ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ವಿರುದ್ಧ ಹಿರಿಯ ನಾಯಕರ ಬಂಡಾಯ

|

Updated on: Jun 25, 2024 | 8:05 PM

ಮಂಗಳವಾರ ಜಲಂಧರ್‌ನಲ್ಲಿ ಅಕಾಲಿದಳ ಬಚಾವೋ ಲೆಹರ್ ಅನ್ನು ಪ್ರಾರಂಭಿಸುವ ಮೂಲಕ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ವಿರುದ್ಧ ಪಕ್ಷದ ಹಿರಿಯ ನಾಯಕರು ಬಂಡಾಯವೆದ್ದಿದ್ದು, ಬಲವಾದ ರಾಜಕೀಯ ಮತ್ತು ಧಾರ್ಮಿಕ ತಿಳುವಳಿಕೆಯನ್ನು ಹೊಂದಿರುವ ವ್ಯಕ್ತಿಗೆ ಪಕ್ಷದ ಚುಕ್ಕಾಣಿ ನೀಡಬೇಕು ಎಂದು ಹೇಳಿದ್ದಾರೆ.

ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ವಿರುದ್ಧ ಹಿರಿಯ ನಾಯಕರ ಬಂಡಾಯ
ಸುಖಬೀರ್ ಸಿಂಗ್ ಬಾದಲ್
Follow us on

ಜಲಂಧರ್‌ ಜೂನ್ 25: ಶಿರೋಮಣಿ ಅಕಾಲಿದಳದ (SAD) ಹಿರಿಯ ನಾಯಕರಾದ ಪ್ರೇಮ್ ಸಿಂಗ್ ಚಂದುಮಜ್ರಾ (Prem Singh Chandumajra), ಸಿಕಂದರ್ ಸಿಂಗ್ ಮಾಲುಕಾ, ಬೀಬಿ ಜಾಗೀರ್ ಕೌರ್, ಪರ್ಮಿಂದರ್ ಸಿಂಗ್ ಧಿಂಡ್ಸಾ ಮತ್ತು ಸರ್ವಾನ್ ಸಿಂಗ್ ಫಿಲೌರ್ ಅವರು ಮಂಗಳವಾರ ಜಲಂಧರ್‌ನಲ್ಲಿ ಅಕಾಲಿದಳ ಬಚಾವೋ ಲೆಹರ್ ಅನ್ನು ಪ್ರಾರಂಭಿಸುವ ಮೂಲಕ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ (Sukhbir Singh Badal) ವಿರುದ್ಧ ಬಂಡಾಯವೆದ್ದಿದ್ದಾರೆ. ಪಕ್ಷದ ಭವಿಷ್ಯದ ಬಗ್ಗೆ ಚರ್ಚಿಸಲು ಐದು ಗಂಟೆಗಳ ಸಭೆಯ ನಂತರ, ನಾಯಕರು ಸುಖ್ಬೀರ್ ಎಸ್‌ಎಡಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯಿಸಿದರು. ಬಲವಾದ ರಾಜಕೀಯ ಮತ್ತು ಧಾರ್ಮಿಕ ತಿಳುವಳಿಕೆಯನ್ನು ಹೊಂದಿರುವ ವ್ಯಕ್ತಿಗೆ ಪಕ್ಷದ ಚುಕ್ಕಾಣಿ ನೀಡಬೇಕು ಎಂದು ಚಂದುಮಜ್ರಾ ಹೇಳಿದರು.

ಚಂಡೀಗಢದಲ್ಲಿ ಸುಖ್ಬೀರ್ ಅವರು ಕರೆದಿದ್ದ ಹಲ್ಕಾ ಉಸ್ತುವಾರಿಗಳ ಸಭೆಗೆ ನಾಯಕರು ಗೈರಾಗಿದ್ದರು .  ಜಲಂಧರ್‌ನಲ್ಲಿ ಪಕ್ಷದ ನಾಯಕರ ಸಭೆಯು ಶಿರೋಮಣಿ ಅಕಾಲಿದಳದ ಪಂಥಿಕ್ ಬಲವನ್ನು ದುರ್ಬಲಗೊಳಿಸುವ ಮತ್ತೊಂದು ಪ್ರಯತ್ನ ಎಂದು ಸುಖಬೀರ್ ಬಣ್ಣಿಸಿದ್ದಾರೆ. ಜಲಂಧರ್ ಪಶ್ಚಿಮ ವಿಧಾನಸಭಾ ಉಪಚುನಾವಣೆ ಜುಲೈ 10 ರಂದು ನಿಗದಿಯಾಗಿದೆ. ಗಿಡ್ಡರ್‌ಬಾಹಾ, ಚಬ್ಬೇವಾಲ್, ಬರ್ನಾಲಾ ಮತ್ತು ಡೇರಾ ಬಾಬಾ ನಾನಕ್‌ನ ನಾಲ್ಕು ಸ್ಥಾನಗಳಲ್ಲಿ ಮುಂಬರುವ ತಿಂಗಳುಗಳಲ್ಲಿ ಚುನಾವಣೆ ನಡೆಯಲಿವೆ.

ಜೂನ್ 1 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ, ಪಂಜಾಬ್‌ನಲ್ಲಿ ಸ್ಪರ್ಧಿಸಿದ 13 ಸ್ಥಾನಗಳಲ್ಲಿ, ಎಸ್‌ಎಡಿ ಕೇವಲ ಭಟಿಂಡಾ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಭಟಿಂಡಾದಲ್ಲಿ ಸುಖ್ಬೀರ್ ಬಾದಲ್ ಅವರ ಪತ್ನಿ ಹರ್ಸಿಮ್ರತ್ ಸ್ಪರ್ಧಿಸಿ ಗೆದ್ದಿದ್ದರು.

ಅದರ ಅಭ್ಯರ್ಥಿಗಳು 10 ಸ್ಥಾನಗಳಲ್ಲಿ ಭದ್ರತಾ ಠೇವಣಿಗಳನ್ನು ಕಳೆದುಕೊಂಡರು, ಏಕೆಂದರೆ ಪಕ್ಷವು 2019 ರಲ್ಲಿ 27.45% ರ ವಿರುದ್ಧ ಕೇವಲ 13.42% ಮತಗಳನ್ನು ಪಡೆದಿದೆ.ಎಸ್‌ಎಡಿ ಮಾಜಿ ಮಿತ್ರ ಪಕ್ಷವಾದ ಬಿಜೆಪಿಯು 18.52% ಮತ ಪಾಲನ್ನು ಪಡೆದುಕೊಂಡಿತು, ಇದು 2019 ರಲ್ಲಿ ನಡೆದ ಚುನಾವಣೆಯ ಮತದಾನಕ್ಕಿಂತ 9.63% ರಿಂದ ಹೆಚ್ಚಾಗಿದೆ. ಲೋಕಸಭೆಯ ಫಲಿತಾಂಶಗಳ ನಂತರ ಎಸ್‌ಎಡಿ ಅಮೃತಪಾಲ್ ವಿಷಯದ ಬಗ್ಗೆ ಮಾತ್ರವಲ್ಲದೆ, ಪಕ್ಷದೊಳಗಿನ ಸುಧಾರಣೆಗಳ ಬೇಡಿಕೆಯ ಮೇಲೂ ಟೀಕೆಗಳನ್ನು ಎದುರಿಸುತ್ತಿದೆ.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೊಸ ಕಾನೂನು ತರಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ

2017 ಮತ್ತು 2022 ರ ವಿಧಾನಸಭಾ ಚುನಾವಣೆಗಳು ಮತ್ತು ಇತ್ತೀಚಿನ ಸಂಸತ್ತಿನ ಚುನಾವಣೆಗಳಲ್ಲಿ ಎಸ್‌ಎಡಿ ಪುನರಾವರ್ತಿತ ಕಳಪೆ ಪ್ರದರ್ಶನದ ಬಗ್ಗೆ ದಿಂಡಾ, ಬೀಬಿ ಜಾಗೀರ್ ಕೌರ್ ಮತ್ತು ಮನ್‌ಪ್ರೀತ್ ಸಿಂಗ್ ಅಯಾಲಿ ಸೇರಿದಂತೆ ಪಕ್ಷದ ನಾಯಕರು ಮಾತನಾಡಿದ್ದರು. “ಇದು (ಪಕ್ಷದ ಚುನಾವಣಾ ಸಾಧನೆ) ಇದಕ್ಕಿಂತ ಕೆಟ್ಟದ್ದಾಗಿರಲಾರದು. ಪಕ್ಷದ ಅಸ್ತಿತ್ವವನ್ನು ಉಳಿಸಲು ಏನು ಮಾಡಬೇಕು ಎಂದು ನಾವು ಕುಳಿತು ಗಂಭೀರವಾದ ಚಿಂತನೆ ಮಾಡಬೇಕಾಗಿದೆ, ”ಎಂದು ದಿಂಡಾ ಈ ತಿಂಗಳ ಆರಂಭದಲ್ಲಿ ಹೇಳಿದ್ದಾರೆ. ಆದರೆ ಅಯಾಲಿ ಪಕ್ಷವನ್ನು ಮತ್ತೆ ಹಾದಿಗೆ ತರಲು ಜುಂದನ್ ಸಮಿತಿಯ ಅನುಷ್ಠಾನಕ್ಕೆ ಒತ್ತಾಯಿಸಿದರು. ಬೀಬಿ ಜಾಗೀರ್ ಕೌರ್ ಅವರು “ಪಂಜಾಬ್‌ನ ಜನರು ಹುತಾತ್ಮರ ಪಕ್ಷದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿರುವುದು ದುರದೃಷ್ಟಕರ ಮತ್ತು ಆತಂಕಕಾರಿಯಾದ ಕಾರಣ” ತುರ್ತಾಗಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಕ್ಷವನ್ನು ಕೇಳಿಕೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ