ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್​ಗೆ ಕೊವಿಡ್; ಸೀತಾಪುರ್ ಜೈಲಿನಿಂದ ಲಕ್ನೊ ಆಸ್ಪತ್ರೆಗೆ ದಾಖಲು

|

Updated on: May 10, 2021 | 11:22 AM

Samajwadi Party leader Mohammad Azam Khan: ಮೇ 2 ರಂದು ಜೈಲಿನ ಆಡಳಿತವು ಲಕ್ನೊದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಿಕಿತ್ಸೆಗಾಗಿ ಆಜಂ ಖಾನ್ ಅವರನ್ನು ಮನವೊಲಿಸಲು ಪ್ರಯತ್ನಿಸಿತು. ಆದರೆ ಅವರು ಜೈಲಿನಿಂದ ಹೊರಹೋಗಲು ನಿರಾಕರಿಸಿದರು. ಭಾನುವಾರ ಸಂಜೆ ತನ್ನ ಮಗನೊಂದಿಗೆ ಲಕ್ನೊದ ಮೆದಂತಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್​ಗೆ ಕೊವಿಡ್; ಸೀತಾಪುರ್ ಜೈಲಿನಿಂದ ಲಕ್ನೊ ಆಸ್ಪತ್ರೆಗೆ ದಾಖಲು
ಮೊಹಮ್ಮದ್ ಆಜಂ ಖಾನ್
Follow us on

ಲಕ್ನೊ: ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಆಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲ ಖಾನ್ ಅವರಿಗೆ ಕೊವಿಡ್ ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೀತಾಪುರ್ ಜೈಲಿನಿಂದ ಲಕ್ನೊದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಜಂ ಖಾನ್ ಅವರಿಗೆ ಕೊವಿಡ್ ದೃಢಪಟ್ಟಿದ್ದು, ಸಾಧಾರಣವಾದ ರೋಗ ಲಕ್ಷಣಗಳಿವೆ ಎಂದು ಲಕ್ನೊದ ಮೆದಾಂತ ಆಸ್ಪತ್ರೆಯ ನಿರ್ದೇಶಕ ಡಾ.ರಾಕೇಶ್ ಕಪೂರ್ ಹೇಳಿದ್ದಾರೆ.

ಮೇ 2 ರಂದು ಜೈಲಿನ ಆಡಳಿತವು ಲಕ್ನೊದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಿಕಿತ್ಸೆಗಾಗಿ ಆಜಂ ಖಾನ್ ಅವರನ್ನು ಮನವೊಲಿಸಲು ಪ್ರಯತ್ನಿಸಿತು. ಆದರೆ ಅವರು ಜೈಲಿನಿಂದ ಹೊರಹೋಗಲು ನಿರಾಕರಿಸಿದರು. ಭಾನುವಾರ ಸಂಜೆ ತನ್ನ ಮಗನೊಂದಿಗೆ ಲಕ್ನೊದ ಮೆದಾಂತ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಜಂ ಖಾನ್ ಜ್ವರದಿಂದ ಬಳಲುತ್ತಿದ್ದಾರೆ ಮತ್ತು ಅದನ್ನು ನಾಲ್ಕು ಲೀಟರ್ ಆಮ್ಲಜನಕದ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಅದರ ಪ್ರಕಾರ ಅವರ ಚಿಕಿತ್ಸೆಯನ್ನು ಮಾಡಲಾಗುವುದು. ಅವರ ಮಗನ ಆರೋಗ್ಯ ಸ್ಥಿರವಾಗಿದೆ ಎಂದು ಕಪೂರ್ ಹೇಳಿದರು.

ಸೀತಾಪುರ ಸಿಎಂಒ ಮಧು ಗರೋಲಾ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ಭಾನುವಾರ ಆಜಂ ಅವರನ್ನು ಪರೀಕ್ಷಿಸಿತ್ತು. ಉತ್ತಮ ಚಿಕಿತ್ಸೆಗಾಗಿ ಅವರನ್ನು ಲಕ್ನೊಗೆ ಕರೆದೊಯ್ಯುವ ಅಗತ್ಯವನ್ನು ಜಿಲ್ಲಾಡಳಿತದ ಅಧಿಕಾರಿಗಳು ಆಜಂ ಖಾನ್ ಅವರಿಗೆ ಸುದೀರ್ಘವಾಗಿ ವಿವರಿಸಿದರು ಎಂದು ಉಪ ಜೈಲರ್ ಓಂಕರ್ ಪಾಂಡೆ ಹೇಳಿದ್ದಾರೆ.

ಏಪ್ರಿಲ್ 30 ರಂದು ಆಜಂ ಖಾನ್ ಮತ್ತು ಅಬ್ದುಲ್ಲಾ ಅವರಿಗೆ ಕೊವಿಡ್ ಇರುವುದು ದೃಢಪಟ್ಟಿಚ್ಚು ಏಪ್ರಿಲ್ 29 ರಂದು ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ನಂತರ ಇತರ 13 ಕೈದಿಗಳು ಸಹ ಕೊವಿಡ್ ಪರೀಕ್ಷೆಗೊಳಗಾಗಿ ರೋಗ ದೃಢಪಟ್ಟಿದೆ.

ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಜಂ ಖಾನ್, ಅವರ ಪುತ್ರ ಮತ್ತು ಪತ್ನಿ ತಜೀನ್ ಫಾತ್ಮಾ ಅವರೊಂದಿಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಜೈಲು ಸೇರಿದ್ದರು. ಅಲಹಾಬಾದ್ ಹೈಕೋರ್ಟ್ ತಜೀನ್ ಫಾತ್ಮಾ ವಿರುದ್ಧ ದಾಖಲಾಗಿರುವ ಎಲ್ಲಾ 34 ಪ್ರಕರಣಗಳಲ್ಲಿ ಅವರಿಗೆ ಜಾಮೀನು ನೀಡಿತ್ತು.

ಇದನ್ನೂ  ಓದಿ: Coronavirus: ಗಾಳಿಯ ಮೂಲಕ ಕೊವಿಡ್-19 ಹರಡುವುದು ಹೇಗೆ? ತಜ್ಞರು ಏನಂತಾರೆ?

(Senior Samajwadi Party leader Mohammad Azam Khan tests Covid 19 positive shifted to Lucknow hospital from Sitapur jail)