾಂಗ ಸಚಿವರನ್ನು ಸ್ವಾಗತಿಸಿದ ಸಚಿವ ಎಸ್ ಜೈಶಂಕರ್
ಎಸ್ ಜೈಶಂಕರ್ ಮತ್ತು ಬಿಲಾವಲ್ ಭುಟ್ಟೋ-ಜರ್ದಾರಿ
Follow us on

ದೆಹಲಿ: ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (SCO Summit) ಸಮಾವೇಶಕ್ಕೆ ಇಂದು (ಮೇ 5) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಸ್ವಾಗತಿಸಿದರು. ಜತೆಗೆಯಾಗಿ ನಿಂತು ಎರಡು ದೇಶಗಳ ಸಚಿವರುಗಳು ಫೋಟೋಗೆ ಪೋಸ್ ನೀಡಿದ್ದಾರೆ. ಇನ್ನೂ ಭಾರತದ ವಿದೇಶಾಂಗ ಸಚಿವ ಎಸ್​​ ಜೈಶಂಕರ್​ ಸಾಂಪ್ರದಾಯಿಕವಾಗಿ ಪಾಕಿಸ್ತಾನ ವಿದೇಶಾಂಗ ಸಚಿವರಿಗೆ ಶುಭಾಶಯ ತಿಳಿಸಿದರು. ಪಾಕಿಸ್ತಾನದ ಒಬ್ಬ ಮಂತ್ರಿ ಭಾರತಕ್ಕೆ 12 ವರ್ಷಗಳ ನಂತರ ಭೇಟಿ ನೀಡಿರುವ ನೆರೆಯ ದೇಶದ ಮೊದಲ ಹಿರಿಯ ನಾಯಕ ಬಿಲಾವಲ್ ಭುಟ್ಟೊ ಎಂದು ಹೇಳಲಾಗಿದೆ. ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವಿನ ದ್ವಿಪಕ್ಷೀಯ ಸಂಬಂಧದ ಮಾತುಕತೆಗಳ ಬಗ್ಗೆ ಇನ್ನೂ ಯಾವುದೇ ಸಮಯ ನಗದಿಯಾಗಿಲ್ಲ. ಯಾವಾಗಲ್ಲೂ ಭಾರತ ಹಾಗೂ ಪಾಕಿಸ್ತಾನ ಶುತ್ರಗಳಂತೆ ಇದ್ದರು. ಈ ಸಭೆಯಲ್ಲಿ ಪಾಕಿಸ್ತಾನದ ಮಂತ್ರಿ ಭಾಗವಾಹಿಸಿರುವುದು ಆಶ್ಚರ್ಯವಾಗಿದೆ, ಗಡಿ ವಿವಾದಗಳು ಅಥವಾ ಇನ್ನೂ ಅನೇಕ ವಿಚಾರಗಳಲ್ಲಿ ಎರಡು ದೇಶಗಳ ನಡುವೆ ಒಂದಲ್ಲ ಒಂದು ವಿವಾದಗಳು ನಡೆಯುತ್ತಿತ್ತು.

SCO ಕೌನ್ಸಿಲ್ ಆಫ್ ಫಾರಿನ್ ಮಿನಿಸ್ಟರ್ಸ್ (CFM) ಸಭೆಯಲ್ಲಿ ಪಾಲ್ಗೊಳ್ಳಲು ಭುಟ್ಟೋ ಭಾರತಕ್ಕೆ ಭೇಟಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಾಬಾದ್‌ನ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಳಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಒಂದಲ್ಲ ಒಂದು ಜಿದ್ದಾಜಿದ್ದಿ ಇತ್ತು.

ಇಂದು ಮುಂಜಾನೆ ಗೋವಾದ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ವಿಭಾಗದ ಮುಖ್ಯಸ್ಥರಾಗಿರುವ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ಅವರು ಬರಮಾಡಿಕೊಂಡರು.

ಇದನ್ನೂ ಓದಿ: SCO Summit 2022 ಇದು ಯುದ್ಧದ ಯುಗವಲ್ಲ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​​ ಪುಟಿನ್​​ಗೆ ಹೇಳಿದ ಪ್ರಧಾನಿ ಮೋದಿ

2022ರಲ್ಲಿ ನಡೆದ ಸಮರ್ಕಂಡ್ SCO ಶೃಂಗಸಭೆಯಲ್ಲಿ ಭಾರತವು SCOದ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಈ ವರ್ಷ, ಮೇ 4-5 ರಿಂದ ಗೋವಾದಲ್ಲಿ ವಿದೇಶಾಂಗ ಮಂತ್ರಿಗಳ ಸಭೆ ಸೇರಿದಂತೆ ಹಲವಾರು ಪ್ರಮುಖ SCO ಸಭೆಗಳನ್ನು ಭಾರತ ಆಯೋಜಿಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ