Lakhimpur Kheri violence ಎರಡನೇ ಎಫ್ಐಆರ್ ಪ್ರಕಾರ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದು ಪ್ರತಿಭಟನಾಕಾರರು, ರೈತರ ಸಾವಿನ ಬಗ್ಗೆ ಉಲ್ಲೇಖವೇ ಇಲ್ಲ

| Updated By: ರಶ್ಮಿ ಕಲ್ಲಕಟ್ಟ

Updated on: Oct 10, 2021 | 7:46 PM

FIR ಎರಡನೇ ಎಫ್‌ಐಆರ್​​ನಲ್ಲಿ ಕೃಷಿ ಕಾನೂನಿನ ವಿರುದ್ಧ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು ಎಸ್​​ಯುವಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದೆ. ಅದೇ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಇರುವ ಕಾರು ರೈತರ ಮೇಲೆ ಹರಿದಿರುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

Lakhimpur Kheri violence ಎರಡನೇ ಎಫ್ಐಆರ್ ಪ್ರಕಾರ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದು ಪ್ರತಿಭಟನಾಕಾರರು, ರೈತರ ಸಾವಿನ ಬಗ್ಗೆ ಉಲ್ಲೇಖವೇ ಇಲ್ಲ
ಆರೋಪಿ ಆಶಿಶ್ ಮಿಶ್ರಾ
Follow us on

ಲಖನೌ: ಲಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆ ದಾಖಲಾದ ಎರಡನೇ ಎಫ್‌ಐಆರ್ ನಲ್ಲಿ ಕೃಷಿ ಕಾನೂನಿನ ವಿರುದ್ಧ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರು ಎಸ್​​ಯುವಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದೆ. ಅದೇ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಇರುವ ಕಾರು ರೈತರ ಮೇಲೆ ಹರಿದಿರುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದು ದಿ  ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. ಬಿಜೆಪಿ ಕಾರ್ಯಕರ್ತರ ಹತ್ಯೆ ಆರೋಪದಲ್ಲಿಅಕ್ಟೋಬರ್ 4 ರಂದು ಟಿಕೊನಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದೇ ವೇಳೆ ಮತ್ತೊಬ್ಬರು ಆಶಿಶ್ ಮಿಶ್ರಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಆಶಿಶ್ ಮಿಶ್ರಾ ರೈತರ ಮೇಲೆ ಹರಿದ ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿತ್ತು.

ಎರಡನೆಯ ಎಫ್‌ಐಆರ್‌ನಲ್ಲಿ ಕೇವಲ ಒಬ್ಬ “ಹೆಸರು ಇಲ್ಲದ ಗಲಭಕೋರ” ಬಗ್ಗೆ ಉಲ್ಲೇಖಿಸಲಾಗಿದೆ. ಆತನ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ನೋವುಂಟು ಮಾಡಿರುವ) ಆರೋಪಗಳನ್ನು ಹೊರಿಸಲಾಗಿದೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿದ್ದ ಕುಸ್ತಿ ಕಾರ್ಯಕ್ರಮಕ್ಕೆ ಸ್ವಾಗತಿಸಲು ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಒಬ್ಬರೆಂದು ಹೇಳಲಾದ ಸುಮಿತ್ ಜೈಸ್ವಾಲ್ ಅವರ ದೂರಿನ ಆಧಾರದ ಮೇಲೆ ಇದನ್ನು ಸಲ್ಲಿಸಲಾಗಿದೆ. ಕುಸ್ತಿ ಪಂದ್ಯವನ್ನು ಬನ್ವಿರ್‌ಪುರದಲ್ಲಿ ಆಯೋಜಿಸಲಾಗಿದ್ದು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ‘ಟೆನಿ’ ಅವರ ಮಗ ಆಶಿಶ್, ಅಲಿಯಾಸ್ ಮೋನು ಅವರನ್ನು ನಾಲ್ಕು ರೈತರ ಸಾವಿಗೆ ಸಂಬಂಧಿಸಿದಂತೆ ಶನಿವಾರ ಬಂಧಿಸಲಾಗಿದೆ.
ಅಕ್ಟೋಬರ್ 3 ರಂದು ಜಿಲ್ಲೆಯ ಟಿಕೋನಿಯಾ ಪ್ರದೇಶದಲ್ಲಿ ನಡೆದ  ಹಿಂಸಾಚಾರದಲ್ಲಿ ಎಂಟು ಜನರು ಸಾವಿಗೀಡಾಗಿದ್ದರು.

ಮೃತರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು, ಎಸ್​​ಯುವಿ ಚಾಲಕ ಮತ್ತು ಪತ್ರಕರ್ತರು ಸೇರಿದ್ದಾರೆ. ಜೈಸ್ವಾಲ್ ಪ್ರಕಾರ, ಪತ್ರಕರ್ತ ರಾಮನ್ ಕಶ್ಯಪ್, ಕಾರು ಚಾಲಕ ಹರಿ ಓಂ ಮತ್ತು ಬಿಜೆಪಿ ಕಾರ್ಯಕರ್ತರಾದ ಶುಭಂ ಮಿಶ್ರಾ ಮತ್ತು ಶ್ಯಾಮ್ ಸುಂದರ್ ಅವರನ್ನು ಪ್ರತಿಭಟನಾಕಾರರು ಹತ್ಯೆ ಮಾಡಿದ್ದಾರೆ. ಆದರೆ, ಪತ್ರಕರ್ತನ ಪೋಷಕರು ಆತನನ್ನು ವಾಹನದ ಹರಿಸಿ ಹತ್ಯೆಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅರ್ಜಿದಾರರು ಬಿಜೆಪಿ ಕಾರ್ಯಕರ್ತರೊಂದಿಗೆ ಕಾಲೇ ಶರಣ್ ಚೌಕ್‌ಗೆ ಹೋಗುತ್ತಿದ್ದರು ಮತ್ತು ಮಹೀಂದ್ರ ಥಾರ್‌ನಲ್ಲಿದ್ದರು (UP 31 AS 1000). ವಾಹನ ಚಾಲನೆ ಮಾಡುತ್ತಿದ್ದ ಚಾಲಕ ಹರಿ ಓಂ ಮತ್ತು ನನ್ನ ಸ್ನೇಹಿತ ಶುಭಂ ಮಿಶ್ರಾ ಮುಖ್ಯ ಅತಿಥಿಯನ್ನು ಸ್ವಾಗತಿಸಲು ಹೊರಟಿದ್ದರು ಎಂದು ಎಫ್‌ಐಆರ್ ಪ್ರತಿ ನೋಡಿರುವ ಪಿಟಿಐ ವರದಿ ಮಾಡಿದೆ. “ರೈತರ ಪ್ರತಿಭಟನೆಯಲ್ಲಿದ್ದ ದುಷ್ಕರ್ಮಿಗಳ ವಾಹನದ ಮೇಲೆ ಬಿದಿರಿನ ಕೋಲು, ಇಟ್ಟಿಗೆಗಳು ಮತ್ತು ಕಲ್ಲುಗಳಿಂದ ದಾಳಿ ಮಾಡಿದ್ದರಿಂದ ಚಾಲಕ ಹರಿ ಓಂ ಗಾಯಗೊಂಡು ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿದರು” ಎಂದು ಜೈಸ್ವಾಲ್ ಆರೋಪಿಸಿದ್ದಾರೆ.

“ಇದರ ನಂತರ, ಪ್ರತಿಭಟನಾಕಾರರು ಹರಿ ಓಂ ಅವರನ್ನು ಕಾರಿನಿಂದ ಕೆಳಗಿಳಿಸಿದರು ಮತ್ತು ಬಿದಿರಿನ ಕೋಲು, ಖಡ್ಗದಿಂದ ಥಳಿಸಲು ಪ್ರಾರಂಭಿಸಿದರು. ನಮ್ಮ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದೆವು. ಈ ಸಮಯದಲ್ಲಿ ಅವರು ನನ್ನ ಸ್ನೇಹಿತ ಶುಭಂ ಮಿಶ್ರಾ ಅವರನ್ನು ಹಿಡಿದು ಥಳಿಸಲು ಆರಂಭಿಸಿದರು ಎಂದು ಜೈಸ್ವಾಲ್ ಆರೋಪಿಸಿದ್ದಾರೆ.

ನಾನು ಆ ಸ್ಥಳದಿಂದ ಓಡಿಹೋಗುವಲ್ಲಿ ಯಶಸ್ವಿಯಾದೆ ಇಲ್ಲದಿದ್ದರೆ ನನ್ನನ್ನೂ ಕೊಲ್ಲುತ್ತಿದ್ದರು ಎಂದು ಜೈಸ್ವಾಲ್ ಹೇಳಿದ್ದಾರೆ.

ಎಫ್‌ಐಆರ್ ಪ್ರಕಾರ ಹರಿ ಓಂ ಮತ್ತು ಶುಭಂ ಮಿಶ್ರಾ ಹತ್ಯೆಗೀಡಾದರು ಮತ್ತು ಇತರ ಇಬ್ಬರು ಗುರುತಿಸಲಾಗದ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.  ಉತ್ತರಪ್ರದೇಶ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಸಲ್ಲಿಕೆಯ ಪ್ರಕಾರ, ಎರಡು ಎಫ್‌ಐಆರ್‌ಗಳ ಮೇಲೆ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಇಲ್ಲಿಯವರೆಗೆ, ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಮೊದಲ ಎಫ್‌ಐಆರ್‌ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Lakhimpur Kheri ಲಖಿಂಪುರ್ ಘಟನೆಯನ್ನು ಹಿಂದೂ- ಸಿಖ್ ನಡುವಿನ ಕದನ ಮಾಡಲು ಪ್ರಯತ್ನ ನಡೆಯುತ್ತಿದೆ: ವರುಣ್ ಗಾಂಧಿ