Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Transgender Bodybuilder death: ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್​ ಆತ್ಮಹತ್ಯೆ

ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್(Transgender Bodybuilder) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರನ್ನು ಪ್ರವೀಣ ನಾಥ್ ಎಂದು ಗುರುತಿಸಲಾಗಿದೆ.

Kerala Transgender Bodybuilder death: ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್​ ಆತ್ಮಹತ್ಯೆ
ಪ್ರವೀಣ್
Follow us
ನಯನಾ ರಾಜೀವ್
|

Updated on:May 05, 2023 | 9:21 AM

ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್(Transgender Bodybuilder) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರನ್ನು ಪ್ರವೀಣ ನಾಥ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಪ್ರವೀಣ್ ನಾಥ್ ಅವರು ನಗರದ ಉಪನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪ್ರವೀಣ್ ಈ ವರ್ಷ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು.

ಕೆಲ ಮಾಧ್ಯಮಗಳ ವರದಿ ಪ್ರಕಾರ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿರಲಿಲ್ಲ ಎನ್ನಲಾಗಿತ್ತು, ಆದರೆ ಈ ವರದಿಗಳನ್ನು ಪ್ರವೀಣ್ ನಿರಾಕರಿಸಿದ್ದರು.ಪ್ರವೀಣ್ ರಿಶಾನಾ ಆಯೇಶು ಅವರನ್ನು ಮದುವೆಯಾಗಿದ್ದರು, ಇವರು ಮಿಸ್ಟರ್ ಕೇರಳ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ರಿಶಾನಾ ಮಿಸ್ ಮಲಬಾರ್ ಪಟ್ಟ ಗೆದ್ದಿದ್ದಾರೆ. ಆರಂಭದಲ್ಲಿ ಇಬ್ಬರ ಮನೆಯವರು ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ನಂತರ ಅವರು ಈ ಮದುವೆಗೆ ಒಪ್ಪಿದ್ದರು.

ಮತ್ತಷ್ಟು ಓದಿ: Transman Pregnancy: ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿ​ ಗರ್ಭಧಾರಣೆ! ಇಲ್ಲಿದೆ ಫೋಟೋ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಹುಟ್ಟಿದ್ದು ಹೆಣ್ಣಾದರೂ ಗಂಡಾಗಿ ಇರಬೇಕೆಂಬ ಆಸೆ. ಒಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು, ಬಳಿಕ ತಮಗೆ ತಾವು ಸಮಾಧಾನ ಮಾಡಿಕೊಂಡು ದೇಹದ ರೂಪಾಂತರ ಮಾಡಿಕೊಂಡರು.

(ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೆಲವರಿಗೆ ಪ್ರಚೋದನೆ ನೀಡಬಹುದು. ಆದರೆ  ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ. ಭಾರತದಲ್ಲಿನ ಕೆಲವು ಪ್ರಮುಖ ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ) 011-23389090 ಸುಮೈತ್ರಿ (ದೆಹಲಿ) ಮತ್ತು 044-24640050 ಸ್ನೇಹ ಫೌಂಡೇಶನ್ (ಚೆನ್ನೈ).

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 am, Fri, 5 May 23