Viral Video: ಮೊದಲ ಹೆಜ್ಜೆ ಇಡಲು ಹರಸಾಹಸ ಪಡುತ್ತಿರುವ ಜಿರಾಫೆ

ಪುಟ್ಟ ಜಿರಾಫೆಯೊಂದು ತಾನು ನಡೆದಾಡಲು ಕಲಿಯಲು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

Viral Video: ಮೊದಲ ಹೆಜ್ಜೆ ಇಡಲು ಹರಸಾಹಸ ಪಡುತ್ತಿರುವ ಜಿರಾಫೆ
ವೈರಲ್​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:May 01, 2023 | 3:32 PM

ಮರಳಿ ಮರಳಿ ಪ್ರಯತ್ನಿಸಿದಾಗ ಮಾತ್ರವೇ ಯಶಸ್ಸು ಸಿಗುತ್ತದೆ. ಇದಕ್ಕೊಂದು ಸಾಕ್ಷಿ ಎಂಬಂತೆ ಇಲ್ಲೊಂದು ಮುದ್ದಾದ ಜಿರಾಫೆ ಮರಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂದು, ಛಲ ಬಿಡದೆ ಅನೇಕ ಬಾರಿ ನಡೆಯಲು ಪ್ರಯತ್ನ ಪಟ್ಟು, ನಿಂತುಕೊಳ್ಳಲು ಪ್ರಯತ್ನ ಪಡುತ್ತಿರುವ ವೀಡಿಯೊ ಟ್ವಿಟರ್​​​ನಲ್ಲಿ ವೈರಲ್ ಆಗಿದೆ. ಪ್ರಾಣಿಗಳಿಗೆ ಸಂಬಂಧಿಸಿದ ಯಾವುದೇ ವೀಡಿಯೋಗಳು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುವ ಪ್ರಾಣಿಗಳ ಮುಗ್ಧ ವೀಡಿಯೋಗಳು, ನಮ್ಮಲ್ಲಿ ಏನೋ ಒಂದು ತರಹದ ಖುಷಿಯನ್ನು ನೀಡುತ್ತದೆ. ಜತೆಗೆ ನಮ್ಮ ಮುಖದಲ್ಲಿ ನಗುವನ್ನು ತರಿಸುತ್ತದೆ. ಇಲ್ಲೊಂದು ಪುಟ್ಟ ಜಿರಾಫೆಯೊಂದು ತಾನು ನಡೆದಾಡಲು ಕಲಿಯಲು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

ಟ್ವಿಟರ್ ನಲ್ಲಿ @buitengebieden (ಬ್ಯುಟೆಂಗೆಬೀಡೆನ್) ಎಂಬ ಪೇಜ್ ಒಂದರಲ್ಲಿ ಮರಿ ಜಿರಾಫೆಯ ಮೊದಲ ಹೆಜ್ಜೆಗಳು ಎಂಬ ಶೀರ್ಷಿಕೆಯಡಿಯಲ್ಲಿ ಈ ವೀಡಿಯೋವನ್ನು ಹರಿಬಿಡಲಾಗಿದೆ. ವೀಡಿಯೋದಲ್ಲಿ ಮೃಗಾಲಯದಲ್ಲಿ ನವಜಾತ ಜಿರಾಫೆಯು ನಡೆದಾಡಲು ಪ್ರಯತ್ನ ಪಡುವ ದೃಶ್ಯವನ್ನು ಕಾಣಬಹುದು, ಕೆಲವೇ ಸೆಕೆಂಡುಗಳ ಈ ವೀಡಿಯೋ ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಫಲ ಸಿಗುತ್ತದೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.

ಇದನ್ನೂ ಓದಿ:Viral Video: ಗಜಪಡೆಗಳಿಗೆ ದಾರಿ ಮಾಡಿಕೊಟ್ಟ ಹುಲಿರಾಯ, ಇಲ್ಲಿದೆ ನೋಡಿ ಅದ್ಭುತ ವೀಡಿಯೊ

ಈ ವೀಡಿಯೊ ಮರಿ ಜಿರಾಫೆಯು ಮೊದಲ ಬಾರಿಗೆ ಎದ್ದು ನಿಂತು ನಡೆಯಲು ಪ್ರಯತ್ನಿಸುತ್ತದೆ. ಆದರೆ ಎಷ್ಟೇ ಸಲ ಪ್ರಯತ್ನ ಪಟ್ಟರೂ ನಡೆಯಲು ಸಾಧ್ಯವಾಗದೆ ಕೆಳಗೆ ಬೀಳುತ್ತದೆ. ಆದರೂ ಅದು ತನ್ನ ಛಲವನ್ನು ಬಿಡದೆ ಎದ್ದು ನಿಂತು ನಡೆಯಲು ಅಭ್ಯಾಸ ಮಾಡುವುದನ್ನು ಮುಂದುವರೆಸುತ್ತದೆ. ಕೊನೆಗೆ ಜಿರಾಫೆ ಮರಿ ಎದ್ದು ನಿಂತು ತಾಯಿಯ ಬಳಿ ಮುದ್ದಿಸಿಕೊಳ್ಳುವ ದೃಶ್ಯವನ್ನು ಈ ವೀಡಿಯೊ ತೋರಿಸುತ್ತದೆ.

ಈ ವೀಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಮತ್ತು 27 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ ಗಳು ಬಂದಿದೆ. ಒಬ್ಬ ಬಳಕೆದಾದರು ‘ಮೊದಲ ಹೆಜ್ಜೆಯನ್ನಿಡುವುದು ತುಂಬಾ ಕಷ್ಟಕರ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾದರು ‘ಜಿರಾಫೆಗಳು ಅತ್ಯಂತ ಆಕರ್ಷಕ ಜೀವಿಗಳು’ ಎಂದು ಕಮೆಂಟ್ ಮಾಡಿದ್ದಾರೆ. ಹೆಚ್ಚಿನವರು ಜಿರಾಫೆ ಮರಿಯ ಪ್ರಯತ್ನಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:32 pm, Mon, 1 May 23