ಸಾಗರ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್ ಅರೆಸ್ಟ್; ಘಟನೆ ಹಿಂದಿದೆ ತಂಗಿ ವಿಚಾರ

ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್​​ನನ್ನು ಸಾಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಗರ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್ ಅರೆಸ್ಟ್; ಘಟನೆ ಹಿಂದಿದೆ ತಂಗಿ ವಿಚಾರ
ಹಲ್ಲೆಗೆ ಯತ್ನ ನಡೆದ ಸ್ಥಳ
Follow us
TV9 Web
| Updated By: ಆಯೇಷಾ ಬಾನು

Updated on:Jan 10, 2023 | 12:03 PM

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್​​ನನ್ನು ಸಾಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಮೀರ್ ಬಂಧನಕ್ಕಾಗಿ 3 ವಿಶೇಷ ಪೊಲೀಸ್​ ತಂಡ ರಚಿಸಿದ್ದ ಎಸ್​​ಪಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಶಿವಮೊಗ್ಗದಲ್ಲಿ ಸಮೀರ್​​​ನನ್ನು ವಶಕ್ಕೆ ಪಡೆದಿದ್ದಾರೆ. ಈ ಕೇಸ್​ನಲ್ಲಿ ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸುನೀಲ್​ ಮೇಲೆ ಮಚ್ಚು ಬೀಸಿದ್ದ A1 ಸಮೀರ್ ಹಾಗೂ ಮತ್ತಿಬ್ಬರು ಆರೋಪಿಗಳಾದ ಮನ್ಸೂರ್ & ಐಮಾನ್ ಬಂಧಿಸಲಾಗಿದೆ. ಪ್ರಕರಣದಲ್ಲಿ ಇಬ್ಬರ ಪಾತ್ರದ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಸುನೀಲ್​ ವಿರುದ್ಧ ಸಮೀರ್​ ತಂಗಿಯನ್ನು ಚುಡಾಯಿಸಿದ ಆರೋಪ

ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ಪ್ರಕರಣಕ್ಕೆ ವೈಯಕ್ತಿಕ ವಿಚಾರದ ಲಿಂಕ್ ಇದೆ ಎಂದು ಎಸ್​​ಪಿ ಜಿ.ಕೆ.ಮಿಥುನ್​​ ತಿಳಿಸಿದ್ದಾರೆ. ಬಜರಂಗದಳ ಕಾರ್ಯಕರ್ತ ಸುನಿಲ್, ಸಮೀರ್ ತಂಗಿಯನ್ನು ಚುಡಾಯಿಸಿದ್ದ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. 4-5 ತಿಂಗಳಿಂದ ಸಮೀರ್ ತಂಗಿಯನ್ನ ಸುನೀಲ್ ಚುಡಾಯಿಸಿದ ಆರೋಪ ಕೇಳಿ ಬಂದಿತ್ತು. ಅಲ್ಲದೆ ಸುನೀಲ್​​ ಸಮೀರ್​ ತಂಗಿಯ ಫೋನ್ ನಂಬರ್​ ಕೇಳಿದನಂತೆ. ಈ ಸಂಬಂಧ ಸುನೀಲ್​ಗೆ ಹಲವು ಬಾರಿ ಸಮೀರ್ ಎಚ್ಚರಿಕೆ ನೀಡಿದ್ದನಂತೆ. ಇದೇ ವಿಚಾರಕ್ಕೆ ಸುನೀಲ್,​​ ಸಮೀರ್ ನಡುವೆ ಗಲಾಟೆ ಆಗಿದೆ.

ನಿನ್ನೆ ಮೇಕೆಗಳಿಗೆ ಸಮೀರ್ ಹುಲ್ಲು ತರಲು ಹೋಗಿದ್ದ​​​. ಈ ವೇಳೆ ಸುನೀಲ್ ಹಾಗೂ ಸಮೀರ್ ನಡುವೆ ಗಲಾಟೆ ಆಗಿದೆ. ಹುಲ್ಲು ಕೊಯ್ಯಲು ತಂದಿದ್ದ ಮಚ್ಚನ್ನು ಸುನೀಲ್ ಮೇಲೆ ಬೀಸಿದ್ದಾನೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಜ.08ರಂದು ಅದ್ಧೂರಿಯಾಗಿ ಶೌರ್ಯ ಸಂಚಲನ ಯಾತ್ರೆ ನಡೆದಿತ್ತು. ಬಜರಂಗದಳ ಮತ್ತು ವಿಹೆಚ್‌ಪಿ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ವು. ಇದೇ ಪ್ರೋಗ್ರಾಂಗೆ ಸಾಗರ ನಗರದ ಭಜರಂಗದಳ ಸಹ ಸಂಚಾಲಕ ಸುನೀಲ್‌ ಕೂಡಾ ಬಂದಿದ್ದ. ಹೀಗೆ ಯಾತ್ರೆಗೆ ಬರೋವಾಗ್ಲೇ ಸುನೀಲ್‌ ಹಾಗೂ ಸಾಗರದ ಸಮೀರ್‌ ನಡುವೆ ಮಾತಿನ ಚಕಮಕಿ ಆಗಿತ್ತು. ಸುಮೀರ್‌ ಮಾತಿಗೆ ಡೋಂಟ್‌ ಕೇರ್‌ ಎಂದ ಸುನೀಲ್‌ ಶಿವಮೊಗ್ಗಕ್ಕೆ ಬಂದು ಯಾತ್ರೆಯಲ್ಲಿ ಭಾಗಿಯಾಗಿದ್ದ. ರಾತ್ರಿಯೇ ಸಾಗರಕ್ಕೆ ಮರಳಿದ್ದ. ಆದ್ರೆ ಸಮೀರ್​ಗೆ ಸುನೀಲ್‌ ಮೇಲೆ ಕೋಪವಿತ್ತು. ಹೀಗಾಗಿ ಜ.09ರಂದು ಬೆಳಗಾಗ್ತಿದ್ದಂತೆ ಸುನೀಲ್‌ ಬೈಕ್‌ನಲ್ಲಿ ಹೊರಟಿದ್ದ. ಇದನ್ನ ನೋಡಿದ ಸಮೀರ್‌, ತನ್ನ ಬೈಕ್‌ನಲ್ಲಿದ್ದ ಮಚ್ಚು ತೆಗೆದವನೇ ಸುನೀಲ್‌ ಮೇಲೆ ಅಟ್ಯಾಕ್ ಮಾಡಿದ್ದ.

ಇದನ್ನೂ ಓದಿ: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ; ಮಂಗಳವಾರ ಅಘೋಷಿತ ಬಂದ್​ಗೆ ಕರೆ

ಸಮೀರ್‌ ಕೈಯಲ್ಲಿ ಮಚ್ಚು ಹಿಡಿದಿರೋದನ್ನ ನೋಡಿದ್ದ ಸುನೀಲ್‌ ಎಚ್ಚೆತ್ತುಕೊಂಡಿದ್ದ. ಬೈಕ್‌ನಿಂದ ಕೆಳಗಿಳಿಯದೇ ವೇಗವಾಗಿ ಹೊರಟಿದ್ದ. ಹೀಗಾಗಿ ಸ್ವಲ್ಪದ್ರಲ್ಲೇ ಸಾವಿನಿಂದ ಪಾರಾಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳು ಸಿಟ್ಟಿಗೆದ್ದಿವೆ. ಅದ್ರಲ್ಲೂ ಬಜರಂಗದಳ ಸಂಚಾಲಕನ ಮೇಲೆ ಸಮೀರ್‌ ಮಚ್ಚು ಬೀಸೋ ದೃಶ್ಯ ಮೊಬೈಲ್‌ನಲ್ಲಿ ಹರಿದಾಡ್ತಿದ್ದಂತೆ ಎಲ್ರೂ ಆಕ್ರೋಶಗೊಂಡಿದ್ದಾರೆ. ಸಾಗರ ನಗರ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಮೀರ್‌ ಬಂಧನಕ್ಕೆ ಆಗ್ರಹಿಸಿದ್ದರು. ಹಾಘೂ ಸಾಗರ ಬಂದ್‌ಗೂ ಕರೆ ನೀಡಿದ್ದರು. ಸದ್ಯ ಈಗ ಸಮೀರ್ ಅರೆಸ್ಟ್ ಆಗಿದ್ದಾನೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:47 am, Tue, 10 January 23

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್