Viral News: ಸುಮಾರು 27 ದಿನಗಳ ಕಾಲ, 64 ಕಿ.ಮೀ ನಡೆದುಕೊಂಡು ಹೋಗಿ ತನ್ನ ಮಾಲೀಕನ ಮನೆ ಸೇರಿದ ಶ್ವಾನ

ಕೂಪರ್ ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್ ಜಾತಿಯ ಶ್ವಾನ ತನ್ನ ಹೊಸ ಮಾಲೀಕನ ಮನೆಯಿಂದ ತಪ್ಪಿಸಿಕೊಂಡು ಸುಮಾರು ಒಂದು ತಿಂಗಳುಗಳ ಕಾಲ 64ಕಿ.ಮೀ ನಡೆದುಕೊಂಡು ಹೋಗುವ ಮೂಲಕ ತನ್ನ ಮೊದಲ ಸಾಕಿದ ಮಾಲೀಕನ ಮನೆಗೆ ಸುರಕ್ಷಿತವಾಗಿ ಸೇರಿದೆ.

Viral News: ಸುಮಾರು 27 ದಿನಗಳ ಕಾಲ, 64 ಕಿ.ಮೀ ನಡೆದುಕೊಂಡು ಹೋಗಿ ತನ್ನ ಮಾಲೀಕನ ಮನೆ ಸೇರಿದ ಶ್ವಾನ
ಗೋಲ್ಡನ್ ರಿಟ್ರೈವರ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:May 02, 2023 | 10:37 AM

ನಾಯಿಯ ಪ್ರೀತಿ ಮತ್ತು ನಿಯತ್ತಿನ ಮುಂದೆ ಏನು ಇಲ್ಲ. ತನ್ನನ್ನೂ ಸಾಕಿದ ಮಾಲೀಕನಿಗೆ ಒಂದು ಅದ್ಭುತ ಸ್ಪರ್ಶ ಮತ್ತು ಪ್ರೀತಿಯನ್ನು ಈ ನಾಯಿಗಳು ನೀಡುತ್ತದೆ. ಇದಕ್ಕೆ ಬೀದಿ ನಾಯಿಗಳು ಹೊರತಾಗಿಲ್ಲ. ಪ್ರೀತಿ ತೋರಿಸಿದ ಮನೆಯನ್ನು ಬಿಟ್ಟು ಹೋಗಲು ಯಾವತ್ತೂ ಇಷ್ಟ ಪಡುವುದಿಲ್ಲ ಹಾಗೂ ಅವುಗಳು ಎಲ್ಲೇ ತಪ್ಪಿಸಿಕೊಂಡು ಹೋದರೂ, ಒಂದಷ್ಟು ದಿನಗಳ ಬಳಿಕ ತಮ್ಮ ಮನೆಗೆ ಮರಳಿ ಸೇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಗೋಲ್ಡನ್ ರಿಟ್ರೈವರ್ ಜಾತಿಯ ನಾಯಿ ಒಂದು ತನ್ನ ಹಿಂದಿನ ಮಾಲೀಕನ ಮನೆ ಸೇರಲು 64ಕಿ.ಮೀ ಗಳಷ್ಟು ದೂರ 27 ದಿನಗಳ ಕಾಲ ಪ್ರಯಾಣಿಸಿದೆ.

ಕೂಪರ್ ಹೆಸರಿನ ಗೋಲ್ಡನ್ ರಿಟ್ರೈವರ್ ಜಾತಿಯ ನಾಯಿ ತನ್ನ ಹಿಂದಿನ ಮಾಲೀಕನ ಮನೆಗೆ ಸೇರುವ ಸಲುವಾಗಿ ಸುಮಾರು ಒಂದು ತಿಂಗಳ ಕಾಲ 64 ಕಿ.ಮೀಗಳಷ್ಟು ಪ್ರಯಾಣಿಸಿದೆ. ವರದಿಗಳ ಪ್ರಕಾರ ಕೂಪರ್ ಎಂಬ ನಾಯಿಯು ಉತ್ತರ ಐರ್ಲೆಂಡ್‌ನ ಕೌಂಟಿ ಟೈರೋನ್​​​ನಲ್ಲಿರುವ ಒಬ್ಬ ವ್ಯಕ್ತಿಗೆ ಈ ನಾಯಿಯನ್ನು ಮಾರಾಟ ಮಾಡಿದ್ದಾರೆ. ತನ್ನ ಹೊಸ ಮಾಲೀಕ ನಿಗೆಲ್ ಫ್ಲೆಮಿಂಗ್ ಎಂಬವರ ಮನೆಗೆ ಬಂದ ಕೂಡಲೇ ಈ ನಾಯಿ ಕಾರಿನಿಂದ ಜಿಗಿದು ಓಡಿ ಹೋಗಿದೆ. ಸುಮಾರು ಒಂದು ತಿಂಗಳ ಕಾಲ ಕಣ್ಮರೆಯಾಗಿತ್ತು. ಸುಮಾರು 40 ಮೈಲಿಗಳಷ್ಟು ಪ್ರಯಾಣ ಮಾಡುವ ಮೂಲಕ ಲಂಡನ್‌ಡೆರಿ ಕೌಂಟಿಯ ಟೋಬರ್ ಮೋರ್ ನಲ್ಲಿರುವ ತನ್ನ ಮೊದಲ ಮಾಲೀಕನ ಮನೆ ಸೇರಿದೆ.

ಕೂಪರ್​​ನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಆ ನಾಯಿಯನ್ನು ದತ್ತು ಕೊಡಲಾಗಿತ್ತು. ಹೊಸ ಮಾಲೀಕ ನಿಗೆಲ್ ಫ್ಲೆಮಿಂಗ್ ಪ್ರಕಾರ ಕೂಪರ್ ಅವರ ಮನೆಯಲ್ಲಿ ಕೇವಲ ಸ್ವಲ್ಪ ಹೊತ್ತು ಮಾತ್ರ ಇತ್ತು. ನಂತರ ಅದು ಓಡಿ ಹೋಗಿದೆ. ನಾಯಿಯನ್ನು ಹುಡುಕಾಡಲು ಅವರು ಲಾಸ್ಟ್ ಪಾವ್ಸ್ ಎನ್ ಐ ಹೆಸರಿನ ಕಾಣೆಯಾದ ಸಾಕುಪ್ರಾಣಿಗಳ ಚಾರಿಟಿಗೆ ದೂರು ನೀಡುತ್ತಾರೆ. ಚಾರಿಟಿಯು ಕೂಪರ್​​​ನ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ಮತ್ತು ಹಲವಾರು ಕಡೆಗಳಲ್ಲಿ ಪೋಸ್ಟರ್​​​ಗಳನ್ನು ಅಂಟಿಸಿ ನಾಯಿಯ ಬಗ್ಗೆ ಸುಳಿವು ಸಿಕ್ಕರೆ ತಕ್ಷಣ ತಮಗೆ ಮಾಹಿತಿ ನೀಡುವಂತೆ ಕೇಳಿತು. ಇದರಿಂದ ಕೆಲವರು ಕೂಪರ್ ಹೊಲಗಳು ಗುಡ್ಡಗಾಡುಗಳ ನಡುವೆ ನಡೆದುಕೊಂಡು ಹೋಗುತ್ತಿತ್ತು ಎಂದು ಚಾರಿಟಿಗೆ ಕೆಲವು ಜನ ಮಾಹಿತಿ ನೀಡಿದರು.

ಇದನ್ನೂ ಓದಿ:Viral News : ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!

ಕೂಪರ್ ತಾನು ಮೊದಲು ಇದ್ದ ಮನೆಯನ್ನು ಸೇರಲು 27 ದಿನಗಳ ಕಾಲ ರಸ್ತೆ, ಕಾಡುಗಳು, ಹೊಲ, ಹಳ್ಳಿಗಾಡಿನ ರಸ್ತೆಗಳ ಮೂಲಕ ನಡೆದಾಡುವ ಮೂಲಕ ತನ್ನನ್ನೂ ಮೊದಲ ಸಾಕಿದ ಮಾಲೀಕನ ಮನೆ ಸೇರಿದೆ ಎಂದು ಚಾರಿಟಿ ಹೇಳಿಕೆ ನೀಡಿದೆ. ಕೂಪರ್​​ನ ಹೊಸ ಮಾಲೀಕ ನಿಗೆಲ್ ಫ್ಲೆಮಿಂಗ್, ನಾಯಿಯು ಮಾನವ ಸಂಪರ್ಕಕ್ಕೆ ಸಿಗದೆ ಅಥವಾ 20 ದಿನಗಳಿಗಿಂತ ಹೆಚ್ಚು ಕಾಲ ಹೇಗೆ ಬದುಕುಳಿದಿದೆ ಎಂದು ಆಶ್ಚರ್ಯವಾಗಿದೆ ಎಂದು ಹೇಳಿದರು.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:37 am, Tue, 2 May 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ