Narendra Modi Birthday: ಪ್ರಧಾನಿ ಮೋದಿ ಹುಟ್ಟಿದ ಹಬ್ಬ ಯಾವಾಗ ಮತ್ತು ಅವರು ಆಚರಿಸಿಕೊಂಡು ಬಂದ ಪರಿ

| Updated By: ವಿವೇಕ ಬಿರಾದಾರ

Updated on: Sep 14, 2022 | 10:12 PM

ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿವಾಗಿದ್ದು, ಮೋದಿ 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

Narendra Modi Birthday: ಪ್ರಧಾನಿ ಮೋದಿ ಹುಟ್ಟಿದ ಹಬ್ಬ ಯಾವಾಗ ಮತ್ತು ಅವರು ಆಚರಿಸಿಕೊಂಡು ಬಂದ ಪರಿ
ನರೇಂದ್ರ ಮೋದಿ
Follow us on

ನವದೆಹಲಿ: ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಜನ್ಮದಿವಾಗಿದ್ದು, ಮೋದಿ 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿಯವರು 17 ಸೆಪ್ಟೆಂಬರ್ 1950ರಲ್ಲಿ ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ವಡ್​ನಗರದಲ್ಲಿ ಜನಿಸಿದರು. ಇವರ ತಂದೆ ದಾಮೋದರದಾಸ್ ಮುಲ್‌ಚಂದ್ ಮೋದಿ, ತಾಯಿ ಹೀರಾಬೆನ್ ಮೋದಿ. ದಾಮೋದರದಾಸ್ ಮುಲ್‌ಚಂದ್ ಮೋದಿ ಮತ್ತು ಹೀರಾಬೆನ್ ಮೋದಿ ದಂಪತಿಗೆ 6 ಮಕ್ಕಳು ಇವರಲ್ಲಿ ನರೇಂದ್ರ ಮೋದಿ 3ನೇದವರು.

ಪ್ರಧಾನಿ ಮೋದಿ ಅವರು ಬಾಲ್ಯದಲ್ಲಿ ವಡ್​ನಗರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ, ತಮ್ಮ ತಂದೆಯ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮೋದಿ ಅವರು 8 ವರ್ಷದವರಿದ್ದಾಗ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಗೆ ಸೇರಿದರು.

ಮೋದಿ 1967ರಲ್ಲಿ ವಡನಗರದಲ್ಲಿ ಪಿಯುಸಿ ವ್ಯಾಸಾಂಗ ಮುಗಿಸಿಕೊಂಡರು. 1978 ರಲ್ಲಿ ಮೋದಿ ಸ್ಕೂಲ್ ಆಫ್ ಓಪನ್ ಲರ್ನಿಂಗ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಆರ್‌ಎಸ್‌ಎಸ್​ನ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಅವರು, ಆರ್‌ಎಸ್‌ಎಸ್​ನ ಪ್ರಚಾರಕರಾಗಿ ಸೇವೆಸಲ್ಲಿಸಿದರು. ಮುಂದೆ 1980ರಲ್ಲಿ ಗುಜರಾತ್ ಬಿಜೆಪಿ ಘಟಕದಲ್ಲಿ ಗುರುತಿಸಿಕೊಂಡರು.

ಮುಂದೆ ಅವರ ರಾಜಕೀಯ ಜೀವನ ಬೆಳೆಯುತ್ತಾ ಸಾಗಿ 2001ರಲ್ಲಿ ಗುಜರಾತ ಮುಖ್ಯಮಂತ್ರಿಯಾದರು. ಸತತ 13 ವರ್ಷಗಳ ಕಾಲ ಗುಜರಾತ ಮುಖ್ಯಮಂತ್ರಿಯಾಗಿದ್ದರು. 2001 ರಿಂದ 2014ರ ವರೆಗೆ. 2014ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದರು. 2014ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಬಹುಮತದೊಂದಿಗೆ ಗೆದ್ದು ಪ್ರಧಾನಿ ಹುದ್ದೆ ಅಲಂಕರಿಸಿದರು. ಮತ್ತೆ 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆದ್ದು ಎರಡನೇ ಬಾರಿಗೆ ಪ್ರಧಾನಿ ಗದ್ದಗೆ ಹಿಡದಿದ್ದಾರೆ.

ಪ್ರಧಾನಿ ಮೋದಿ ಅವರು ಪ್ರತಿ ಭಾರಿ ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಾರೆ. ಪ್ರಧಾನಿಯಾದ ನಂತರ ಅವರು ಆಚರಿಸಿಕೊಂಡದ್ದು ಹೇಗೆ

1. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ 64ನೇ ವರ್ಷದ ಹುಟ್ಟು ಹಬ್ಬವನ್ನು ತವರು ರಾಜ್ಯ ಗುಜರಾತ್‌ನಲ್ಲಿ ಆಚರಿಸಿಕೊಂಡರು. ಗಾಂಧಿನಗರದಲ್ಲಿರುವ ತಮ್ಮ ನಿವಾಸದಲ್ಲಿ, ತಾಯಿಯ ಆಶೀರ್ವಾದ ಪಡೆದರು. ಅಲ್ಲದೇ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಭಾರತಕ್ಕೆ ಆಹ್ವಾನ ನೀಡಿದ್ದರು. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸಬರಮತಿ ಆಶ್ರಮ ಮತ್ತು ಸಬರಮತಿ ನದಿಯ ಮುಂಭಾಗಕ್ಕೆ ಭೇಟಿ ನೀಡಿದ್ದರು.

2. 2015ರಲ್ಲಿ ತಮ್ಮ ಜನ್ಮದಿನದಂದು 1965 ರ ಇಂಡೋ-ಪಾಕ್ ಯುದ್ಧದ ಸುವರ್ಣ ಮಹೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ, ಆರು ದಿನಗಳ ಮಿಲಿಟರಿ ಪ್ರದರ್ಶನ ‘ಶೌರ್ಯಾಂಜಲಿ’ಗೆ ಭೇಟಿ ನೀಡಿದ್ದರು.

3. 2016ರಲ್ಲಿ ಪ್ರಧಾನಿ ಮೋದಿ ತಮ್ಮ 66 ನೇ ಹುಟ್ಟುಹಬ್ಬದಂದು ಗುಜರಾತಗೆ ತೆರಳಿ ತಾಯಿಯ ಆಶೀರ್ವಾದ ಪಡೆದರು. ನಂತರ ನವಸಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

4. 2017ರಲ್ಲಿ ತಮ್ಮ 67 ನೇ ಹುಟ್ಟುಹಬ್ಬದಂದು ಪ್ರಧಾನಿ ಮೋದಿ ಅವರು ಗಾಂಧಿನಗರದಲ್ಲಿ ತಮ್ಮ ತಾಯಿಯ ಆಶೀರ್ವಾದ ಪಡೆದರು. ನಂತರ ಅವರು ಕೆವಾಡಿಯಾದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟನ್ನು ಉದ್ಘಾಟಿಸಿದರು.

5. 2018ರಲ್ಲಿ ಪ್ರಧಾನಿ ಮೋದಿ ತಮ್ಮ 68ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಶಾಲಾ ಮಕ್ಕಳೊಂದಿಗೆ ಆಚರಿಸಿಕೊಂಡರು. ಶಾಲೆಯ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್, ಸ್ಟೇಷನರಿ, ಸ್ಕೂಲ್ ಬ್ಯಾಗ್, ನೋಟ್ ಬುಕ್ ಉಡುಗೊರೆಯಾಗಿ ನೀಡಿದರು. ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳೊಂದಿಗೆ ಕಳೆದ ನಂತರ, ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

6. 2019ರಲ್ಲಿ ಪ್ರಧಾನಿ ಮೋದಿ 69ನೇ ಹುಟ್ಟುಹಬ್ಬದಂದು ಏಕತಾ ಪ್ರತಿಮೆ ಮತ್ತು ಸರ್ದಾರ್ ಸರೋವರ್ ಅಣೆಕಟ್ಟಿಗೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

7. 2020ರಲ್ಲಿ ಕರೊನಾ ಸಾಂಕ್ರಾಮಿಕ ರೋಗದ ಕಾರಣ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.

8. 2021ರಲ್ಲಿ, ಪ್ರಧಾನಮಂತ್ರಿಯವರು ಶಾಂಘೈ ಸಹಕಾರ ಸಂಸ್ಥೆಯ (SCO) ಕೌನ್ಸಿಲ್ ಆಫ್ ಸ್ಟೇಟ್​ನ​ 21ನೇ ಸಭೆಯಲ್ಲಿ ಮತ್ತು ಅಫ್ಘಾನಿಸ್ತಾನದ ಜಂಟಿ SCO-CSTO ಔಟ್ರೀಚ್ ಸಭೆಯಲ್ಲಿ ವೀಡಿಯೊ ಕಾನ್ಫರೆನ್ಸ್​​ ಮೂಲಕ ಭಾಗವಹಿಸಿದರು.

Published On - 10:12 pm, Wed, 14 September 22