ತಾಳಿ ಕಟ್ಟುವ ಶುಭ ಘಳಿಗೆ… ವರ ಮಹಾಶಯ ಮದುವೆ ಮಂಟಪದಿಂದ ಲಾಂಗ್ ಜಂಪ್! ಆಮೇಲೆ ಏನಾಯ್ತು?
ಇಷ್ಟಕ್ಕೂ ವರ ಮಹಾಶಯ ಯಾಕೆ ಹಾಗೆ ಓಡಿಹೋದ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಯುವತಿಗೆ ಮಾತ್ರ ವೃಥಾ ಕಣ್ಣೀರು ಹಾಕುವ ಪ್ರಮೇಯ ಬಂದಿದೆ. ಮುಂದೇನು ಗೊತ್ತಿಲ್ಲ ಎಂದು ತಲೆಯ ಮೇಲೆ ಕೈ ಒತ್ತಿಕೊಂಡು ಕುಳಿತಿದ್ದಾಳೆ.
ಕೆಲವರು ಪ್ರೇಮ-ಕಾಮದಲ್ಲಿ ಬಿಟ್ಟು ನರಳಾಡುತ್ತಾ, ಪ್ರೀತಿಯನರಸಿ ತಂದೆ-ತಾಯಿಯನ್ನು, ಕಟ್ಟಿಕೊಂಡವರನ್ನು ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ತಂದೆ-ತಾಯಿಯನ್ನು ಬಿಡಲಾರದೆ.. ಪ್ರೀತಿಯನ್ನೂ ನಿರಾಕರಿಸಲಾರದೆ… ಹಿರಿಯರ ಮನವೊಲಿಸಿ ಮದುವೆಯಾಗಲು ಬಯಸುತ್ತಾರೆ. ಇತ್ತೀಚೆಗಷ್ಟೇ ಹೈದರಾಬಾದ್‌ನ (Hyderabad) ಜೀಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ಆ ಯುವಕ (Bridegroom) ಯುವತಿ (Bride) ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟವರು. ಅದರಂತೆ ಅವರು ಪ್ರೀತಿಸಿ ಮದುವೆಯೂ (Marriage) ಆದರು. ಆದಾದ ಮೇಲೆ… ಮನೆಯಲ್ಲಿ ಹಿರಿಯರ ಮನವೊಲಿಸಿದ ಬಳಿಕ ಪಾಲಕರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಲು ನಿರ್ಧರಿಸಿದ್ದಾರೆ. ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ (Love story) ಹೇಳಿ.. ಹಿರಿಯರನ್ನು ಒಪ್ಪಿಸಿದ್ದರು. ಆದರೆ ಮುಂದೇನಾಯ್ತು ಅಂದರೆ…
ಇಬ್ಬರ ಪ್ರೀತಿಗೆ ಮನೆಯವರು ಒಪ್ಪಿ, ನೂರ್ಕಾಲ ಬಾಳಿ ಎಂದು ಆಶೀರ್ವದಿಸಲು ಸಂಭ್ರಮದಿಂದ ಇದ್ದರು. ಯುವತಿ ತಾನು ಪ್ರೀತಿಸಿದವನ ಜೊತೆ ಹಿರಿಯರ ಸಮ್ಮುಖದಲ್ಲಿಯೂ ಮತ್ತೊಮ್ಮೆ ಮದುವೆ ಆಗುತ್ತಿದ್ದೀನಿ ಎಂದು ಖುಷಿಪಟ್ಟಳು. ಆದರೆ ಆ ಖುಷಿ ಹೆಚ್ಚು ಕಾಲ ಬಾಳಲಿಲ್ಲ. ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ ಇದೆ ಎನ್ನುವಾಗ ವರ ಮಹಾಶಯ ಲಾಂಗ್ ಜಂಪ್ ಮಾಡಿದ್ದಾನೆ. ಹೊರಗೆ ಜಿಗಿದವನೇ ಮೊದಲು ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಟ್ಟಿದ್ದಾನೆ.
ಇದನ್ನೂ ಓದಿ:
Viral News: ಸುಮಾರು 27 ದಿನಗಳ ಕಾಲ, 64 ಕಿ.ಮೀ ನಡೆದುಕೊಂಡು ಹೋಗಿ ತನ್ನ ಮಾಲೀಕನ ಮನೆ ಸೇರಿದ ಶ್ವಾನ
ಸ್ನೇಹಿತರು ಮತ್ತು ಪರಿಚಿತ ಸಂಬಂಧಿಕರ ಬಳಿ ವರ ಎಲ್ಲಿದ್ದಾನೆ, ನಿಮ್ಮ ಕಡೆ ಏನಾದರೂ ಬಂದಿದ್ದಾನಾ ಎಂದು ಆತಂಕದಿಂದ ಕೇಳಿದ್ದಾರೆ. ಆದರೆ, ಆತ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕೊನೆಗೆ ಪೋಷಕರು ಮೊನ್ನೆ ಮಂಗಳವಾರ ರಾತ್ರಿ 11 ಗಂಟೆಗೆ ಜೀಡಿಮೆಟ್ಲ ಪೊಲೀಸರ ಮೊರೆ ಹೋಗಿದ್ದಾರೆ. ವಧು ನೀಡಿದ ದೂರಿನದ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಖಾಕಿಗಳು ಕೇವಲ 4 ಗಂಟೆಯಲ್ಲಿ ವರನನ್ನು ಪತ್ತೆ ಹಚ್ಚಿದ್ದಾರೆ! ಕೌನ್ಸೆಲಿಂಗ್ ನೀಡಿ ಮನೆಗೆ ಕರೆತರಲಾಯಿತು. ಇದೇ ವೇಳೆ ನಿಗದಿತ ಸಮಯಕ್ಕೆ ಮದುವೆ ನಡೆದಿದ್ದರಿಂದ ಎರಡೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.
ಇಷ್ಟಕ್ಕೂ ವರ ಮಹಾಶಯ ಯಾಕೆ ಹಾಗೆ ಓಡಿಹೋದ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಪೊಲೀಸರ ವಿಚಾರಣೆ ನಡೆದಿದೆ. ಈ ಮಧ್ಯೆ, ಪೋಷಕರೂ ಮಾತನಾಡಿಸಿದ್ದಾರೆ. ಯಾಕಪ್ಪಾ ರಾಜ ಹೀಗೆ ಮಾಡಿದೆ. ನೀನೇ ಲವ್ ಮಾಡಿ ಮದುವೆಯಾಗಿರುವುದಲ್ಲವಾ? ಯಾಕೆ ಹೀಗೆ ಮಾಡಿದೆ ಎಂದೆಲ್ಲಾ ತಲೆಗೊಂದರಂತೆ ಪ್ರಶ್ನೆಗಳ ಸುರಿಮಳೆಗೆರೆದಿದ್ದಾರೆ. ಈ ಮಧ್ಯೆ ವರನಿಗೆ ಕೌನ್ಸಿಲಿಂಗ್ ಸಹ ಕೊಡುವ ಪ್ರಯತ್ನ ನಡೆದಿದೆ. ಯುವತಿಗೆ ವೃಥಾ ಕಣ್ಣೀರು ಹಾಕುವ ಪ್ರಮೇಯ ಬಂದಿದೆ. ಮುಂದೇನು ಗೊತ್ತಿಲ್ಲ ಎಂದು ತಲೆಯ ಮೇಲೆ ಕೈ ಒತ್ತಿಕೊಂಡು ಕುಳಿತಿದ್ದಾಳೆ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ