Viral Video: ಗಜಪಡೆಗಳಿಗೆ ದಾರಿ ಮಾಡಿಕೊಟ್ಟ ಹುಲಿರಾಯ, ಇಲ್ಲಿದೆ ನೋಡಿ ಅದ್ಭುತ ವೀಡಿಯೊ
ಆನೆಗಳ ಹಿಂಡು ಬರುವುದನ್ನು ಕಂಡು ಅವುಗಳಿಗೆ ಹುಲಿಯೊಂದು ದಾರಿ ಮಾಡಿ ಕೊಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹುಲಿಗಳು ಪರಭಕ್ಷಕ ಜೀವಿಗಳು. ಅವುಗಳು ಸಾಮಾನ್ಯವಾಗಿ ಜಿಂಕೆ, ಹಂದಿ, ಹಾಗೂ ಇನ್ನಿತರ ಕಾಡಿನ ಪ್ರಾಣಿಗಳು ಓಡಾಡುವುದನ್ನು ಕಂಡಾಗ ಹೊಂಚು ಹಾಕಿ ಬೇಟೆಯಾಡುತ್ತದೆ. ಆದರೆ ಅವುಗಳು ಯಾವುದೇ ಕಾರಣಕ್ಕೂ ಆನೆಯೊಂದಿಗೆ ಸೆನೆಸಾಡಲು ಹೋಗುವುದಿಲ್ಲ. ಕಾಡಿನ ಇತರ ಪ್ರಾಣಿಗಳು ಹುಲಿ ತಮ್ಮನ್ನು ಭೇಟೆಯಾಡುತ್ತವೆ ಎಂದು ಭಯದಿಂದ ಓಡಾಡಿದರೆ, ಆನೆ ಮಾತ್ರ ಹುಲಿಗಳ ಎದುರು ರಾಜಾರೋಷವಾಗಿ ಓಡಾಡುತ್ತಿರುತ್ತವೆ. ಆನೆ ನಡೆದದ್ದೇ ದಾರಿ ಎನ್ನುವುದಕ್ಕೆ ಈ ವೈರಲ್ ವೀಡಿಯೋ ಸೂಕ್ತ ಉದಾಹರಣೆಯಾಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡಿರುವ ಈ ವೈರಲ್ ವೀಡಿಯೊ ಹುಲಿಯೊಂದು ಅಡಗಿ ಕುಳಿತು ಆನೆಗಳ ಹಿಂಡಿಗೆ ದಾರಿ ಮಾಡಿ ಕೊಡುವುದನ್ನು ತೋರಿಸುತ್ತದೆ. ಈ ವೀಡಿಯೋವನ್ನು ಮೂಲತಃ ವನ್ಯಜೀವಿ ಛಾಯಾಗ್ರಾಹಕ ವಿಜೇತ ಸಿಂಹ ಅವರು ಸೆರೆ ಹಿಡಿದು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ವೀಡಿಯೊವನ್ನು ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಕೆಲವೇ ಸಮಯದಲ್ಲಿ ವೈರಲ್ ಆಗಿದೆ.
This is how animals communicate & maintain harmony… Elephant trumpets on smelling the tiger. The king gives way to the titan herd?? Courtesy: Vijetha Simha pic.twitter.com/PvOcKLbIud
— Susanta Nanda (@susantananda3) April 30, 2023
ಈ ವೀಡಿಯೋದಲ್ಲಿ ಹುಲಿಯೊಂದು ಗಾಂಭೀರ್ಯದಿಂದ ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿರುತ್ತದೆ. ಆ ಕಡೆಯಿಂದ ಆನೆಗಳ ಹಿಂಡು ಬರುವುದನ್ನು ಕಂಡು ಹುಲಿ ತಕ್ಷಣ ಅಲ್ಲೇ ಕುಳಿತು ಆನೆಗಳು ಹೋಗಲು ದಾರಿ ಮಾಡಿ ಕೊಡುತ್ತದೆ. ಅವುಗಳು ಹೋದ ಬಳಿಕ ಹುಲಿ ಎದ್ದು ನಿಂತುಕೊಂಡು ಸ್ವಲ್ಪ ಹೊತ್ತುಅಲ್ಲೇ ಓಡಾಡುತ್ತದೆ. ಅಷ್ಟರಲ್ಲೇ ಇನ್ನೊಂದು ಆನೆ ಓಡಿ ಬರುವುದನ್ನು ಕಂಡು ಹುಲಿಯು ವೇಗವಾಗಿ ಹೋಗಿ ಪೊದೆಯೊಳಗೆ ಅಡಗಿಕೊಳ್ಳುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ:Viral Video : ಮೇಕ್ಅಪ್ ಮಾಡುವಾಗ ಕೆನ್ನೆ ಬ್ಲಶ್ ಮಾಡಲು ಕಷ್ಟ ಪಡುತ್ತೀರಾ?
ಟ್ವಿಟರ್ನಲ್ಲಿ ವೈರಲ್ ಆಗಿರುವ ಈ ವೀಡಿಯೋ ಇಲ್ಲಿಯವರೆಗೆ 41.2 k ವೀಕ್ಷಣೆಗಳನ್ನು ಹಾಗೂ 2 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಹಾಗೂ ಅನೇಕ ಕಮೆಂಟ್ ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ‘ಹುಲಿಯು ಭೂಮಿಯ ಪ್ರಬಲ ಪ್ರಾಣಿಗೆ ಸರಿಯಾದ ಗೌರವವನ್ನು ನೀಡುತ್ತಿದ್ದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಎಂತಹ ಸುಂದರ ದೃಶ್ಯ. ಹುಲಿಯು ಆನೆಗಳ ಹಿಂಡಿಗೆ ದಾರಿ ಮಾಡಿಕೊಟ್ಟ ರೀತಿ ಇಷ್ಟವಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಕೊನೆಯಲ್ಲಿ ಆನೆಯನ್ನು ಕಂಡು ಹುಲಿ ಪೊದೆಯೊಳಗೆ ಜಿಗಿಯುವ ದೃಶ್ಯ ನನಗೆ ಇಷ್ಟವಾಯಿತು’ ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: