Bajrang Dal Activists : ಬಿಹಾರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್​, 12 ಮಂದಿಗೆ ಗಾಯ

|

Updated on: Feb 15, 2023 | 12:03 PM

ಬಿಹಾರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್​ ನಡೆಸಿದ್ದು, ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ.

Bajrang Dal Activists : ಬಿಹಾರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್​, 12 ಮಂದಿಗೆ ಗಾಯ
ಬಜರಂಗದಳದ ಕಾರ್ಯಕರ್ತರು
Image Credit source: IndiaToday
Follow us on

ಬಿಹಾರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್​ ನಡೆಸಿದ್ದು, ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ.
ನಳಂದದ ಬಿಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬರ್ ಚೌಕ್ ಬಳಿಯ ಹನುಮಾನ್ ದೇವಸ್ಥಾನದಲ್ಲಿ ಭಜರಂಗಬಲಿಯ ಆರತಿಯನ್ನು ನಡೆಸಲಾಯಿತು. ಈ ವೇಳೆ ಬಿಹಾರ ಪೊಲೀಸ್ ಠಾಣೆಯ ಪೊಲೀಸರು ಬಜರಂಗದಳದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್​ ಮಾಡಿದ್ದಾರೆ.

ಈ ವೇಳೆ ಸಿಟ್ಟಿಗೆದ್ದ ಬಜರಂಗದಳದ ಕಾರ್ಯಕರ್ತರು ಪೊಲೀಸರ ಜತೆ ವಾಗ್ವಾದಕ್ಕಿಳಿದರು, ಘರ್ಷಣೆ ತೀವ್ರಗೊಂಡು ಅಂಗಡಿಗಳನ್ನು ಮುಚ್ಚಲಾಯಿತು.
ಅದೇ ಸಮಯದಲ್ಲಿ ಅಂಬರ್ ಚೌಕ್ ಬಳಿ ಬಜರಂಗದಳದ ಕಾರ್ಯಕರ್ತರು ಬಂದು ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಡಿಎಂ ಅಭಿಷೇಕ್ ಪಲಾಸಿಯಾ ಹೇಳಿದ್ದಾರೆ.

ಪ್ರತಿ ಮಂಗಳವಾರ ಆಂಜನೇಯನಿಗೆ ಆರತಿ ಬೆಳಗಲಾಗುತ್ತದೆ. ಈ ವೇಳೆ ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಆರತಿ ವೇಳೆ ಗದ್ದಲ ಉಂಟಾದಾಗ ಪೊಲೀಸ್ ಅಧಿಕಾರಿಗಳು ಬಜರಂಗದಳ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರ ಲಾಠಿ ಪ್ರಹಾರಕ್ಕೆ ಪ್ರತಿಯಾಗಿ ಭಜರಂಗ ದಳದ ಕಾರ್ಯಕರ್ತರು ಆಕ್ರೋಶಗೊಂಡು, ದೊಡ್ಡ ಗದ್ದಲ ಸೃಷ್ಟಿಸಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು. ಈ ಘಟನೆಯು ಪ್ರದೇಶದಲ್ಲಿ ಭಯಭೀತರಾಗಿರುವುದರಿಂದ, ಭಜರಂಗದಳದ ಕಾರ್ಯಕರ್ತರಿಂದ ಗೊಂದಲವುಂಟಾದ ಕಾರಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ